ಸ್ವರ್ಣ ಖರೀದಿಗೆ ಪ್ರಸಕ್ತ ದಿನವೇ “ಅಕ್ಷಯ ತೃತೀಯಾ’: ಜಯ ಆಚಾರ್ಯ

Team Udayavani, May 7, 2019, 6:10 AM IST

jaya-acharya

ಉಡುಪಿ: ಬಂಗಾರ ಖರೀದಿಸುವ ಹಬ್ಬವಾದ, ಸ್ವರ್ಣಪ್ರಿಯರ ಬಹು ನಿರೀಕ್ಷಿತ ದಿನವೇ “ಅಕ್ಷಯ ತೃತೀಯಾ’. ಈ ದಿನವು ತ್ರೇತಾಯುಗದ ಪ್ರಾರಂಭದ ದಿನ, ಶ್ರೀಕೃಷ್ಣ ಪರಮಾತ್ಮ ದ್ರೌಪದಿಗೆ ಅಕ್ಷಯ ಪಾತ್ರೆ ನೀಡಿದ ದಿನ, ಪರಶುರಾಮರ ಜನ್ಮದಿನವಾಗಿಯೂ ಮಹತ್ವ ಪಡೆದಿದೆ. ಈ ದಿನ ಸ್ವರ್ಣ ಖರೀದಿಗೆ ಉತ್ತಮ ಮುಹೂರ್ತವಾಗಿಯೂ ಪರಿಗಣಿಸಲ್ಪಟ್ಟಿದೆ ಎಂದು ಕರ್ನಾಟಕ ಸ್ಟೇಟ್‌ ಜುವೆಲರ್ ಫೆಡರೇಶನ್‌ ಚೇರ್‌ಮನ್‌ ಜಯ ಆಚಾರ್ಯ ಜಿ. ತಿಳಿಸಿದ್ದಾರೆ.

ನೋಟ್‌ ಬ್ಯಾನ್‌ ಸಂದರ್ಭ ಸ್ವರ್ಣೋದ್ಯಮಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು. ಆದರೆ ಭಾರತೀಯರು ಚಿನ್ನದ ಮೇಲೆ ಇಟ್ಟಿರುವ ವಿಶ್ವಾಸದಿಂದ ಇದು ಅಷ್ಟೊಂದು ಪರಿಣಾಮ ಬೀರಿಲ್ಲ. ಈ ಬಾರಿಯ ಅಕ್ಷಯ ತೃತೀಯಾದಂದು ಬಹುತೇಕ ಸ್ವರ್ಣ ಮಳಿಗೆಗಳು ಬೆಳಗ್ಗೆ 7ರಿಂದ ರಾತ್ರಿ 9-10ರ ವರೆಗೆ ಗ್ರಾಹಕರಿಗಾಗಿ ತೆರೆಯಲಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರಕುವ ನಿರೀಕ್ಷೆ ಇದೆ ಎಂದರು.

“ಸ್ವರ್ಣ ಜ್ಞಾನ’ ಕಾರ್ಯಕ್ರಮ
ರಾಜ್ಯದ 30 ಜಿಲ್ಲೆಗಳ ಅಸೋಸಿಯೇಶನ್‌ ಅಧ್ಯಕ್ಷರನ್ನು ನಿರ್ದೇಶಕರನ್ನಾಗಿ ಹೊಂದಿದ ಕೆಜೆಎಫ್ ಸಂಸ್ಥೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಜುವೆಲರಿ ಉದ್ಯಮಿಗಳು, ಕೆಲಸಗಾರರನ್ನು ಪ್ರತಿನಿಧಿಸುತ್ತಿದ್ದು, ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಜುವೆಲರ್ಗಳು ಎದುರಿಸುತ್ತಿರುವ ಎಲ್ಲ ಬಗೆಯ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ “ಸ್ವರ್ಣ ಜ್ಞಾನ’ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಎಲ್ಲ ಜುವೆಲರ್ಗಳು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದವರು ತಿಳಿಸಿದರು.

ಜೆಮ್‌ ಆ್ಯಂಡ್‌ ಜುವೆಲರಿಗೆ ಕೌನ್ಸಿಲ್‌ ರಚನೆ
ದೇಶದಲ್ಲಿ ಜಿಎಸ್‌ಟಿ ಅಳವಡಿಕೆ ಸಂದರ್ಭ ಜಿಎಸ್‌ಟಿ ಕಾನೂನು ಪ್ರಕಾರ ಮಿತಿಯು ಕನಿಷ್ಠ ಶೇ. 5, ಗರಿಷ್ಠ ಶೇ. 28 ಇದ್ದಾಗಲೂ ಫೆಡರೇಶನ್‌ ಕೇಂದ್ರ ಸರಕಾರದೊಂದಿಗೆ ಚರ್ಚಿಸಿ, ಮನವರಿಕೆ ಮಾಡಿ ಸ್ವರ್ಣೋದ್ಯಮದಲ್ಲಿ ಮಿತಿಗಿಂತಲೂ ಕನಿಷ್ಠ ಶೇ. 3 ಬರುವಂತೆ ಮಾಡಲಾಗಿದೆ. ಕೇಂದ್ರ ಸರಕಾರವು ನೀತಿ ಆಯೋಗದ ಅಧೀನದಲ್ಲಿ ಎಲ್ಲ ರಂಗಗಳಲ್ಲಿಯೂ ಆಯಾಯ ಉದ್ಯಮಕ್ಕೆ ಸಂಬಂಧಪಟ್ಟವರೇ ಸದಸ್ಯರಾಗಿದ್ದ ಡೊಮೆಸ್ಟಿಕ್‌ ಕೌನ್ಸಿಲ್‌ (ದೇಶೀಯ ಮಂಡಳಿ) ಅನ್ನು ಸ್ಥಾಪಿಸಿದ್ದು, ಜೆಮ್‌ ಆ್ಯಂಡ್‌ ಜುವೆಲರಿ ವಿಭಾಗಕ್ಕೂ ಕೌನ್ಸಿಲ್‌ ರಚಿಸಲಾಗಿದೆ.

ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಅಧೀನದಲ್ಲಿ ಬರುವ ಈ ಕೌನ್ಸಿಲ್‌ಗೆ ದೇಶದಲ್ಲಿರುವ ಆಯ್ದ 13 ಫೆಡರೇಶನ್‌ ಚೇರ್‌ಮನ್‌ಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದೆ. 13 ಜನರಲ್ಲಿ ನಾನೂ ಕೂಡ ಒಬ್ಬನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಜಯ ಆಚಾರ್ಯ ತಿಳಿಸಿದ್ದಾರೆ.

ಟಾಪ್ ನ್ಯೂಸ್

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

Malpe: ಕೋಳಿ ಅಂಕಕ್ಕೆ ದಾಳಿ, ಮೂವರು ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Kaup: ಮರಳು ಅಕ್ರಮ ಸಾಗಾಟ: ಟಿಪ್ಪರ್‌ ಪೊಲೀಸರ ವಶಕ್ಕೆ

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.