“ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ’
Team Udayavani, May 6, 2019, 6:20 AM IST
ಸುರತ್ಕಲ್: ಮುಕ್ಕದ ಶ್ರೀನಿವಾಸ್ ಯೂನಿವರ್ಸಿಟಿ ಹಾಗೂ ಶ್ಯಾಮ ರಾವ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸಿ ಎ ಎ. ರಾಘವೇಂದ್ರ ಹಾಗೂ ಎ. ವಿಜಯಲಕ್ಷಿ$¾à ಆರ್. ರಾವ್ ದಂಪತಿಯ ಸಹಸ್ರಪೂರ್ಣ ಚಂದ್ರೋದಯ, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಜೀವನದ 55ನೇ ವರ್ಷಾಚರಣೆ ಮತ್ತು ವೈವಾಹಿಕ ಜೀವನದ 55ನೇ ವಾರ್ಷಿಕೋತ್ಸವ ಸಮಾರಂಭವು ಮುಕ್ಕ ಶ್ರೀನಿವಾಸ ಯೂನಿವರ್ಸಿಟಿ ಕಾಲೇಜಿನಲ್ಲಿ ಶನಿವಾರ ಜರಗಿತು.
ರಾಘವೇಂದ್ರ ರಾವ್ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತರರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಎಲ್ಲ
ರೊಂದಿಗೆ ಬೆರೆತಾಗ ಮಾತ್ರ ನಮ್ಮ ಜೀವನ ರಸಮಯವಾಗಿರುತ್ತದೆ. ಯಶಸ್ಸು ಸಾಧಿಸಲು ಕೇವಲ ಕನಸು ಮಾತ್ರ ಸಾಲದು ಅದರೊಂದಿಗೆ ಪರಿಶ್ರಮ ಇದ್ದಾಗ
ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಯಶಸ್ಸಿನ ಮೆಟ್ಟಿಲನ್ನು ಹತ್ತುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಮಾ ರಾವ್, ಮ್ಯಾನೇಜ್‌ಮೆಂಟ್ ಆಫೀಸ್‌ನ ಜೆಸ್ಸಿ, ಮೆಡಿಕಲ್ ಕಾಲೇಜ್ ಡೀನ್ ಡಾ| ಉದಯ ಕುಮಾರ್, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ., ಡಾ| ಮನೋಜ್ ವರ್ಮ, ಡಾ| ಎ.ಆರ್. ಶಬರಾಯ, ಡಾ| ಅಣ್ಣಯ್ಯ ಕುಲಾಲ್, ಡಾ| ಉದಯ
ಕುಮಾರ್, ಡಾ| ಜಯಶ್ರೀ, ಶ್ರೀನಾಥ್ ರಾವ್ ಮುಕ್ಕ ಹಾಗೂ ಕಾಲೇಜು ಸಿಬಂದಿ ಉಪಸ್ಥಿತರಿದ್ದರು.
ಉಪಕುಲಪತಿ ಡಾ| ಪಿ.ಎಸ್. ಐತಾಳ ಸ್ವಾಗತಿಸಿ, ಡಾ| ಅಜಯ್ ಕೆ.ಜಿ. ವಂದಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.