ಭವನ ಇಡೀ ಸಮಾಜಕ್ಕೆ ಲಭಿಸಲಿ: ಮಾಲಾಡಿ
Team Udayavani, May 6, 2019, 6:15 AM IST
ಬಜಪೆ: ಬಂಟ ಸಮಾಜದವರು ಎಲ್ಲರ ಸುಖ-ಕಷ್ಟಗಳಿಗೆ ಸದಾ ಸ್ಪಂದಿಸುವವರು. ಎಲ್ಲರೊಂದಿಗೆ ಸಹಭಾಗಿಯಾಗಿ ನಾಯಕತ್ವ ಗುಣ ಬೆಳೆಸುವವರು. ಬಂಟರಲ್ಲಿ ಕೊಡುವ ಗುಣ ಇದೆ. ಇಲ್ಲಿ ನಿರ್ಮಾಣವಾಗಿರುವ ಭವನ ಬಂಟರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಉಪಯೋಗಕ್ಕೆ ಲಭಿಸಲಿ ಎಂದು ಬಂಟರ ಯಾನೆ ನಾಡವರ ಮಾತೃ ಸಂಘ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
ಎಕ್ಕಾರು ಬಂಟರ ಸಂಘದ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಎಕ್ಕಾರಿನಲ್ಲಿ ನಿರ್ಮಾಣಗೊಂಡ ಬಂಟರ ಭವನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಂಗವಾಗಿ ನಡೆದ ಬಂಟರ ದಿಬ್ಬಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಚಾಲನೆ ನೀಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ವೇ|ಮೂ| ವಾಸುದೇವ ಆಸ್ರಣ್ಣ ಹಾಗೂ ಎಕ್ಕಾರು ಶ್ರೀಕೃಷ್ಣ ಮಠದ ವೇ|ಮೂ| ಹರಿದಾಸ ಉಡುಪ ಶುಭಾಶಂಸನೆಗೈದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಕ್ಕಾರು ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾ ಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಎಕ್ಕಾರಿನಲ್ಲಿ ಸಭಾಂಗ ಣದ ಕೊರತೆಯನ್ನು ಬಂಟರ ಸಂಘ ನಿವಾರಿಸಿದೆ ಎಂದರು.
ಸಭಾಂಗಣವನ್ನು ಉದ್ಯಮಿ ಭಾಸ್ಕರ ಶೆಟ್ಟಿ ನಡೊÂàಡಿಗುತ್ತು, ಸಭಾ ವೇದಿಕೆವನ್ನು ಉದ್ಯಮಿ ಕೃಷ್ಣ ಡಿ. ಶೆಟ್ಟಿ, ಭೋಜನ ಶಾಲೆಯನ್ನು ಪ್ರಕಾಶ್ ಶೆಟ್ಟಿ, ಪಾಕಶಾಲೆಯನ್ನು ಕೃಷ್ಣ ಶೆಟ್ಟಿ, ಅಲಂಕಾರ ಕೊಠಡಿಯನ್ನು ಜಯ ಎಂ. ಶೆಟ್ಟಿ ದೊಡ್ಡಮನೆ ಮತ್ತು ಸುಜಾತಾ ಶಂಭು ಶೆಟ್ಟಿ ಮೇಲೆಕ್ಕಾರು ಅವರು ಉದ್ಘಾಟಿಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಎ. ಸದಾನಂದ ಶೆಟ್ಟಿ ಮಹಾದಾನಿಗಳನ್ನು ಗೌರವಿಸಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ವಿವೇಕ್ ಶೆಟ್ಟಿ ಬೊಲ್ಯಗುತ್ತು, ಸಂತೋಷ್ ಕುಮಾರ್ ಶೆಟ್ಟಿ, ಮಂಜುನಾಥ ಭಂಡಾರಿ ಶೆಡ್ಡೆ, ಡಾ| ಜಯರಾಮ್ ಶೆಟ್ಟಿ , ವಾದಿರಾಜ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಸುಧಾಕರ ಪೂಂಜ, ಸಂತೋಷ್ ಕುಮಾರ್ ಹೆಗ್ಡೆ, ಮೋನಪ್ಪ ಶೆಟ್ಟಿ ಎಕ್ಕಾರು, ನಿತಿನ್ ಹೆಗ್ಡೆ, ಅಶೋಕ್ ಶೆಟ್ಟಿ ದಾದರ್, ದೇವಿಪ್ರಸಾದ್ ಶೆಟ್ಟಿ ಬೆಳಪು, ನಿಶಾಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ತನ್ನ ಒಂದು ತಿಂಗಳ ಮಾಸಾಶನವನ್ನು ಸಂಘಕ್ಕೆ ನೀಡಿದರು. ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಪ್ರಸ್ತಾವನೆಗೈದು ಮಾಜಿ ಅಧ್ಯಕ್ಷ ದಿ| ಯಶೋಧರ ಶೆಟ್ಟಿ ಅವರ ಪ್ರಯತ್ನದಿಂದ ಈ ಕನಸು ನನಸಾಗಿದೆ ಎಂದರು. ದಯಾನಂದ ಮಾಡ ಹಾಗೂ ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ಉದ್ಯಮಿ ಭಾಸ್ಕರ ಶೆಟ್ಟಿ ನಡೊÂàಡಿಗುತ್ತು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಉದ್ಯಮಿ ಕೃಷ್ಣ ಡಿ. ಶೆಟ್ಟಿ, ಜಯ ಎಂ. ಶೆಟ್ಟಿ, ಸುಜಾತಾ ಶಂಭು ಶೆಟ್ಟಿ ಮೇಲೆಕ್ಕಾರು, ಭವನದ ಗುತ್ತಿಗೆದಾರ ಪ್ರದೀಪ್ ಕುಮಾರ್ ಶೆಟ್ಟಿ, ಎಲೆಕ್ಟ್ರೀಶಿಯನ್ ರಮೇಶ್ ಶೆಟ್ಟಿ, ಸುಂದರಿ ಶೆಟ್ಟಿ ಮಜಿಕರೆ, ಅಧ್ಯಕ್ಷ ರತ್ನಾಕರ ಶೆಟ್ಟಿ ಮತ್ತು ಲತಾ ಶೆಟ್ಟಿ, ಮಲ್ಲಿಕಾ ಯಶೋಧರ ಶೆಟ್ಟಿ, ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಮತ್ತು ಶೋಭ ಶೆಟ್ಟಿ ಹಾಗೂ ದೇಣಿಗೆ ನೀಡಿದ ಇತರರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.