![Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು](https://www.udayavani.com/wp-content/uploads/2025/01/f-1-415x252.jpg)
ಮಾರ್ಕೆಟಲ್ಲಿ ಹಮಾಲರು ಒಗ್ಗಟ್ಟಿನಿಂದ ಕೆಲಸ ಮಾಡಿ
Team Udayavani, May 6, 2019, 5:17 PM IST
![kolar-2..](https://www.udayavani.com/wp-content/uploads/2019/05/kolar-2..-1-620x278.jpg)
ಎಪಿಎಂಸಿ ಹಮಾಲರ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಯದರ್ಶಿ ರವಿಕುಮಾರ್ ಸಲಹೆ
ಕೋಲಾರ: ಕಾರ್ಮಿಕರ ದಿನಾಚರಣೆ ಅಂಗ ವಾಗಿ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಹಮಾಲಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯ ದರ್ಶಿ ಟಿ.ಎಸ್.ರವಿಕುಮಾರ್ ಮಾತನಾಡಿ, ಹಮಾಲರ ಕಾಯಕನಿಧಿ ಯೋಜನೆಯಡಿ ಸಮಿತಿಯಿಂದ ಉಚಿತವಾಗಿ ಜೀವ ವಿಮಾ ಪ್ರೀಮಿಯಂ ಪಾವತಿಸಲಾಗುತ್ತಿದೆ. ಹಮಾಲರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅವಕಾಶವಿದೆ, ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕಾಗಿ ತಕ್ಷಣ 10,000 ರೂ. ಪಾವ ತಿಸಲು, ವಿಮಾ ಪರಿಹಾರ ಮೊತ್ತ ಪಾವತಿಸಲು, ಚಿಕಿತ್ಸಾ ವೆಚ್ಚ ಪಾವತಿ ಪಡೆಯಲು ಅವಕಾಶ ವಿದೆ ಎಂದು ತಿಳಿಸಿದರು.
ಹಮಾಲರ ಸಂಘದ ಅಧ್ಯಕ್ಷ ಬಾಬು ಮಾತ ನಾಡಿ, ಟೊಮೆಟೋ ಮಾರಾಟದ ನಂತರ ಹಮಾಲರು ವರ್ಗೀಕರಿಸಿ, ಪ್ಯಾಕ್ ಮಾಡಿ ಲೋಡ್ ಮಾಡುವ ಸಮಯದಲ್ಲಿ ಕಳಪೆ ಟೊಮೆಟೋ ಸ್ವಚ್ಛತೆಗೆ ತೊಂದರೆಯಾಗದಂತೆ ಪ್ರತ್ಯೇಕ ಬಾಕ್ಸ್‌ಗಳಲ್ಲಿ ಇಡಲಾಗುತ್ತಿದೆ. ಪ್ರಾಂಗ ಣದಲ್ಲಿ ದಲ್ಲಾಳಿ ಮಂಡಿಗಳ ಒಳಗೆ ಸ್ಥಳವಿದ್ದರೂ ರಸ್ತೆಗಳಲ್ಲಿ ಇಳಿಸುವುದರಿಂದ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರು ವುದಾಗಿ ತಿಳಿಸಿದರು.
ಟ್ರಕ್‌ಗಳಿಗೆ ಅವಕಾಶ ಕಲ್ಪಿಸಿ: ಪ್ರಸ್ತುತ ಟೊಮೆಟೋ ಸುಗ್ಗಿ ಪ್ರಾರಂಭವಾಗಿರು ವುದರಿಂದ ಟ್ರಕ್‌ಗಳಿಗೆ ಟೊಮೆಟೋ ಲೋಡ್ ಮಾಡಲು ಪ್ರಾಂಗಣದಲ್ಲಿ ಸ್ಥಳಾವಕಾಶ ಸಮಸ್ಯೆ ಇರುವುದರಿಂದ ಮಾಲೂರು ರಸ್ತೆಯಲ್ಲಿ ಟ್ರಕ್‌ಗಳಿಗೆ ಅವಕಾಶ ನೀಡಬೇಕು. ಇದಕ್ಕೆ ಅನುಕೂಲವಾಗುವಂತೆ ಮಾಲೂರು ರಸ್ತೆಯಿಂದ ಬರುವ ವಾಹನಗಳನ್ನು ವಿಜಯನಗರದ ಕಡೆಗೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕೆಂದು ವಿನಂತಿಸಿದರು.
ಹೊಂದಾಣಿಕೆ ಇರಲಿ: ವರ್ತಕರ ಪ್ರತಿನಿಧಿ ಎಪಿಎಂಸಿ ಸದಸ್ಯ ಎಎನ್‌ಆರ್ ದೇವರಾಜ್ ಮಾತನಾಡಿ, ಪ್ರಾಂಗಣದಲ್ಲಿ ಶ್ರಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ನಿಮ್ಮಗಳ ಶ್ರಮ ಮುಖ್ಯವಾಗಿದೆ. ಆದ್ದರಿಂದ ಸಣ್ಣ-ಪುಟ್ಟ ಗಲಾಟೆಗಳಿಗೆ ಆಸ್ಪದವಾಗದಂತೆ ಹೊಂದಾಣಿಕೆ ಯಿಂದ ಇರಬೇಕು. ಟೊಮೆಟೋ ಲೋಡ್ ಮಾಡಿದ ನಂತರ ಟಾರ್ಪಲ್ ಕಟ್ಟುವ ಸಲುವಾಗಿ ಗಾಡಿಯನ್ನು ಅಲ್ಲೆ ನಿಲ್ಲಿಸಿಕೊಳ್ಳದೆ ಇತರೇ ವಾಹನಗಳಿಗೆ ಲೋಡ್ ಮಾಡಲು ಅನುಕೂಲವಾಗುವಂತೆ ಅನುವು ಮಾಡಿಕೊಡುವುದು, ಲೈಸನ್ಸ್ ಹೊಂದಿದ್ದಲ್ಲಿ ಮಾತ್ರ ಇಲಾಖೆ ಸೌಲಭ್ಯ ಪಡೆಯಲು ಸಾಧ್ಯತೆ ಇರುವುದರಿಂದ ನಿಮ್ಮ ಮೇಸ್ತ್ರಿಗಳ ಮೂಲಕ ಅಥವಾ ಸಮಿತಿ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಕಾರ್ಯದರ್ಶಿಯವರು ಮಾತನಾಡಿ ಮಾಲೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮಕ್ಕಾಗಿ ಮಾನ್ಯ ಪೋಲೀಸ್ ವರಿಷ್ಠಾಕಾರಿಗಳನ್ನು ವಿನಂತಿಸಲಾಗುವುದೆಂದು ಹಾಗೂ ಪ್ರಾಂಗಣ ದಲ್ಲಿ ಸ್ವಚ್ಚತೆ ಕಾಪಾಡದೆ ಯಾವುದೇದಲ್ಲಾಲರು ಟೊಮೆಟೋ ತ್ಯಾಜ್ಯವನ್ನು ಚರಂಡಿಗಳಲ್ಲಿ ಸುರಿಯುವಂತಹವರ ಮೇಲೆ ಲಿಖೀತ ಮೂಲಕ ಸಲ್ಲಿಸುವಂತೆ ಸಮಿತಿ ಸಿಬ್ಬಂದಿಯಾದ ಎ.ವಿ. ಅಯ್ಯಪ್ಪ ಹಾಗೂ ಎಂ. ಮುನಿರಾಜು ರವರಿಗೆ ತಿಳಿಸಿದರು.
ಈ ದಿನ ಹಮಾಲರೊಂದಿಗೆ ಚರ್ಚಿಸಿರು ವುದು ಬಹಳ ಸಂತೋಷವೆಂದು ತಾವೆಲ್ಲರೂ ಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರುತ್ತಾ, ಸಮಿತಿಯ ಪರವಾಗಿ ವಂದನೆಗಳನ್ನು ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಟಾಪ್ ನ್ಯೂಸ್
![Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು](https://www.udayavani.com/wp-content/uploads/2025/01/f-1-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kolara-RSS](https://www.udayavani.com/wp-content/uploads/2025/01/Kolara-RSS-150x90.jpg)
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
![Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು](https://www.udayavani.com/wp-content/uploads/2025/01/Grilahakshmi-150x98.jpg)
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
![Bannana-Leaf](https://www.udayavani.com/wp-content/uploads/2024/12/Bannana-Leaf-150x90.jpg)
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು](https://www.udayavani.com/wp-content/uploads/2024/12/14-5-150x90.jpg)
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.