ಗೃಹರಕ್ಷಕ ದಳ ಸಭೆ: ಪ್ರವಾಹ ರಕ್ಷಣ ತಂಡದ ರಚನೆ
3 ತಿಂಗಳಿಗೊಮ್ಮೆ ಕಡ್ಡಾಯ ಬದಲಾವಣೆ: ಜಿಲ್ಲಾ ಕಮಾಂಡೆಂಟ್ ಡಾ| ಮೋಹನ್ ಚೂಂತಾರು
Team Udayavani, May 6, 2019, 6:24 AM IST
ಉಪ್ಪಿನಂಗಡಿ: ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ| ಮುರಳೀ ಮೋಹನ್ ಚೂಂತಾರು ಅವರು ರವಿವಾರ ಭೇಟಿ ನೀಡಿ ಸಭೆ ನಡೆಸಿ ಕವಾಯತು ವೀಕ್ಷಣೆ ಹಾಗೂ ಪ್ರವಾಹ ರಕ್ಷಣ ತಂಡದ ರಚನೆಯನ್ನು ಮಾಡಿದರು.
ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ವಠಾರದಲ್ಲಿನ ಗೃಹರಕ್ಷಕ ಕಚೇರಿಯಲ್ಲಿ ಗೃಹರಕ್ಷಕ ಸಿಬಂದಿಗಳೊಂದಿಗೆ ಕುಂದುಕೊರತೆಗಳ ಸಭೆ ನಡೆಸಿದ ಅವರು, ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಸಿಬಂದಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಕರ್ತವ್ಯ ನಿರ್ವಹಣ ಆದೇಶವನ್ನು ಪಡೆದು ಕರ್ತವ್ಯದಿಂದ ವಿಮುಖರಾಗಿದ್ದ 2 ಗೃಹರಕ್ಷಕ ಸಿಬಂದಿಯನ್ನು ಅಮಾನತು ಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.
ಹೊಸತನಕ್ಕೂ ಅವಕಾಶ
ಇನ್ನು ಮುಂದೆ ಪೊಲೀಸ್ ಇಲಾಖೆಯೂ ಸೇರಿದಂತೆ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ತಲಾ 3 ತಿಂಗಳಿಗೊಮ್ಮೆ ಕಡ್ಡಾಯ ಬದಲಾವಣೆಯ ನೀತಿಯನ್ನು ಜಾರಿಗೊಳಿಸಲಾಗುವುದು. ಇದರಿಂದ ಗೃಹರಕ್ಷಕರಿಗೆ ಎಲ್ಲ ಇಲಾಖೆಗಳ ಕರ್ತವ್ಯವನ್ನು ಕಲಿಯಲು ಅವಕಾಶ ಲಭಿಸುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹೊಸತನಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಉಪ್ಪಿನಂಗಡಿ ಮಾದರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ ಮೊದಲಾದವರು ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣ ಸಾಮಗ್ರಿ ಪರಿಶೀಲನೆ
ಮುಂಬರುವ ಮಳೆಗಾಲದಲ್ಲಿ ಪ್ರವಾಹ ಸಂಬಂಧಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದಲ್ಲಿ ಪ್ರವಾಹ ರಕ್ಷಣ ತಂಡವನ್ನು ರಚಿಸಲಾಯಿತು. ವಿಪತ್ತು ನಿರ್ವಹಣ ಸಾಮಗ್ರಿಗಳನ್ನು ಪರಿಶೀಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.