ಬಸವೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ
80 ಕೆಜಿ ತೂಕವುಳ್ಳ ನಾಲ್ಕು ನಂದಿ ಧ್ವಜಗಳಿಗೆ ಬಾಸಿಂಗ್ ಕಟ್ಟಿ ಶೃಂಗಾರ
Team Udayavani, May 7, 2019, 10:20 AM IST
ಬಸವಕಲ್ಯಾಣ: ಮಹಾತ್ಮ ಬಸವೇಶ್ವರ ಜಯಂತಿ ಅಂಗವಾಗಿ ವಿದ್ಯುತ್ ದ್ವೀಪಗಳಿಂದ ಅಲಂಕಾರವಾದ ಬಸವೇಶ್ವರರ ದೇವಸ್ಥಾನ.
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದ ಅಂಗವಾಗಿ ಮೂರು ದಿನ ನಡೆಯಲಿರುವ ಉತ್ಸವಕ್ಕೆ ಸಕಲ ಸಿದ್ಧತೆ ಜತಗೆ, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಕಮಿಟಿ ಬಸವ ಜಯಂತಿ ನಿಮಿತ್ತ ವಿಶ್ವಗುರು ಬಸವಣ್ಣನವರ ದೇವಸ್ಥಾನ ಹಾಗೂ ನಗರದ ಬಸವೇಶ್ವರ ವೃತ್ತಕ್ಕೆ ಬಣ್ಣ ಬಳಿದು ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಿ ವಿಶ್ವಗುರು ಬಸವಣ್ಣ ಮತ್ತು ಶರಣರ ಸಂದೇಶಗಳು ಸಾರುವಂತೆ ಬ್ಯಾನರ್ ಅಳವಡಿಸಲಾಗಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಬೆಳ್ಳಿ ತೊಟ್ಟಿಲಿನ ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ನೀಲಕಂಠೇಶ್ವರ ಮಹಿಳಾ ಡೊಳ್ಳು ಕುಣಿತ ಸಂಘದ 10 ಜನ ಕಲಾವಿದರು, ಔರಾದ (ಬಿ) ಪಟ್ಟಣದ ಹೆಣ್ಣು ಮಕ್ಕಳ ಹಲಗಿ ತಂಡದ 8 ಜನ ಕಲಾವಿದರು, ತೋಗಲೂರ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಕೋಲಾಟ ತಂಡ ಮತ್ತು ಅಕ್ಕಮಹಾದೇವಿ ಕೋಲಾಟ ತಂಡದ ಕಲಾವಿದರು ಪ್ರದರ್ಶನ ಜತೆಗೆ ಕಲಖೋರಾದ ಆಶಾ ರಾಠೊಡ ಅವರ ಲಂಬಾಣಿ ನೃತ್ಯ ಪ್ರದರ್ಶಗೊಳ್ಳಲಿದೆ. ಬಸವೇಶ್ವರ ರಥ ಮೈದಾನದಲ್ಲಿ ಮೇ 8-9ರಂದು ಸಂಜೆ 7:00ಕ್ಕೆ ವಿವಿಧ ಕಲಾ ತಂಡಗಳಿಂದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಶರಣು ದೇಸಾಯಿ ಅವರಿಂದ ಹಾಸ್ಯ ದೌತಣ, ಚಿನ್ನಮ್ಮ ದೊಡ್ಡಮನಿ ಹಾಗೂ ಸಂಗಡಿಗರಿಂದ ಜಾನಪದ ಗಾಯನ ನಡೆಯಲಿದೆ.
ಮುತ್ಯಾನ ಬಬಲಾದ ಗ್ರಾಮದ ಚನ್ನವೀರೇಶ್ವರ ನಾಟ್ಯ ಸಂಘದ ಕಲಾವಿದರಿಂದ ತಾಯಿ ಕರಳು ನಾಟಕ ಪ್ರದರ್ಶನವಾಗಲಿದೆ. ಬಸವ ಜಯಂತಿ ನಿಮಿತ್ತ ಲಿಂ| ಬಸವಣಪ್ಪ ರಗಟೆ ಅವರ ಸ್ಮರಣಾರ್ಥ ನಗರದ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ರತ್ನಮ್ಮ ಬ. ರಗಟೆ ಅವರಿಂದ ಮೂರು ದಿನ ನಿರಂತರವಾಗಿ ಅನ್ನ ದಾಸೋಹ ನಡೆಯಲಿದೆ. ದೇವಸ್ಥಾನದ ವತಿಯಿಂದ ನಗರದ ಪರುಷ ಕಟ್ಟಾದಲ್ಲಿ ಎರಡು ದಿನ ಬೆಳಗ್ಗೆ 11:00ರಿಂದ ರಾತ್ರಿ 10:00ರ ವರೆಗೆ ದಾಸೋಹ ನಡೆಯಲಿದೆ.
ಬಸವ ಜಯಂತಿ-ಜಾತ್ರೆ ನಿಮಿತ್ತ ನಂದಿಧ್ವಜ ಸಿದ್ಧಗೊಂಡಿದೆ. 80 ಕೆಜಿ ತೂಕವುಳ್ಳ ನಾಲ್ಕು ನಂದಿ ಧ್ವಜಗಳಿಗೆ ಬಾಸಿಂಗ್ ಮತ್ತು 100 ಕೆಜಿವುಳ್ಳ ಮೊದಲನೇ ವಿಶೇಷ ನಂದಿ ಧ್ಜಜಕ್ಕೆ ಫಡಿ (ನಾಗರ ಹೇಡೆ) ಕಟ್ಟಿ ಶೃಂಗರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.