ರಜೆಯ ಮಜಾ: ನೀರಿನಾಟದಲ್ಲಿ ಇರಲಿ ಎಚ್ಚರ
ಈಜು ಬರುವುದೆಂದುಕೊಂಡು ಅಪಾಯ ಆಹ್ವಾನಿಸಿಕೊಳ್ಳಬೇಡಿ
Team Udayavani, May 6, 2019, 6:13 AM IST
ಸವಣೂರು: ಬೇಸಗೆಯ ಬಿಸಿ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ತಂಪಾಗಲು ನದಿಗಳಲ್ಲಿ ಈಜಾಡುವ ದೃಶ್ಯ ಗಳು ನದಿಯಲ್ಲಿ ಕಾಣಸಿಗುತ್ತಿದೆ. ಹೆಚ್ಚಿನ ಎಲ್ಲ ಕೆರೆ, ಕೊಳ್ಳಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿದೆ. ಇದರಿಂದಾಗಿ ನದಿಯಲ್ಲಿ ಈಜಾಡುವವರ ಸಂಖ್ಯೆ ಹೆಚ್ಚಳವಾಗಿದೆ. ನದಿ ನೀರು ಆಕರ್ಷಿಸುತ್ತಿವೆ. ನೀರು ಹರಿಯುತ್ತಿರುವುದು ಕಣ್ಮನ ಸೆಳೆಯುವುದರ ಜತೆಗೆ ಅನಾಹುತಕ್ಕೂ ಆಹ್ವಾನ ನೀಡುತ್ತದೆ.
ಈಜು ತರುವ ಅಪಾಯ
ಗ್ರಾಮೀಣ ಪ್ರದೇಶದ ಅಪ್ರಾಪ್ತ ಮಕ್ಕಳು, ಯುವಕರು ಈಜಲು ಹಾಗೂ ಈಜು ಕಲಿಯಲು ನದಿಗಳತ್ತ ತೆರಳುತ್ತಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದೆ ಈಜು ಬಾರದವರು ಜತೆಗಾರರಿಂದ ಪ್ರೇರಣೆಗೊಂಡು ನೀರಿಗೆ ಧುಮುಕುತ್ತಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.
ಈಜು ಬಂದರೂ ಆಪತ್ತು
ಈ ಸಮಯದಲ್ಲಿ ನದಿಗಳಲ್ಲಿ ನೀರಿರುವು ದರಿಂದ ಹೆಚ್ಚಿನ ಜನರು ನದಿ ಕಡೆಗಳಿಗೆ ಬರುತ್ತಿದ್ದಾರೆ. ನದಿಯ ಮಧ್ಯದಲ್ಲಿ ಕೆಸರು ಗುಂಡಿ ಸಿಗುತ್ತಿವೆ. ಹೀಗಾಗಿ ಈಜು ತಿಳಿದವರೂ ಕೆಸರಿನಲ್ಲಿ ಕಾಲು ಸಿಕ್ಕಿಸಿಕೊಂಡು ಅಪಾಯ ಎದುರಿಸುತ್ತಿದ್ದಾರೆ. ಕೆಲವೆಡೆ ನದಿಯ ಆಳವೂ ಹೆಚ್ಚಾಗಿದ್ದು, ಅದು ತಿಳಿ ಯದೇ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ನೀರಿನಾಟದಿಂದ ಹಲವೆಡೆ ಜೀವಕ್ಕೆ ಅಪಾಯವಾದ ಘಟನೆ ನಡೆದಿದ್ದು, ನದಿಗಳಿಗೆ ಈಜಲು ತೆರಳುವವರು ಜಾಗ್ರತೆ ವಹಿಸಬೇಕಿದೆ. ಪೋಷಕರು ಮಕ್ಕಳ ನೀರಿನಾಟದ ಬಗ್ಗೆ ಸಾಧ್ಯವಾದಷ್ಟು ನಿಗಾ ವಹಿಸಬೇಕಿದ್ದು, ಅನಾಹುತ ಸಂಭವಿಸುವುದಕ್ಕೂ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ.
ಈಜುವಿರಾ ಹೀಗೆ ಮಾಡಿ
– ಉತ್ತಮ ಈಜು ಬಲ್ಲವರನ್ನು ಮೊದಲು ನೀರಿಗಿಳಿಸಿ ಆಳ ತಿಳಿಯಿರಿ.
– ಈಜಲು ತೆರಳುವ ಮುನ್ನ ಮನೆಯವರಿಗೆ ಮಾಹಿತಿ ನೀಡಿ.
– ಮಕ್ಕಳನ್ನು ನದಿ ತಟಕ್ಕೆ ಕರೆದೊಯ್ಯುವ ವೇಳೆ ಜಾಗ್ರತೆ ವಹಿಸಿ.
– ಈಜು ಬಾರದವರನ್ನು ಬಲವಂತವಾಗಿ ನೀರಿಗೆ ಇಳಿಸದಿರಿ.
– ಈಜು ಕಲಿಸುವಾಗ ಅವರ ಎತ್ತರಕ್ಕಿಂತ ಆಳಕ್ಕೆ ಕರೆದೊಯ್ಯದಿರಿ.
– ಪೋಷಕರ ಕಣ್ಣು ತಪ್ಪಿಸಿ ನೀರಿಗೆ ಮಕ್ಕಳು ಇಳಿಯಬಾರದು.
– ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.