ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ


Team Udayavani, May 6, 2019, 3:02 AM IST

anche-kun

ಬೆಳ್ತಂಗಡಿ: ಮೌಲ್ಯಾಧಾರಿತ ಗ್ರಂಥಗಳ ಪ್ರಕಟನೆ ಮತ್ತು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದರಿಂದ ನಮ್ಮ ಸಂಸ್ಕೃತಿಯೆಡೆಗಿನ ಒಲವು ಮರೆಯಾಗುತ್ತಿದೆ. ಮೂಲ ಭಾಷೆ ಶ್ರೀಮಂತಗೊಂಡಲ್ಲಿ ನಮ್ಮ ಸಂಸ್ಕೃತಿ ಅಜರಾಮರವಾಗಿರಲು ಸಾಧ್ಯ ಎಂದು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ಧರ್ಮಸ್ಥಳದಲ್ಲಿ ಭಾನುವಾರ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಲಾದ 17ನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.

ದೇಶದಲ್ಲಿರುವ ಭಾಷೆಯ ವಿಶೇಷತೆ, ಅವುಗಳಲ್ಲಿ ಅಡಕವಾಗಿರುವ ಸಂಪ್ರದಾಯಗಳು ಜೀವನ ಪದ್ಧತಿಯಲ್ಲಿ ಏಕತೆಯನ್ನು ಕಂಡುಕೊಂಡಿವೆ. ಪ್ರಪಂಚದಲ್ಲಿರುವ 6 ಸಾವಿರ ಭಾಷೆಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಭಾರತದಲ್ಲಿವೆ. ಗ್ರಾಮೀಣ ಪ್ರದೇಶದ ಜನರು ಶುದ್ಧಕನ್ನಡ ಮಾತನಾಡುತ್ತಾರೆ. ಯಕ್ಷಗಾನ ಮತ್ತು ಜನಪದ ಸಾಹಿತ್ಯದಲ್ಲಿ ಭಾಷೆಯ ಸೊಗಡು ಜತೆಗೆ ಭಾಷಾ ಪ್ರೌಢಿಮೆ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಜೈನರ ಕೊಡುಗೆಯನ್ನು ಶ್ಲಾಘಿಸಿದ ಅವರು, ಹೃದಯ ಶ್ರೀಮಂತಿಕೆ, ಭಾಷಾ ಶ್ರೀಮಂತಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾಷೆ ನಾಶವಾದರೆ, ಸಂಸ್ಕೃತಿಯೂ ನಾಶವಾದಂತೆೆ. ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸೃಜನಾತ್ಮಕ ಮತ್ತು ವಾಸ್ತವಿಕ ಕಲೆ ಎಲ್ಲರಲ್ಲೂ ಇರುವಂತಹದು. ಅದನ್ನು ಕಲ್ಪನೆಯಿಂದ ವಿಸ್ತರಿಸುವುದರಿಂದ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕಲೆಗೆ ಪ್ರಚಂಡ ಶಕ್ತಿಯಿದೆ. ಮಾರಾಟಕ್ಕಾಗಿ ಕಲೆಯನ್ನು ಪ್ರೀತಿಸದೆ ಭಾವನೆ ವ್ಯಕ್ತಪಡಿಸಲು, ಆನಂದ ಪ್ರಕಟಗೊಳಿಸಲು ಪ್ರೀತಿಸಿ ಎಂದು ಸಲಹೆ ನೀಡಿದರು.

ಅಂಚೆ-ಕುಂಚ ಸ್ಪರ್ಧೆ ವಿಜೇತರು
* ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ: ಶಶಾಂಕ ಕೋಲ್ಕಾರ್‌, ರಾಯಚೂರು ಜಾಲಹಳ್ಳಿಯ ಡಾರ್ವಿನ್‌ ಹಿ.ಪ್ರಾ.ಶಾಲೆ. ದ್ವಿತೀಯ: ಗಗನ್‌ ಎ.ವಿ., ಪಾಣೆಮಂಗಳೂರು ಎಸ್‌.ಎಲ್‌.ಎನ್‌.ಪಿ. ವಿದ್ಯಾಲಯ. ತೃತೀಯ: ಅನ್ವಿತ್‌ ಎಚ್‌., ಮಂಗಳೂರು ಉರ್ವ ಕೆನರಾ ಹಿ.ಪ್ರಾ. ಶಾಲೆ.

* ಪ್ರೌಢ ಶಾಲೆ ವಿಭಾಗ: ಪ್ರಥಮ: ಅಖೀಲೇಶ ನಾಗೇಶ ನಾಯ್ಕ, ಕಾರವಾರ ಸೈಂಟ್‌ ಜೋಸೆಫ್‌ ಪ್ರೌಢ ಶಾಲೆ. ದ್ವಿತೀಯ: ಆದರ್ಶ್‌ ನಾರಾಯಣನ್‌, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌. ತೃತೀಯ: ಪ್ರತೀಕ್ಷಾ ಮರಕಿಣಿ, ಬೆಂಗಳೂರು ಸದಾಶಿವನಗರ ಪೂರ್ಣಪ್ರಜ್ಞ ಪ್ರೌಢ ಶಾಲೆ.

* ಕಾಲೇಜು ವಿಭಾಗ: ಪ್ರಥಮ: ಅನನ್ಯಾ ದೀಪಕ್‌ ನಾಯ್ಕ, ಕಾರವಾರ ಸ.ಪ.ಪೂ. ಕಾಲೇಜು, ದ್ವಿತೀಯ: ಅವಿನಾಶ್‌ ಜಿ. ಪೈ., ಬೆಂಗಳೂರು ಸೌತ್‌ ಕ್ಯಾಂಪಸ್‌ ಕಾಲೇಜು. ತೃತೀಯ: ರತನ್‌, ಬೈಂದೂರು ಸ.ಪ.ಪೂ. ಕಾಲೇಜು ಉಪ್ಪುಂದ.

* ಸಾರ್ವಜನಿಕ ವಿಭಾಗ: ಪ್ರಥಮ: ದಿನೇಶ ದೇವರಾಯ ಮೇತ್ರಿ, ಅಂಕೋಲಾದ ಆವರ್ಸೆ, ದ್ವಿತೀಯ: ವಿಶ್ವೇಶ್ವರ ಎಂ. ಪಟಗಾರ, ತಲಗೋಡ್‌-ಊರಕೇರಿ, ಕುಮಟಾ, ತೃತೀಯ: ಬಿ.ಕೆ. ಮಾಧವ ರಾವ್‌, ಮಂಗಳೂರು ಕೊಂಚಾಡಿ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.