ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ಶೇ.98.11 ತೇರ್ಗಡೆ
Team Udayavani, May 7, 2019, 6:01 AM IST
ಕಾಸರಗೋಡು: ಕೇರಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಿಸ ಲಾಯಿತು. ಇದರೊಂದಿಗೆ ಟಿಎಚ್‌ಎಸ್‌ಎಲ್‌ಸಿ ಮತ್ತು ಎಸ್‌ಎಸ್‌ಎಲ್‌ಸಿ (ಹಿಯರಿಂಗ್ ಇಂಪೇರ್ಡ್), ಎಎಚ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನೂ ಪ್ರಕಟಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಯಲ್ಲಿರುವುದರಿಂದ ಶಿಕ್ಷಣ ಸಚಿವರ ಬದಲಾಗಿ ಸಾರ್ವಜನಿಕ ಶಿಕ್ಷಣ ನಿರ್ದೇಶಕಿ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ತಿರುವನಂತಪುರದಲ್ಲಿ ಪ್ರಕಟಿಸಿದರು.
ಕೇರಳ ಹಾಗೂ ಲಕ್ಷದ್ವೀಪಗÙ 2,939 ಕೇಂದ್ರಗಳಲ್ಲಿ 4,34,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ. 98.11 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷ ಮೋಡರೇಶನ್ ನೀಡಿಲ್ಲ ಎಂಬುದು ವಿಶೇಷವಾಗಿದೆ. ಕಳೆದ ವರ್ಷ ಶೇ.97.84 ಫಲಿತಾಂಶ ಬಂದಿತ್ತು.
ಮೇ 20 ರಿಂದ 25 ರ ವರೆಗೆ ಸೇ ಪರೀಕ್ಷೆ ನಡೆಯಲಿದೆ. ಗರಿಷ್ಠ ಮೂರು ವಿಷಯಗಳಲ್ಲಿ ಸೇ ಪರೀಕ್ಷೆ ಬರೆಯಬಹುದು.
ನೀರ್ಚಾಲು ಶಾಲೆಯ 8 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 8 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಭಿರಾಮ ಪಿ, ಅಪರ್ಣ ಎಸ್, ಆಶಾ.ಕೆ, ಕೃಪೇಶ್ ಎ, ಪ್ರಶಾಂತ್ ವಿ, ಶಮಾ.ಎ, ಶರಣ್ಯ ಪಿ.ಜೆ, ವರಲಕ್ಷಿ¾ ಎನ್. ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 180 ಮಂದಿ ಪರೀಕ್ಷೆ ಬರೆದಿದ್ದು 172 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ ಶೇ.96 ಫಲಿತಾಂಶವನ್ನು ತಂದಿದ್ದಾರೆ.
ಪೈವಳಿಕೆ ನಗರ
ಕೇರಳ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪೈವಳಿಕೆ ನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಜಯಶ್ರೀ, ಶಮೀಮಾ ನಸ್ರಿನ್, ಫಾತಿಮತ್ ರಿಹಾನಾ, ಫಾತಿಮತ್ ಅಝಿ¾àನಾ ಎಲ್ಲÉ ವಿಷಯಗಳಲ್ಲಿ ಎ ಪ್ಲಸ್ ಪಡೆದು ಉತ್ತೀರ್ಣರಾಗಿದ್ದಾರೆ. ಇವರ ಸಾಧನೆಗೆ ಶಾಲಾ ರಕ್ಷಕ-ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ಮಲಪುರ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಎ-ಪ್ಲಸ್ ಪಡೆದಿ ದ್ದಾರೆ. 2,493 ವಿದ್ಯಾರ್ಥಿಗಳು ಎ ಪ್ಲಸ್ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 599 ಸರಕಾರಿ ಶಾಲೆಗಳಲ್ಲೂ, 713 ಅನುದಾನಿತ ಶಾಲೆಗಳಲ್ಲೂ, 391 ಅನುದಾನ ರಹಿತ ಶಾಲೆಯಲ್ಲಿ 100 ಶೇ. ಫಲಿತಾಂಶ ಬಂದಿದೆ.
ಕಾಸರಗೋಡು ಜಿಲ್ಲೆಯ ಅಗಲ್ಪಾಡಿ, ಬಿಇಎಂಎಚ್‌ಎಸ್ ಕಾಸರ ಗೋಡು, ಕುರುಡಪದವು ಕೆವಿಎಸ್‌ಎಂಎಚ್‌ಎಸ್, ಜಿಎಚ್ ಎಸ್‌ಎಸ್ ಶಿರಿಯಾ, ಜಿಎಚ್‌ಎಸ್‌ಎಸ್ ಬಂಗ್ರ ಮಂಜೇಶ್ವರ, ಜಿಎಚ್‌ಎಸ್ ಪೈವಳಿಕೆ, ಜಿಎಚ್‌ಎಸ್‌ಎಸ್ ಆಲಂಪಾಡಿ, ಜಿವಿಎಚ್‌ಎಸ್‌ಎಸ್ ಇರಿಯಣ್ಣಿ, ಜಿಎಚ್‌ಎಸ್‌ಎಸ್ ಪಾಂಡಿ, ಜಿಎಚ್‌ಎಸ್‌ಎಸ್ ಅಂಗಡಿಮೊಗರು, ಜಿಎಚ್‌ಎಸ್‌ಎಸ್ ಪಡ್ರೆ, ಜಿಎಚ್‌ಎಸ್‌ಐಬಿಎಸ್‌ಎಚ್‌ಎಸ್‌ಎಸ್ ಎಡನೀರು, ಜಿಎಚ್‌ಎಸ್‌ಎಸ್ ಎಡನೀರು, ಜಿಕೆಎಚ್‌ಎಸ್ ಕೂಡ್ಲು, ಜಿಎಚ್‌ಎಸ್‌ಎಸ್ ಕುಂಡಂಗುಳಿ, ಜಿಎಐಆರ್‌ಎಚ್‌ಎಸ್ ಫೋರ್ ಗರ್ಲ್ಸ್, ಎನ್‌ಎ ಗರ್ಲ್ಸ್ ಎರ್ದುಂಕಡವು, ಎನ್.ಎ. ಮೋಡೆಲ್ ಎಚ್‌ಎಸ್‌ಎಸ್ ನಾಯಮ್ಮಾರಮೂಲೆ, ಸಿರಾಜುಲ್ ಹುದಾ ಎಫ್‌ಎಂಎಚ್‌ಎಸ್ ಮಂಜೇಶ್ವರ, ಬಿಇಎಂಎಚ್‌ಎಸ್ ನೆಲ್ಲಿಕಟ್ಟೆ, ದಖೀರತ್ ಇಎಂಎಚ್‌ಎಸ್‌ಎಸ್ ತಳಂಗರೆ, ಕೆ.ಎಚ್.ಜೆ.ಎಚ್.ಎಸ್.ಎಸ್. ಕಲಾ°ಡ್, ಜಿಎಚ್‌ಎಸ್‌ಎಸ್ ಮೂಡಂಬೈಲು, ಜಿಎಚ್‌ಎಸ್ ಉದ್ಯಾವರ, ಜಿಎಚ್‌ಎಸ್ ಕಳತ್ತೂರು, ಜಿಎಚ್‌ಎಸ್ ಮುನ್ನಾಡು, ಜಿಎಚ್‌ಎಸ್ ಸೂರಂಬೈಲು, ಅಲ್ ಸಖಾಫ್ ಇಎಂಎಸ್ ಉದ್ಯಾವರ, ಸೈಂಟ್ ಮೇರಿಸ್, ಜಮಾಅತ್ ಇಎಚ್‌ಎಸ್ ಮಂಜೇಶ್ವರ, ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ, ಸೈಂಟ್ ಮೇರಿಸ್ ಎಚ್‌ಎಸ್ ಕರಿಬೇಡಗಂ, ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ ಮೊದಲಾದ ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ.
ಕೂಡ್ಲು ಶಾಲೆ: 7ನೇ ಬಾರಿಗೆ ಶೇ. 100 ಫಲಿತಾಂಶ
ಕೂಡ್ಲು ಶಾಲೆ ಸತತ ಏಳನೇಬಾರಿ ಶೇ.100 ಫಲಿತಾಂಶ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಸತತ ಏಳನೇ ಬಾರಿಯೂ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. ಇದೇ ಶಾಲೆಯ ಪಿಯೂಷ್ ಕೆ.ಬಿ, ಅಂಜಲಿ ಚಂದ್ರ, ಶ್ರೀಷ್ಮ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್ ಹಾಗೂಐದು ಮಕ್ಕಳು 9 ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಹಾಗು ಒಂದು ವಿಷಯದಲ್ಲಿ ಎ ಗ್ರೇಡ್ ಪಡೆದಿರುತ್ತಾರೆ. ಎ ಪ್ಲಸ್ ಗ್ರೇಡ್ ಪಡೆದ ಮೂರೂ ಮಂದಿ ಭಾರತ್ ಸ್ಕೌಟ್ಸ್ ಮತ್ತು ಗೆ„ಡ್ಸ್ ನ ರಾಜ್ಯ ಪುರಸ್ಕಾರ ಪಡೆದಿರುತ್ತಾರೆ.
ಅಲ್ಲದೆ ಕರ್ನಾಟಕದ ಬೆಳಗಾವಿಯಲ್ಲಿ ಜರಗಿದ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ವಿನಿಮಯ ಶಿಬಿರದಲ್ಲೂ ಭಾಗವಹಿಸಿದ್ದಾರೆ. ನೂರು ಶೇಕಡಾ ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಎಲ್ಲರನ್ನೂ ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾತೃಸಂಘ, ಶಾಲಾ ವ್ಯವಸ್ಥಾಪಕರು, ಅಧ್ಯಾಪಕ-ಸಿಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಕಾಸರಗೋಡು ಜಿಲ್ಲೆ
ಕಾಸರಗೋಡು ಜಿಲ್ಲೆಯಲ್ಲಿ ಶೇ. 97.71 ಫಲಿತಾಂಶ ಬಂದಿದೆ. 18,975 ಮಂದಿ ಪರೀಕ್ಷೆ ಬರೆದಿದ್ದು 18,541 ಮಂದಿ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಗರಿಷ್ಠ-ಕನಿಷ್ಠ
ಈ ಬಾರಿ ಅತ್ಯಂತ ಹೆಚ್ಚು ಶೇಕಡಾ ಫಲಿತಾಂಶ ಪತ್ತನಂತಿಟ್ಟ (99.33ಶೇ.) ಹಾಗೂ ಅತ್ಯಂತ ಕಡಿಮೆ ವಯನಾಡು(ಶೇ.93.22). ಅತ್ಯಂತ ಹೆಚ್ಚು ಫಲಿತಾಂಶ ಪಡೆದ ವಿದ್ಯಾಭ್ಯಾಸ ಜಿಲ್ಲೆ ಕುಟ್ಟನ್ನಾಡು. ಕೊಲ್ಲಿಯಲ್ಲಿ ಪರೀಕ್ಷೆ ಬರೆದ 495 ವಿದ್ಯಾರ್ಥಿಗಳ ಪೈಕಿ 489 ಮಂದಿ ತೇರ್ಗಡೆಯಾಗಿದ್ದಾರೆ. ಲಕ್ಷದ್ವೀಪದಲ್ಲಿ ಪರೀಕ್ಷೆ ಬರೆದ 681 ಮಂದಿಯ ಪೈಕಿ 599 ಮಂದಿ ತೇರ್ಗಡೆಯಾಗಿದ್ದಾರೆ. 37,334 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ. 4,26,513 ಮಂದಿ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.