‘ಗ್ರೂಪ್’ ತೇರಾ ಮಸ್ತಾನ
ಅಡ್ಮಿನ್ ಸ್ಟೇಷನ್ನಿನ ಕತೆಗಳು
Team Udayavani, May 7, 2019, 6:25 AM IST
ಎಷ್ಟೋ ಸಲ ಅಮ್ಮ ಬಯ್ತಾ ಇರ್ತಾರೆ… “ಬರೀ ಮೊಬೈಲ್ ಹಿಡ್ಕೊಂಡೇ ಇರ್ತೀಯಲ್ಲಾ… ಸ್ವಲ್ಪ ಓದಿನ ಕಡೆಗೆ ಗಮನ ಕೊಡು’ ಅಂತ. ನಾನೋ… ಸುಮ್ ಸುಮ್ಮನೆ ನಗ್ತಾ, ಕೈಯಲ್ಲಿ ಗೊಂಬೆ ಆಡಿಸಿದ ಹಾಗೆ ಮೊಬೈಲ್ ಹಿಡ್ಕೊಂಡು ಕೂತಿರ್ತೀನಿ. ಆದರೆ, “ನಮ್ಮ ಮುದ್ದು ಕುಟುಂಬ’ ವಾಟ್ಸ್ಯಾಪ್ ಗ್ರೂಪ್ ರಚನೆಯಾದ ಮೇಲೆ, ಆಗಿದ್ದೇ ಬೇರೆ.
ನಮ್ಮ ಅಮ್ಮನಿಂದ ಹಿಡಿದು ಎಲ್ಲರೂ ಆ ಗ್ರೂಪ್‌ನಲ್ಲಿದ್ದಾರೆ! ಅಮ್ಮನ ಬಳಿ ಕೇಳಿದ್ರೆ, “ಗೊತ್ತಿಲ್ಲ ಕಣೇ… ನಿಮ್ಮ ಅಕ್ಕನೇ ಆಡ್ಮಿನ್ನು… ಅವಳನ್ನೇ ಕೇಳು…’ ಅನ್ನೋ ಉತ್ತರ. ಅಂತೂ ಇಂತೂ ಗ್ರೂಪ್ ಸೇರಿಸಿದ್ದ ಮೇಲೆ, “ಹಾಯ್’ ಅಂತ ಮೆಸೇಜ್ ಹಾಕಲೇಬೇಕಲ್ಲಾ… ಹಾಗೆ ಮೆಸೇಜ್ ಮಾಡಿದ್ದೇ ತಡ, ಸಣ್ಣವರಿದ್ದಾಗ ನನ್ನನ್ನು ನೋಡಿದ್ದ ಸಂಬಂಧಿಕರೆಲ್ಲ, ಒಂದೇ ಸಮನೆ “ಹಾಯ್ ದೊಡ್ಡ ಪುಟ್ಟಿ… ಹೇಗಿದಿಯಾ?’ ಅಂತ ಮೆಸೇಜ್ ಮೇಲೆ ಮೆಸೇಜ್. ಇದೇನಪ್ಪಾ… ಎಲ್ಲರ ಮುಂದೆ ಪುಟ್ಟಿ ಅಂತಾದರೂ ಕರೆಯಬಹುದಿತ್ತು. “ದೊಡ್ಡ ಪುಟ್ಟಿ’ ಅಂತಾರಲ್ಲ ಅಂತ, ಅರೆಕ್ಷಣ ಮಂಡೆಬಿಸಿ ಆಯ್ತು.
ಎಲ್ಲರೂ ಒಂದೇ ಸಲ ಅಟ್ಯಾಕ್ ಮಾಡೇಬಿಟ್ರಾ. ಪ್ರತಿಯೊಬ್ಬರ ಮಾತಿನಲ್ಲೂ ನನ್ನ ಬಾಲ್ಯದ ದಿನಗಳ ನೆನಪೇ ಇದ್ದವು. ಒಂದೇ ಸಮನೆ ಮೆಸೇಜುಗಳನ್ನು ನೋಡಿ ಕಿರಿಕಿರಿಯಾದರೂ, ಅಡುಗೆ ರೆಸಿಪಿಯಿಂದ ಹಿಡಿದು ಏನೇನೆಲ್ಲಾ ಆ ದಿನ ಮಾಡಿದ್ವಿ ಎಂಬ ಅವರ ದಿನಚರಿ ಪಟ್ಟಿ ನೋಡಿದಾಗ, ತುಂಬಾ ಹಿತವೆನಿಸುತ್ತಿತ್ತು. ಈಗ ಹೊಸ ಬಟ್ಟೆ ಖರೀದಿಸಿದರೂ ಸಾಕು, “ಗ್ರೂಪ್‌ನಲ್ಲಿ ಹಾಕು’ ಅಂತಾರೆ ಅಮ್ಮ. ಅದೂ ಬಿಡಿ, ಒಂದು ದಿನ ಮೆಸೇಜ್ ಮಾಡಿಲ್ಲ ಅಂದ್ರೆ, “ಯಾಕೆ ಮಾಡ್ಲಿಲ್ಲ?’ ಅಂತ ಕೇಳುತ್ತಾರೆ. ಕುಟುಂಬದ ಹಳೇ ಫೋಟೋ ಇದ್ದರೂ ಅದನ್ನೂ ಗ್ರೂಪ್‌ಗೆ ಪೋಸ್ಟ್ ಮಾಡ್ತಾರೆ. ಈಗ ನನ್ನ ಅಮ್ಮ, ವಾಟ್ಸ್ಯಾಪ್‌ನಲ್ಲಿ ಅಷ್ಟೊಂದು ಬ್ಯುಸಿ.
— ಯಶಸ್ವಿ ದೇವಾಡಿಗ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.