ಸ್ಕಾಲರ್ ಕಾಲೊನಿ
Team Udayavani, May 7, 2019, 9:23 AM IST
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸುವ ಸ್ಕಾಲರ್ ಶಿಪ್‌ಗಳ ಪಟ್ಟಿ ಈ ಅಂಕಣದಲ್ಲಿ ಪ್ರಕಟವಾಗಲಿದೆ…
1. ಫುಲ್‌ಬ್ರೈಟ್- ನೆಹರು ಡಾಕ್ಟೋರಲ್ ಫೆಲೋಶಿಪ್ 2020- 2021ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನಿಸಿದೆ. ಭಾರತದಲ್ಲಿರುವ ಪಿ.ಎಚ್.ಡಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಸಹಾಯದಿಂದ ಅಮೆರಿಕದ ಆಯ್ದ ವಿವಿಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ.
ಅರ್ಹತೆ: ಪಿ.ಎಚ್.ಡಿ ಮಾಡಲು ಕಾಲೇಜುಗಳಲ್ಲಿ ಹೆಸರು ನೋಂದಾಯಿಸಿರುವವರು ಮತ್ತು ಶೈಕ್ಷಣಿಕವಾಗಿ ಅಥವಾ ಔದ್ಯೋಗಿಕವಾಗಿ ನಿಯುಕ್ತಿಗೊಂಡಿರುವ ಪಿ.ಎಚ್.ಡಿ ಪದವೀಧರರು
ವಿದ್ಯಾರ್ಥಿವೇತನ ಮೊತ್ತ : ಪ್ರಯಾಣ ಭತ್ಯೆ, ಆರೋಗ್ಯ ಮತ್ತು ವಾಸ್ತವ್ಯದ ಖರ್ಚನ್ನು ವಿದ್ಯಾರ್ಥಿವೇತನ ಭರಿಸಲಿದೆ.
ಕಡೆಯ ದಿನಾಂಕ: ಮೇ 15, 2019
ಅರ್ಜಿ ಸಲ್ಲಿಕೆ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/udaya/FDR4
2. ಬ್ರಿಟಿಷ್ ಕೌನ್ಸಿಲ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಇದರಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ಯು.ಜಿ ಪದವಿ ಮತ್ತು ಮಾಸ್ಟರ್ ಪದವಿ ಪೂರೈಸಿಕೊಳ್ಳಬಹುದು.
ಅರ್ಹತೆ: ವಿದ್ಯಾರ್ಥಿಗಳು ಪಿ.ಯು.ಸಿ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು.
ವಿದ್ಯಾರ್ಥಿವೇತನ ಮೊತ್ತ: ಯು.ಜಿ ಪದವಿ ಆಕಾಂಕ್ಷಿಗಳಿಗೆ ಪೂರ್ತಿ ಶಿಕ್ಷಣ ಶುಲ್ಕ ವಿನಾಯಿತಿ ಹಾಗೂ ಮಾಸ್ಟರ್ ಆಕಾಂಕ್ಷಿಗಳಿಗೆ ಅರ್ಧದಷ್ಟು ಶಿಕ್ಷಣ ಶುಲ್ಕ ವಿನಾಯಿತಿ ದೊರೆಯಲಿದೆ.
ಕಡೆಯ ದಿನಾಂಕ: ಮೇ 15, 2019
ಅರ್ಜಿ ಸಲ್ಲಿಕೆ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/udaya/BCGE254
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.