ವೈವಾಹಿಕ ಜೀವನದಲ್ಲಿ ಎಡರುತೊಡರುಗಳು ಸಾಮಾನ್ಯ: ಶ್ರೀ ರಾಜಶೇಖರಾನಂದ ಸ್ವಾಮೀಜಿ
Team Udayavani, May 6, 2019, 6:41 AM IST
ಗುರುಪುರ: ವೈವಾಹಿಕ ಜೀವನ ಎಂದಾಗ ಅನೇಕ ಎಡರುತೊಡರುಗಳು ಬರುವುದು ಸಾಮಾನ್ಯ. ಆದರೆ ಐವತ್ತು ವರ್ಷಗಳ ಕಾಲ ಗಂಡ- ಹೆಂಡತಿ ಯಾವ ರೀತಿ ಆದರ್ಶ ಜೀವನ ನಡೆಸಿದ್ದಾರೆ ಎನ್ನುವುದಕ್ಕೆ ಎಂ. ನರಸಿಂಗ ರೈ ಹಾಗೂ ಭಾರತ್ ಜ್ಯೋತಿ ರೈ ಸಾಕ್ಷಿಯಾಗಿದ್ದು, ಇಂದಿನ ಪೀಳಿಗೆಗೆ ಅವರು ಮಾದರಿಯಾಗಿದ್ದಾರೆ. ಇವರ ವೈವಾಹಿಕ ಜೀವನ ಇನ್ನಷ್ಟು ಚೆನ್ನಾಗಿರಲಿ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾರೈಸಿದರು.
ಅವರು ಮುಂಡಬೆಟ್ಟುಗುತ್ತು ನರಸಿಂಹ ರೈ ಕಿನ್ನಿಕಂಬಳ ದಂಪ ತಿಯ ವಿವಾಹ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಜನ ಮಂದಿರದಲ್ಲಿ ರವಿ ವಾರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇಂದಿನ ಪೀಳಿಗೆಯ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದು ಖೇದಕರ. ದಾಂಪತ್ಯದ ಗುಟ್ಟೇನೆಂದರೆ ಭಯ ಹಾಗೂ ಉಭಯ ಕುಶಲೋಪರಿ. ಆದರೆ ನಾವು ಸನ್ಯಾಸ ಜೀವನದಲ್ಲಿದ್ದೇವೆ. ಸನ್ಯಾಸಿಗಳು ದಾಂಪತ್ಯದ ಬಗ್ಗೆ ಮಾತಾಡಿದರೆ ಅರ್ಥ ಬರುವುದಿಲ್ಲ. ಆದರೆ ಸನ್ಯಾಸಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಇದೆ ಎಂದರು.
ವಿಜ್ಞಾನಿ, ನಾಡೋಜ ಪ್ರೊ| ಕಿನ್ನಿಕಂಬಳ ಪದ್ಮನಾಭ ರಾವ್ ಮಾತನಾಡಿ, ನರಸಿಂಹ ರೈ ಅವರ ಜೀವನದ ಮಜಲುಗಳ ಬಗ್ಗೆ ವಿವರಿಸಿ, ಅವರ ತಂದೆ ದೇಜು ರೈ ಬಗ್ಗೆ ಮಾಹಿತಿ ನೀಡಿದರು.
ವೈದ್ಯರಾದ ಡಾ| ಶ್ರೀಪತಿ ಕಿನ್ನಿಕಂಬಳ ಅವರು ಅಭಿನಂದನಾ ಭಾಷಣ ಮಾಡಿದರು. ದಂಪತಿ ಪುತ್ರ ನೀರಜ್ ಹಾಗೂ ಪುತ್ರಿ ನಿಖೀತಾ ಅವರು ತನ್ನ ಹೆತ್ತವರಿಗೆ ಹಾರ ಹಾಕಿ ಪಾದಕ್ಕೆ ನಮಸ್ಕರಿಸಿದರು.
ಕಾ ರ್ಯಕ್ರಮದಲ್ಲಿ ಕಿನ್ನಿಕಂಬಳ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶತಾಯುಷಿ ಎಂ. ಆನಂದ ಆಳ್ವ ಮಿಜಾರುಗುತ್ತು, ಮಂಡಬೆಟ್ಟುಗುತ್ತು ಯಜಮಾನರು ಎಂ. ಗಂಗಾಧರ ರೈ ಮುಂತಾದವರು ಉಪಸ್ಥಿತರಿದ್ದರು.
ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹರಿನಾಮ ಸಂಕೀರ್ತನೆ, ಆರಾಧನೆ, ಪ್ರಸಾದ ವಿತರಣೆ, ಪುಸ್ತಕ ಬಿಡುಗಡೆ ಸಮಾರಂಭ, ಸಹಭೋಜನ, ಶ್ರೀವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಕೇಂದ್ರ ಮಂಜನಾಡಿ ಇದರ ಬಾಲಕಲಾವಿದರಿಂದ “ಮೈಮೆದ ಬಾಲೆ ಸಿರಿಕೃಷ್ಣ’ ಯಕ್ಷಗಾನ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.