ಮೇ ಮೇಳದಲ್ಲಿ ತೆರೆಗೆ ಬಂದ ಜಾತ್ಯತೀತತೆ

•ರಾಷ್ಟ್ರದ ಜ್ವಲಂತ ಸಮಸ್ಯೆ-ಸವಾಲುಗಳ ಚರ್ಚೆ•ಬಂಡವಾಳಶಾಹಿಗಳ ವಿರುದ್ಧ ಹೋರಾಟದ ಎಚ್ಚರಿಕೆ ಸಂದೇಶ

Team Udayavani, May 6, 2019, 3:48 PM IST

gadaga-01..

ಗದಗ: ಸಮಾರೋಪ ಸಮಾರಂಭದಲ್ಲಿ ಹೈದ್ರಾಬಾದಿನ ಗೋರಟಿ ವೆಂಕನ್ನ ಸಮಾರೋಪ ಭಾಷಣ ಮಾಡಿದರು.

ಗದಗ: ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಚಿತ್ತಾರ ಕಲಾ ಬಳಗ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಅಂಬೇಡ್ಕರ್‌ ಭವನದ ಲಿಂ| ಡಾ| ಸಿದ್ಧಲಿಂಗ ಸ್ವಾಮಿಗಳ ವೇದಿಕೆಯಲ್ಲಿ ನಡೆದ ಎರಡು ದಿನಗಳ 6ನೇ ಮೇ ಸಾಹಿತ್ಯ ಮೇಳ ರವಿವಾರ ಸಂಜೆ ಅದ್ಧೂರಿ ತೆರೆ ಕಂಡಿತು.

ಆಡಳಿತ ವರ್ಗ ಎಚ್ಚರಿಸುವುದರೊಂದಿಗೆ ಜನಸಾಮಾನ್ಯರು ಪ್ರಸ್ತುತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿತು. ಈ ಮೂಲಕ ಜನ ಸಮುದಾಯದಲ್ಲಿ ಸ್ವಾಭಿಮಾನದ ಧ್ವನಿಯನ್ನು ಬಡಿದೆಬ್ಬಿಸುವ ಪ್ರಯತ್ನ ನಡೆಸಿತು.

ಅಭಿವೃದ್ಧಿ ಹೆಸರಲ್ಲಿ ಆದಿವಾಸಿಗಳು, ಬಡವರನ್ನು ಬೀದಿಗೆ ತಳ್ಳುವ ಅಧಿಕಾರಿ ವರ್ಗ, ಕಾರ್ಮಿಕರಿಗೆ ಕನಿಷ್ಠ ಸವಲತ್ತು ನೀಡದೇ ಶೋಷಿಸುವ ಬಂಡವಾಳಶಾಹಿಗಳ ವಿರುದ್ಧ ಹೋರಾಟದ ಎಚ್ಚರಿಕೆ ಸಂದೇಶ ರವಾನಿಸಿತು. ಸಮಾಜವಾದ, ಜಾತ್ಯತೀತ ನೆಲೆಗಟ್ಟಿನಲ್ಲಿ ರೂಪಿತವಾದ ಭಾರತವನ್ನು ಧರ್ಮ, ಜಾತಿಗಳ ಹೆಸರಲ್ಲಿ ಒಡೆದಾಳುವ ರಾಜಕಾರಣಿಗಳ ವಿರುದ್ಧ ವಿಚಾರವಾದಿಗಳು ಕೆಂಡ ಕಾರಿದರು.

ಆಳುವ ಪಕ್ಷಗಳು, ಕಾರ್ಪೊರೆಟ್ ಕಂಪನಿಗಳ ಸ್ವಾರ್ಥಗಳನ್ನೊಳಗೊಂಡ ಬಣ್ಣದ ಮಾತುಗಳಿಗೆ ಮಾರು ಹೋಗಿ, ಬದುಕಿನ ನೈಜ ಸ್ಥಿತಿಯನ್ನು ಮರೆಯುವ ಮುಗ್ಧ ಜನರ ಬಗ್ಗೆ ಮಮ್ಮಲ ಮರುಗಿದರು.

ಮೇಳದಲ್ಲಿ ಪುಸ್ತಕ ಮಾರಾಟವೂ ಜೋರಾಗಿತ್ತು. ಸುಮಾರು 11ಕ್ಕೂ ಹೆಚ್ಚು ಮಳಿಗೆಗಳಲ್ಲಿ ಎರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳು ಓದುಗರ ಕೈಸೇರಿದವು.

ಕುಂಚದಲ್ಲಿ ಮೂಡಿ ಮನವ ಅರಳಿಸಿದ ಕಲಾಕೃತಿಗಳು..:

ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳು ‘ಭಾರತದ ಅಭಿವೃದ್ಧಿ’ ಹಿಂದಿನ ಕಥೆಗಳಿಗೆ ಬಣ್ಣದ ಮೂಲಕ ಜೀವ ತುಂಬಿದವು. ಬಂಧಿಯಾಗಿರುವ ಭಾರತಾಂಬೆ, ಹಳ್ಳಿಯ ಹೆಣ್ಣು ಮಗಳು ಅಕ್ಷರಕ್ಕಾಗಿ ಭವಿಷ್ಯದತ್ತ ದೃಷ್ಟಿ ನೆಟ್ಟಿರುವುದು, ಭಾರತದ ನಕಾಶೆಯಲ್ಲಿ ಜಾತಿ ಕಲ್ಮಶಗಳು ಹರಡಿರುವ ಚಿತ್ರಗಳು ಮನಸ್ಸನ್ನು ಸೆಳೆದವು. ಗದುಗಿನ ಶಿವರಾಜ ಕಮ್ಮಾರ ಬಿಡಿಸಿದ ಚಿತ್ರದಲ್ಲಿ ನ್ಯಾಯದೇವತೆಯೊಂದಿಗೆ ಭಾರತಮಾತೆಯೂ ಬಂಧನದ ಸಂಕೋಲೆಯಲ್ಲಿರುವಂತೆ ಬಿಂಬಿಸಿರುವುದು ನೋಡುಗರ ಗಮನ ಸೆಳೆಯುತ್ತಿತ್ತು.

ಕೊಪ್ಪಳದ ಸಂತೋಷ್‌ ಚಿತ್ರಿಸಿದ ಚಿತ್ರ ಕುರ್ಚಿಗಾಗಿ ನಡೆಯುವ ಪೈಪೋಟಿಯೇ ಅಭಿವೃದ್ಧಿಯಾ? ಎಂದು ಪ್ರಶ್ನಿಸುವಂತಿತ್ತು. ಮೂಲಸೌಕರ್ಯಗಳಿಲ್ಲ ದೆ ನಿಟ್ಟುಸಿರು ಬಿಡುತ್ತಿರುವ ಗ್ರಾಮೀಣ ಮಹಿಳೆ ಒಳ್ಳೆಯ ನಾಳೆಗಳಿಗಾಗಿ ಕಾದಿರುವ ಸನ್ನಿವೇಶವನ್ನು ಗದಗಿನ ಡಾ| ಲಕ್ಷ್ಮೀದೇವಿ ಗವಾಯಿ ಅವರು ಚಿತ್ರಿಸಿದ್ದರು. ಭೂಮಿಯನ್ನೇ ಖರೀದಿಸಲು ಹೊರಟ ಬಂಡವಾಳಶಾಹಿಗಳ ಹುನ್ನಾರವನ್ನು ಬಾದಾಮಿಯ ವೀರಣ್ಣ ಕರಡಿ ತೆರೆದಿಟ್ಟರೆ, ಜಾತಿ ವ್ಯವಸ್ಥೆ ಕುರಿತು ಕಲಬುರ್ಗಿಯ ಸೂರ್ಯಕಾಂತ ನಂದೂರು ಅವರ ಚಿತ್ರ ಗಮನ ಸೆಳೆಯಿತು.

ಕ್ಯಾಮರಾದಲ್ಲಿ ಸೆರೆಯಾದ ಬದುಕಿನ ಬವಣೆಯ ನೋಟ:

ಸಾಹಿತ್ಯ ಮೇಳದ ಅಂಗವಾಗಿ ನಡೆದ ಛಾಯಾಚಿತ್ರ ಪ್ರದರ್ಶನವೂ ಗಮನ ಸೆಳೆಯಿತು. ಗ್ರಾಮೀಣ ಕಲೆ, ಸಂಸ್ಕೃತಿ, ಸೊಬಗು ಬಿಂಬಿಸುವ ನೂರಾರು ಚಿತ್ರಗಳು ಪ್ರದರ್ಶನಗೊಂಡವು. ಛಾಯಾಗ್ರಾಹಕ ರಾಮು ವಗ್ಗಿ, ಮುತ್ತು ಹಾಳಕೇರಿ, ವೀರಪ್ಪ ತಾಳದವರ ಅವರು ವಿವಿಧೆಡೆ ಕ್ಯಾಮರಾದಲ್ಲಿ ಸೆರೆ ಹಿಡಿದ ಸುಮಾರು 150ಕ್ಕೂ ಹೆಚ್ಚು ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ತುತ್ತಿನ ಚೀಲ ತುಂಬಿಸಿಕೊಳ್ಳಲು ಚಿಂದಿ ಆಯುವ ಬಾಲಕಿ, ಬರಗಾಲದಲ್ಲಿ ಜನ, ಜಾನುವಾರುಗಳ ಪಡಿಪಾಟಿಲು, ತಿಪ್ಪೆಯಲ್ಲಿ ಸತ್ತು ಬಿದ್ದಿರುವ ದನದ ಮಾಂಸವನ್ನು ಸಂಗ್ರಹಿಸುತ್ತಿರುವ ಮಕ್ಕಳ ಛಾಯಾಚಿತ್ರಗಳು ಗ್ರಾಮೀಣ ಮತ್ತು ದಲಿತರ ಜೀವನದ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದವು.

ಕಪ್ಪತಗುಡ್ಡದ ಸೊಬಗು, ಪೋಸ್ಕೊ ಹೋರಾಟದಲ್ಲಿ ಭಾಗವಹಿಸಿದ್ದ ಮೇಧಾ ಪಾಟ್ಕರ್‌, ಕೃಷಿ ಜಮೀನಿನ ಫಲವತ್ತಾದ ಮಣ್ಣಿನ ಮಹತ್ವ ತಿಳಿಸುವ ಅಜ್ಜಿ, ಅಲೆಮಾರಿಗಳ ಬದುಕು, ರೈತರ ಕೃಷಿ ಚಟುವಟಿಕೆ, ಗ್ರಾಮೀಣ ಜನಪದ ಕಲೆಗಳ ದೃಶ್ಯ ವೈಭವ, ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ಭೀಷ್ಮಕೆರೆ ಮತ್ತು ಬಸವಣ್ಣನ ಮೂರ್ತಿ, ಜಿಲ್ಲಾಡಳಿತ ಭವನದ ವೈಭವವನ್ನು ಚಿತ್ರಗಳು ಸಾರಿದವು.

ಟಾಪ್ ನ್ಯೂಸ್

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.