ವೈವಾಹಿಕ ಜೀವನದಲ್ಲಿ ಎಡರು – ತೊಡರು ಸಾಮಾನ್ಯ: ಶ್ರೀ ರಾಜಶೇಖರಾನಂದ ಸ್ವಾಮೀಜಿ
Team Udayavani, May 7, 2019, 5:55 AM IST
ಕಾರ್ಯಕ್ರಮದಲ್ಲಿ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿದರು.
ಮಂಗಳೂರು: ವೈವಾಹಿಕ ಜೀವನ ಎಂದಾಗ ಅನೇಕ ಎಡರುತೊಡರುಗಳು ಬರುವುದು ಸಾಮಾನ್ಯ. ಆದರೆ ಐವತ್ತು ವರ್ಷಗಳ ಕಾಲ ಗಂಡ- ಹೆಂಡತಿ ಯಾವ ರೀತಿ ಆದರ್ಶ ಜೀವನ ನಡೆಸಿದ್ದಾರೆ ಎನ್ನುವುದಕ್ಕೆ ಎಂ. ನರಸಿಂಗ ರೈ ಹಾಗೂ ಭಾರತ್ ಜ್ಯೋತಿ ರೈ ಸಾಕ್ಷಿಯಾಗಿದ್ದು, ಇಂದಿನ ಪೀಳಿಗೆಗೆ ಅವರು ಮಾದರಿಯಾಗಿದ್ದಾರೆ. ಇವರ ವೈವಾಹಿಕ ಜೀವನ ಇನ್ನಷ್ಟು ಚೆನ್ನಾಗಿರಲಿ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾರೈಸಿದರು.
ಅವರು ಮುಂಡಬೆಟ್ಟುಗುತ್ತು ನರಸಿಂಹ ರೈ ಕಿನ್ನಿಕಂಬಳ ದಂಪತಿಯ ವಿವಾಹ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಜನ ಮಂದಿರದಲ್ಲಿ ರವಿವಾರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇಂದಿನ ಪೀಳಿಗೆಯ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದು ಖೇದಕರ. ದಾಂಪತ್ಯದ ಗುಟ್ಟೇನೆಂದರೆ ಭಯ ಹಾಗೂ ಉಭಯ ಕುಶಲೋಪರಿ. ಆದರೆ ನಾವು ಸನ್ಯಾಸ ಜೀವನದಲ್ಲಿದ್ದೇವೆ. ಸನ್ಯಾಸಿಗಳು ದಾಂಪತ್ಯದ ಬಗ್ಗೆ ಮಾತಾಡಿದರೆ ಅರ್ಥ ಬರುವುದಿಲ್ಲ. ಆದರೆ ಸನ್ಯಾಸಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಇದೆ ಎಂದರು.
ವಿಜ್ಞಾನಿ, ನಾಡೋಜ ಪ್ರೊ| ಕಿನ್ನಿಕಂಬಳ ಪದ್ಮನಾಭ ರಾವ್ ಮಾತನಾಡಿ, ನರಸಿಂಹ ರೈ ಅವರ ಜೀವನದ ಮಜಲುಗಳ ಬಗ್ಗೆ ವಿವ ರಿಸಿ, ಅವರ ತಂದೆ ದೇಜು ರೈ ಬಗ್ಗೆ ಮಾಹಿತಿ ನೀಡಿದರು.
ವೈದ್ಯರಾದ ಡಾ| ಶ್ರೀಪತಿ ಕಿನ್ನಿಕಂಬಳ ಅವರು ಅಭಿನಂದನಾ ಭಾಷಣ ಮಾಡಿದರು. ದಂಪತಿ ಪುತ್ರ ನೀರಜ್ ಹಾಗೂ ಪುತ್ರಿ ನಿಖೀತಾ ಅವರು ತನ್ನ ಹೆತ್ತವರಿಗೆ ಹಾರ ಹಾಕಿ ಪಾದಕ್ಕೆ ನಮಸ್ಕರಿಸಿದರು.
ಕಾರ್ಯಕ್ರಮದಲ್ಲಿ ಕಿನ್ನಿಕಂಬಳ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶತಾಯುಷಿ ಎಂ. ಆನಂದ ಆಳ್ವ ಮಿಜಾರುಗುತ್ತು, ಮಂಡಬೆಟ್ಟುಗುತ್ತು ಯಜಮಾನರು ಎಂ. ಗಂಗಾಧರ ರೈ ಮುಂತಾದವರು ಉಪಸ್ಥಿತರಿದ್ದರು.
ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹರಿನಾಮ ಸಂಕೀರ್ತನೆ, ಆರಾಧನೆ, ಪ್ರಸಾದ ವಿತರಣೆ, ಪುಸ್ತಕ ಬಿಡುಗಡೆ ಸಮಾರಂಭ, ಸಹಭೋಜನ, ಶ್ರೀವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಕೇಂದ್ರ ಮಂಜನಾಡಿ ಇದರ ಬಾಲಕಲಾವಿದರಿಂದ “ಮೈಮೆದ ಬಾಲೆ ಸಿರಿಕೃಷ್ಣ’ ಯಕ್ಷಗಾನ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.