ಮಾದರಿ ನೀತಿ ಸಂಹಿತೆ ಜಾರಿಗೆ ತನ್ನಿ
ಎಂಸಿಸಿ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ•ಗಣ್ಯರ ವಾಹನ ತಪಾಸಣೆಗೂ ಸೂಚನೆ
Team Udayavani, May 7, 2019, 10:13 AM IST
ಕಲಬುರಗಿ: ಚಿಂಚೋಳಿ ಚುನಾವಣಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಸಾಮಾನ್ಯ ವೀಕ್ಷಕ ಬಿ.ರಾಮರಾವ ಸಭೆ ನಡೆಸಿದರು.
ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸುಸೂತ್ರವಾಗಿ ನಡೆಯಲು ನೇಮಿಸಲಾಗಿರುವ ವಿವಿಧ ತಂಡಗಳು ತಮ್ಮ ಜವಾಬ್ದಾರಿಯನ್ನು ಅರಿತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಎಂಸಿಸಿ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬಿ.ರಾಮರಾವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಂಚೋಳಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಬಕಾರಿ ಮತ್ತು ಪೊಲೀಸ್ ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿವಿಟಿ, ಎಸ್.ಎಸ್.ಟಿ., ವಿ.ಎಸ್.ಟಿ. ಸೇರಿದಂತೆ ಇನ್ನಿತರ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಿಂಚೋಳಿ ಸೂಕ್ಷ್ತ್ರ ಕ್ಷೇತ್ರವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತುಂಬಾ ಜಾಗರೂಕತೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ ಎಂದರು.
ಎಂ.ಸಿ.ಸಿ. ಉಲ್ಲಂಘನೆಯಾದಲ್ಲಿ ದೂರು ದಾಖಲಿಸುವ, ಸಾಕ್ಷ್ತ್ರಗಳನ್ನು ಸಂಗ್ರಹಿಸುವ ಬಗ್ಗೆ, ಬಹಿರಂಗ ಸಭೆ-ಸಮಾರಂಭದ ವಿಡಿಯೋ ಚಿತ್ರೀಕರಣ ಕುರಿತು ಸವಿವರವಾಗಿ ತಂಡಗಳಿಗೆ ಮಾಹಿತಿ ನೀಡಿದ ಸಾಮಾನ್ಯ ವೀಕ್ಷಕರು, ತಂಡದ ಕಾರ್ಯನಿರ್ವಹಣೆ ಬಗ್ಗೆ ತಂಡಗಳಿಂದ ಮಾಹಿತಿ ಪಡೆದರು.
ಚೆಕ್ ಪೋಸ್ಟ್‌ಗಳ ಮೂಲಕ ಹಾದುಹೋಗುವ ಗಣ್ಯರ ವಾಹನವು ಸೇರಿದಂತೆ ಪ್ರತಿ ವಾಹನವನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಚೆಕ್ ಪೋಸ್ಟ್ ಸಿಬ್ಬಂದಿ ಕೂಲಂಕುಷವಾಗಿ ವಾಹನ ತಪಾಸಣೆ ನಡೆಸಬೇಕು. ಸಭೆ-ಸಮಾರಂಭಗಳಲ್ಲಿ ಅವಹೇಳನ ಭಾಷಣ ಮಾಡಿದಲ್ಲಿ ಅಂತಹವರ ಮೇಲೆ ಪ್ರಕರಣ ದಾಖಲಿಸಲು ನಿಖರ ಮತ್ತು ಸ್ಪಷ್ಟವಾಗಿ ಕಾಣುವ ಹಾಗೂ ಕೇಳಿಸುವಂತೆ ವಿಡಿಯೋ ಕ್ಲಿಪ್‌ಗ್ಳನ್ನು ವಿಎಸ್‌ಡಿ ತಂಡಗಳು ಸಂಗ್ರಹಿಸಬೇಕು ಎಂದರು.
ಅಬಕಾರಿ ತಂಡವು ಅನಧಿಕೃತವಾಗಿ ಮದ್ಯ ಸಾಗಾಟಕ್ಕೆ ಬ್ರೆಕ್ ಹಾಕಲು ತಮ್ಮ ಗುಪ್ತಚರ ಬಲವನ್ನು ಬಲಪಡಿಸಿಕೊಂಡು ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅಬಕಾರಿ ತಂಡಕ್ಕೆ ಸೂಚನೆ ನೀಡಿದರು.
ವೆಚ್ಚ ವೀಕ್ಷಕ ಜೆ. ಆನಂದಕುಮಾರ ಮಾತನಾಡಿ, ಅನುಮತಿವಿಲ್ಲದೆ ಉಪಯೋಗಿಸುವ ವಸ್ತುಗಳ ಮತ್ತು ವಾಹನಗಳ ಬಾಡಿಗೆ ವೆಚ್ಚವನ್ನು ಖರ್ಚು ವೆಚ್ಚದ ಲೆಕ್ಕಕ್ಕೆ ತೆಗೆದುಕೊಳ್ಳುವುದಲ್ಲದೆ ಉಲ್ಲಂಘಿಸದವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಹಂತದಲ್ಲಿ ವಿವಿಧ ವಸ್ತುಗಳ ಬಳಕೆಗೆ ದರ ನಿಗದಿಪಡಿಸಿದ್ದು, ಅದರಂತೆ ನಿಖರವಾಗಿ ವೆಚ್ಚದ ಲೆಕ್ಕವನ್ನು ಆಯಾ ಪಕ್ಷ, ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಾರ್ವಜನಿಕ ಸಭೆ-ಸಮಾರಂಭ ಮುಗಿದ ಎರಡು ಗಂಟೆಯಲ್ಲಿ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಸ್ಥಳದಲ್ಲಿನ ಎಲ್ಲಾ ಪರಿಕರಗಳನ್ನು ಅಲ್ಲಿಂದ ತೆರವುಗೊಳಿಸಬೇಕಾಗುತ್ತದೆ ಎಂದರು.
ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ., ಸಹಾಯಕ ಚುನಾವಣಾಧಿಕಾರಿ ಪಂಡಿತ ಬಿರಾದಾರ, ಚಿಂಚೋಳಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಕ್ಷಯ ಸೇರಿದಂತೆ ಚಿಂಚೋಳಿ ಉಪ ಚುನಾವಣೆಗೆ ನೇಮಿಸಲಾಗಿರುವ ವಿವಿಧ ತಂಡಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಚೆಕ್ ಪೋಸ್ಟ್‌ಗಳಿಗೆ ಭೇಟಿ
ಸಭೆ ನಂತರ ಸಾಮಾನ್ಯ ವೀಕ್ಷಕ ಬಿ.ರಾಮರಾವ ಹಾಗೂ ವೆಚ್ಚ ವೀಕ್ಷಕ ಜೆ. ಆನಂದಕುಮಾರ ಅವರು ಕ್ಷೇತ್ರದ ಸುಲೇಪೇಟ್, ನಿಡಗುಂದಾ, ತಡಕಲ್ ಹಾಗೂ ಕಾಳಗಿ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿ ಎಸ್.ಎಸ್.ಟಿ. ತಂಡಗಳು ನಡೆಸುವ ತಪಾಸಣಾ ಕಾರ್ಯವನ್ನು ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.