ನಾಲ್ಕು ದಿನಕ್ಕೊಮ್ಮೆ ನೀರು
ಬರಿದಾದ ನಲ್ಲಾ ಚೇರು ಕೆರೆ •ಗುರುಮಠಕಲ್ ಜನರಿಗೆ ಕಲುಷಿತ ನೀರೇ ಗತಿ
Team Udayavani, May 6, 2019, 11:43 AM IST
ಗುರುಮಠಕಲ್: ಪಟ್ಟಣದಲ್ಲಿ ಕಟ್ಟೆಲಗೇರಿಯಲ್ಲಿ ನೀರಿನ ಟ್ಯಾಂಕ್ ಬಳಿ ನೀರಿಗಾಗಿ ಜನರು ಪರಿದಾಡುತ್ತಿರುವುದು
ಗುರುಮಠಕಲ್: ಕುಡಿಯುವ ನೀರಿನ ಬವಣೆ ತಪ್ಪಿಸಲು ನಡೆಸಿದ ಭಗೀರಥ ಪ್ರಯತ್ನ ವೈರ್ಥವಾದ ಕಾರಣ ಪ್ರಸ್ತುತ ನಾಲ್ಕು ದಿನಕ್ಕೊಮ್ಮೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜ ಆಗುತ್ತಿದೆ.
ಪಟ್ಟಣಕ್ಕೆ ನಲ್ಲಾ ಚೇರು ಕೆರೆಯಿಂದ ಈ ಹಿಂದೆ ಕುಡಿಯುವ ನೀರು ಪೂರೈಸಲಾಗುತಿತ್ತು. ಆದರೆ ಅಲ್ಲಿ ನೀರಿನ ಸಮಸ್ಯೆ ಎದುರಾದ್ದರಿಂದ 2008ರಲ್ಲಿ ಅಂದಿನ ಶಾಸಕ 32 ಕೋಟಿ ರೂ. ವೆಚ್ಚದಲ್ಲಿ ಯಾದಗಿರಿ ಭೀಮಾ ನದಿಯಿಂದ ಗುರುಮಠಕಲ್ಗೆ ನೀರು ತರುವ ಯೋಜನೆ ರೋಪಿಸಿ ಜಾರಿಗೊಳಿಸಿದ್ದರು. ಇದರಿಂದ 2008ರಲ್ಲಿ ಆರಂಭದಿಂದಲೇ ದಿನಕ್ಕೊಂದು ಸಮಸ್ಯೆ ಎದುರಿಸುತ್ತಿರುವ ಈ ಯೋಜನೆ ಸರಿಪಡಿಸಲು ಸರ್ಕಾರ ಮತ್ತೆ ಹೆಚ್ಚುವರಿಯಾಗಿ 5.5 ಕೋಟಿ ರೂ. ಬಿಡುಗಡೆ ಮಾಡಿತ್ತು. ಮೊದಲು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಈಗ ಸೂಕ್ತ ನಿರ್ವಹಣೆ ಕೊರತೆಯಿಂದ ನಾಲ್ಕು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತದೆ. ಫಿಲ್ಟರ್ ಇರದ ಕಾರಣ ಪಟ್ಟಣ ಜನರು ಕಲುಷಿತ ನೀರು ಕುಡಿಯುವಂತಾಗಿದೆ.
ಈ ಯೋಜನೆಗೆ ಅರಕೇರಾ ಹಾಗೂ ಧರ್ಮಪೂರ ಗ್ರಾಮಗಳ ಸಮೀಪ ನಿರ್ಮಿಸಲಾದ ಪಂಪ್ ಹೌಸ್‌ನಲ್ಲಿ ಅಳವಡಿಸಿದ ವಿದ್ಯುತ್ ಮೋಟರ್‌ಗಳು ತೀರ ಕಳಪೆ ಮಟ್ಟದ್ದಾದ್ದರಿಂದ ಪದೇ ಪದೇ ಕೆಡುತ್ತ್ತಿವೆ. ಅವುಗಳ ರಿಪೇರಿಗೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ಚೆನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.