ಚರಿತ್ರೆ ಪುರಾಣವಾಗುತ್ತಿದೆ: ಬೇಸರ
Team Udayavani, May 7, 2019, 3:05 AM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚರಿತ್ರೆ ಪುರಾಣವಾಗಿ ಬದಲಾಗಿದ್ದು, ಭಜನೆ ಮಾಡುವವರ ಸಂಖ್ಯೆ ಅಧಿಕವಾಗಿದೆ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಸೋಮವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯದ ವಿಭಿನ್ನ ನೆಲೆಗಳು’, ಎಂಬ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಿ.ಎಸ್.ಎಸ್ ಅವರ;
ಹೊತ್ತಿಕೊಂಡಿದೆ ಬೆಂಕಿ ಮಂದಿರಕ್ಕೆ, ಮಸೀದಿಗೆ
ಚರ್ಚಿಗೆ, ಚಲಿಸುವ ರೈಲಿಗೆ, ಓಡುತ್ತಿರುವ ಬಸ್ಸಿಗೆ
ಬಹುಕಾಲದಿಂದ ಹೇಗೋ ಕಾಪಾಡಿಕೊಂಡು ಬಂದಿರುವ
ಪಾರಿವಾಳಗಳ ಕನಸಿನ ಗೂಡಿಗೆ..
ಎಂಬ, “ಅಗ್ನಿ ಪರ್ವ’ದ ಸಾಲುಗಳನ್ನು ನೆನಪಿಸಿದರು. “ಸಾಮಾಗಾನ’ದಿಂದ ಆರಂಭವಾದ ಜಿ.ಎಸ್.ಎಸ್ ಅವರ ಕವನದ ಸಾಲುಗಳು “ಅಗ್ನಿಪರ್ವ’ದ ಮೂಲಕ ಮುಕ್ತಾಯವಾಯಿತು. ಇದಕ್ಕೆ ವ್ಯವಸ್ಥೆ ಕಾರಣವಾಯಿತ್ತು. ಎಲ್ಲವನ್ನೂ ಗ್ರಹಿಸುತ್ತಿದ್ದ ಅವರು, ಕಾವ್ಯಗಳ ಮೂಲಕ ವ್ಯವಸ್ಥೆಯ ವಿರುದ್ಧದ ಸಿಟ್ಟು, ಆಕ್ರೋಶ ಹೊರಹಾಕಿದರು ಎಂದು ಹೇಳಿದರು.
ಜಿ.ಎಸ್.ಎಸ್ ಅವರು ಹಳೆಯ ತಲೆಮಾರಿನರೊಂದಿಗೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿ, ಹೊಸ ತಲೆಮಾರಿಗೆ ಪ್ರೇರಕ ಶಕ್ತಿಯಾಗಿ ಮಾಡಿದ ಕಾರ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಧ್ಯಾಯವಾಗಿ ಉಳಿದಿದೆ. ಕಾವ್ಯ ಮತ್ತು ವಿಮರ್ಶೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಕಾವ್ಯ ನನಗೆ ಸಹಜವಾಗಿ ಬಂದಿದ್ದು, ವಿಮರ್ಶೆ ಕುವೆಂಪು ಅವರಿಂದ ಕಲಿತದ್ದು ಎಂದು ಹೇಳುತ್ತಿದ್ದರು ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿ ಶ್ರೇಯಸ್ಸು ಜಿ.ಎಸ್.ಎಸ್ ಅವರಿಗೆ ಸಲ್ಲುತ್ತದೆ. ಕುವೆಂಪು ವೈಚಾರಿಕ ಮುಖವನ್ನು ಸುಗಮ ಸಂಗೀತದ ಮೂಲಕ ಜನರಿಗೆ, ಜಗತ್ತಿಗೆ ತಲುಪಿಸಿದ ಕೀರ್ತಿ ಕೂಡ ಶಿವರುದ್ರಪ್ಪ ಅವರದ್ದಾಗಿದೆ ಎಂದು ಸ್ಮರಿಸಿದರು.
“ಜಿ.ಎಸ್.ಎಸ್ ಅವರ ಕಾವ್ಯ ಜಗತ್ತು’, ಕುರಿತು ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿದರು. ಜಿ.ಎಸ್.ಎಸ್ ಪ್ರತಿಷ್ಠಾನ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ಡಾ.ಎಂ.ಎಸ್.ಆಶಾದೇವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.