ಸಾಹಿತ್ಯ ಲೋಕಕ್ಕೆ ಜೈನ ಸಮುದಾಯದ ಕೊಡುಗೆ ಅಪಾರ
ಹೊಂಬುಜದಲ್ಲಿ ಸ್ಥಳಾವಕಾಶ ನೀಡಿದಲ್ಲಿ ಹಂಪಿ ವಿವಿ ಕನ್ನಡ ಅಧ್ಯಯನ ಕೇಂದ್ರ ಆರಂಭ
Team Udayavani, May 6, 2019, 4:27 PM IST
ರಿಪ್ಪನ್‌ಪೇಟೆ: ಸಮೀಪದ ಹೊಂಬುಜ ಜೈನಮಠದಲ್ಲಿ 50 ವಿಭಿನ್ನ ಅಮೂಲ್ಯ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೊಂಬುಜ ಶ್ರೀ, ಹಂಪಿ ಕುಲಪತಿ ಸ.ಚಿ. ರಮೇಶ, ಹಂ.ಪ. ನಾಗರಾಜಯ್ಯ ಇತರರು ಪಾಲ್ಗೊಂಡಿದ್ದರು.
ರಿಪ್ಪನ್‌ಪೇಟೆ: ಜೈನ ಸಾಹಿತ್ಯದಲ್ಲಿ ವರ್ಣ ಮತ್ತು ಜಾತಿ ದಾಟುವ ಆಶಯವಿದೆ. ಅಂಚಿನ ಸಮುದಾಯದ ಜನರ ಚಿತ್ರಣವಿದ್ದು, ಮೇಲಿನಿಂದ ಕೆಳಗೆ ಹಾಗೂ ಕೆಳಗಿನಿಂದ ಮೇಲೆ ಜೀವಿ ಹಾಗೂ ವ್ಯಕ್ತಿಗಳು ಭಾವನೆಗಳಲ್ಲಿ ಅವತರಿಸುವ ಸಂದೇಶವಿದೆ ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಸ.ಚಿ. ರಮೇಶ ಹೇಳಿದರು.
ಸಮೀಪದ ಹೊಂಬುಜ ಜೈನಮಠದಲ್ಲಿ 50 ವಿಭಿನ್ನ ಅಮೂಲ್ಯ ಗ್ರಂಥಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ ಸಮಾಜದ ನಿರ್ಮಾಣಕ್ಕೆ ಬೇಕಾದ ಆಶಯಗಳಿವೆ. ಈ ಹಿನ್ನೆಯಲ್ಲಿ ಜೈನಕೃತಿಗಳು ಸಾಂಸ್ಕೃತಿಕ ಸಂವಿಧಾನವೇ ಸರಿ. ಕ್ರೂರಿ ಎನ್ನುವ ಕಲ್ಪನೆ ಇಲ್ಲ, ಎಲ್ಲವೂ ಅಹಿಂಸ ಮನೋಭಾವನೆ ಹೊಂದಿರುತ್ತದೆ. ಪರಿಸರದಿಂದ ಕ್ರೂರತ್ವ ಬರುತ್ತದೆ ವಿನಃ ಹುಟ್ಟಿನಿಂದಲ್ಲ. ಮಾನವ ಧರ್ಮದಲ್ಲಿ ಕ್ರೂರ ಮತ್ತು ಕೆಟ್ಟ ಗುಣಗಳನ್ನು ಹೊರತು ಪಡಿಸಿ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಜೈನಧರ್ಮ ಅಂದಿನಿಂದ ಈತನಕ ಸಮಾಜಕ್ಕೆ ಸಾರುತ್ತಾ ಬಂದಿದೆ ಎಂದರು.
ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಇಂತಹ 50 ಗ್ರಂಥಗಳನ್ನು ಬಿಡುಗಡೆ ಮಾಡುವ ಜವಾಬ್ದಾರಿ ಹೊಂದಿರಬೇಕು. ಆದರೆ ಶ್ರೀಮಠವು ಇಂತಹ ಮಹತ್ಕಾರ್ಯ ಮಾಡಿರುವುದು ಶ್ಲಾಘನೀಯ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಸಮಾಜ ಅಂದು-ಇಂದು ನೀಡಿದ ಅಪಾರ ಕೊಡುಗೆಯಾಗಿದೆ. ಹೊಂಬುಜದಲ್ಲಿ ಸ್ಥಳಾವಕಾಶನೀಡಿದಲ್ಲಿ ಹಂಪಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ತೆರೆಯಲಿದ್ದೇವೆ ಎಂದರು.
ಸ್ವಸ್ತಿಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವಾತ್ಸಲ್ಯವಾರಿ ಆಚಾರ್ಯ ಶ್ರೀ 108 ವರ್ಧಮಾನ ಸಾಗರರ 100 ನೇ ವರ್ಷದ ದೀಕ್ಷಾಕೋತ್ಸವದ ಅಂಗವಾಗಿ 2019-20ರ ಶಾಂತಿಸಾಗರ ದತ್ತಿ ನಿದಿ ಸ್ಥಾಪಿಸಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಅಧ್ಯಯನ ಕೇಂದ್ರ ತೆರೆಯಲು ಹೊಂಬುಜದಲ್ಲಿ ಸ್ಥಳಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಪ್ರಾಕೃತ ಸಂಸ್ಕೃತ, ಹಿಂದಿ ಭಾಷೆಯ ಗೊಮ್ಮಟ ಸಾರ ಜೀನಕಾಂಡ, ತಿಲೋಯಪರ್ಣಿತಿ, ತತ್ವಾರ್ಥವೃತಿ, ಸ್ತೋತ್ರ ಸಂಗ್ರಹ ಇತ್ಯಾದಿ ಗ್ರಂಥಗಳಿದ್ದವು. ಈ ಸಂದರ್ಭದಲ್ಲಿ ಶ್ರೀ 108 ವರ್ಧಮಾನ ಸಾಗರ ಮುನಿವೃಂದ, ಆರ್ಯೇಕರು, ಖ್ಯಾತವಿದ್ವಾಂಸಕ ನಾಡೋಜ ಡಾ| ಹಂ.ಪ. ನಾಗರಾಜಯ್ಯ, ಆನಂದ ಪ್ರಕಾಶ ಶಾಸ್ತ್ರಿ ಕೊಲ್ಕತ್ತ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.