22 ಅಧ್ಯಕ್ಷರು; 11 ಆಡಳಿತಾಧಿಕಾರಿ ಕಂಡ ಸುಳ್ಯ ನಗರಾಡಳಿತ ಸಂಸ್ಥೆ

ಪುರಸಭೆಗೆ ಮುಂಭಡ್ತಿ; ಮಂಡಲ ಪಂಚಾಯತ್‌ಗೆ ಹಿಂಭಡ್ತಿ!

Team Udayavani, May 6, 2019, 6:00 AM IST

SLKP

ಸುಳ್ಯ: ಬರೋಬ್ಬರಿ 89 ವರ್ಷಗಳ ಇತಿಹಾಸ ಇರುವ ಸುಳ್ಯದ ನಗರಡಾಳಿತ ಸಂಸ್ಥೆ ಪುರಸಭೆಯಾದ ಬಳಿಕ ಮತ್ತೆ ನಗರ ಪಂಚಾಯತ್‌ಗೆ ಹಿಂಭಡ್ತಿ ಪಡೆದ ಇತಿಹಾಸವನ್ನು ಹೊಂದಿದೆ.

ಕೆಲ ವರ್ಷಗಳಿಂದ ನಗರ ಪಂಚಾ ಯತ್‌ ಅನ್ನು ಪುರಸಭೆಯನ್ನಾಗಿ ಮೇಲ್ದ ರ್ಜೆಗೆ ಏರಿಸಬೇಕು ಎನ್ನುವ ಬೇಡಿಕೆ ಪ್ರಬಲವಾಗಿ ಕೇಳಿ ಬಂದಿದೆ. ಹಲವು ಮನವಿಗಳು, ಪ್ರಸ್ತಾವನೆಗಳು ಸರಕಾರಕ್ಕೆ ಸಲ್ಲಿಕೆ ಆಗಿದೆ. ನಿಯಮಾನುಸಾರ ಅರ್ಹತೆ ಇದ್ದರೂ, ಅವಕಾಶ ಸಿಕ್ಕಿಲ್ಲ. ಈ ಬಾರಿಯ ಚುನಾವಣೆಯ ಸಂದರ್ಭ ದಲ್ಲಿಯೂ ಈ ವಿಚಾರ ಮತ್ತೆ ಜೀವ ಪಡೆದುಕೊಂಡಿದೆ.

ಮುಂಭಡ್ತಿ ಪಡೆದು
ಹಿಂಭಡ್ತಿಗೆ ಇಳಿಯಿತು
1930ರಿಂದ ಅಸ್ತಿತ್ವದಲ್ಲಿರುವ ಸುಳ್ಯ ನಗರ ಆಡಳಿತ 1979ರಿಂದ 1995ರ ತನಕ ಸುಮಾರು 16 ವರ್ಷಗಳ ಕಾಲ ಪುರಸಭೆಯಾಗಿ ಕಾರ್ಯನಿರ್ವಹಿಸಿತ್ತು. ಈ ವೇಳೆ ಜನಸಂಖ್ಯೆ ಆಧರಿತ ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಹೊಸ ಆ್ಯಕ್ಟ್ ಜಾರಿಗೆ ಬಂತು. ಇದರ ನಿಯಮಾನುಸಾರ ಸುಳ್ಯ ಪುರಸಭೆಯು ಮಂಡಲ ಪಂಚಾಯತ್‌ ಆಗಿ ಹಿಂಭಡ್ತಿ ಪಡೆಯಿತು. ಮಂಡಲ ಪಂಚಾಯತ್‌ ಅವಧಿಯಲ್ಲಿ ಮತ್ತೆ ನಗರ ಪಂಚಾಯತ್‌ ಆಗಿ ಮುಂಭಡ್ತಿಯನ್ನೂ ಪಡೆಯಿತು. ಆದರೆ ಮತ್ತೆ ಪುರಸಭೆಯಾಗುವ ಅವಕಾಶ ಇನ್ನೂ ದೊರೆತಿಲ್ಲ.

ಅಧ್ಯಕ್ಷರು, ಆಡಳಿತಾಧಿಕಾರಿಗಳ ಪಟ್ಟಿ ಹೀಗಿದೆ:
ಮಂಡಲ ಪಂಚಾಯತ್‌, ಗ್ರಾಮ ಪಂಚಾಯತ್‌, ಪುರಸಭೆ, ನಗರ ಪಂಚಾಯತ್‌ ಆಗಿ ಕಳೆದ 89 ವರ್ಷಗಳ ಹೊಸ್ತಿಲಿನಲ್ಲಿರುವ ನಗರ ಆಡಳಿತ ಈ ತನಕ 22 ಅಧ್ಯಕ್ಷರನ್ನು, 11 ಆಡಳಿತಾಧಿಕಾರಿಗಳನ್ನು ಕಂಡಿದೆ. ಅಧ್ಯಕ್ಷರುಗಳಾಗಿ ಐತ್ತಪ್ಪ ರೈ (1930-1934), ಯು.ಶಿವರಾಮ (1934 -44), ಶೇಷಪ್ಪಯ್ಯ (1944-53), ಡಿ. ಸುಬ್ಬಣ್ಣ ಗೌಡ (1953-58), ಬಿ. ಜನಾರ್ದನ ನಾಯಕ್‌ ( 1958-60), ಮಹಾಲಿಂಗೇಶ್ವರ ಭಟ್‌ (1960-79), ಕೆ.ಎಂ. ವೆಂಕಟರಮಣ ಸುಳ್ಯ (1979-83), ಎಂ. ಬಾಲಕೃಷ್ಣ ಗೌಡ (1984-92), ಕೆ.ಸಿ. ಸದಾನಂದ (1992-93), ಎಂ. ಸಂಶುದ್ದೀನ್‌ (13-9-1993ರಿಂದ 19-10-1993), ಎಂ. ವೆಂಕಟರಮಣ ಭಟ್‌ (1993-95), ಆಶಾ ತಿಮ್ಮಪ್ಪ (1997-99), ಶೋಭಾ ಚಿದಾನಂದ (1999-2001), ಎಂ. ವೆಂಕಪ್ಪ ಗೌಡ (2002-2003), ಡಿ. ಮೀನಾಕ್ಷಿ ( 2003 ಪ್ರಭಾರ), ಸಂಶುದ್ದೀನ್‌ (2003-2004), ಸುಂದರಿ ಕೆ. (2004-2008), ಎನ್‌.ಎ. ರಾಮಚಂದ್ರ (2008-2010), ಜಿ. ಸುಮತಿ (2010), ಎನ್‌.ಎ. ರಾಮಚಂದ್ರ (2014-2015), ಪ್ರಕಾಶ್‌ ಹೆಗ್ಡೆ (2015-2017), ಶೀಲಾವತಿ ಮಾಧವ (2017-2019) ಹಾಗೂ ಆಡಳಿತಾಧಿಕಾರಿಗಳಾಗಿ ರಂಗ ನಾಯಕ್‌ (1995-96), ಡಾ| ಎಸ್‌. ಜಯಣ್ಣ (6-2-1996ರಿಂದ 22-2-1996), ಡಾ| ಸೋಮಶೇಖರ ರೈ (1-03-1996ರಿಂದ 11-11-1996), ಚೋಮ ಎನ್‌. (2001-02), ಆಶೋಕ ಜಿ. ( 2004), ಸುಂದರ ಭಟ್‌ (2008), ಎಚ್‌.ಜಿ. ವೈದ್ಯನಾಥ್‌, ಟಿ.ಎನ್‌. ವೇಣುಗೋಪಾಲ, ಔದ್ರಾಮ, ಅಹ್ಮದ್‌ ಕುಂಞ.

ನನಸಾಗಲಿ ಪುರಸಭೆಯ ಕನಸು
ನಗರ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೇರಲು 20 ಸಾವಿರ ಜನಸಂಖ್ಯೆ ಅಗತ್ಯ. ಸುಳ್ಯ ನಗರ ಅದನ್ನು ದಾಟಿದೆ ಎನ್ನುತ್ತಿದೆ ಈಗಿನ ಜನಸಂಖ್ಯೆ ಅಂಕಿ ಅಂಶ. ಈ ಹಿಂದೆ ಆಲೆಟ್ಟಿ ಗ್ರಾಮದ ಅರಂಬೂರು, ಜಾಲೂÕರು ಗ್ರಾಮದ ಕುಕ್ಕುಂದೂರು ಪ್ರದೇಶವನ್ನು ನಗರಕ್ಕೆ ಸೇರಿಸಿ ಪುರಸಭೆ ಮಾಡುವ ಪ್ರಸ್ತಾವ ಸಲ್ಲಿಸಲಾಗಿತ್ತು. ಇಷ್ಟೆಲ್ಲ ಪ್ರಯತ್ನ ನಡೆದರೂ, ಸರಕಾರದ ಹಂತದಲ್ಲಿ ಒತ್ತಡ ಹೇರುವ ಕೆಲಸ ಚುರುಕು ಪಡೆದಿಲ್ಲ. ಈ ಬಾರಿಯಾದರೂ ಪುರಸಭೆಯ ಕನಸು ಈಡೇರಬಹುದೆ ಎನ್ನುವ ನಿರೀಕ್ಷೆ ಜನರಲ್ಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಒತ್ತಡ ತರಬೇಕಾಗಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

police-ban

Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

11

Puttur: ಬಸ್‌ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ

byndoor

Guttigaru: ಕಮರಿಗೆ ಉರುಳಿದ ಕಾರು; ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.