ಹೇಗಿದ್ದಾಳೆ ಗೊತ್ತಾ ರಾಕಿ ಭಾಯ್ ಪುಟಾಣಿ ಪಾಪು?
ತಮ್ಮ ಮಗಳ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ರಾಕಿಂಗ್ ಸ್ಟಾರ್
Team Udayavani, May 7, 2019, 12:37 PM IST
ಬೆಂಗಳೂರು: ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಮೊದಲ ಬಾರಿಗೆ ತಮ್ಮ ಪುಟ್ಟ ಮಗಳ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಮುದ್ದು ಮುಖದ ಹಾಲುಗೆನ್ನೆಯ ಮಗಳ ಚಿತ್ರವನ್ನು ಯಶ್ ಅವರು ಹಂಚಿಕೊಂಡಿದ್ದಾರೆ. ಅಕ್ಷಯಾ ತೃತೀಯ ದಿನದಂದು ತಮ್ಮ ಪುಟ್ಟ ಮಗಳ ಫೊಟೋವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿ ಯಶ್ ಈ ಮೊದಲು ಹೇಳಿಕೊಂಡಿದ್ದರು.
‘ನನ್ನ ಜಗತ್ತನ್ನು ಆಳುವ ಸಾಮ್ರಾಜ್ಞಿಯನ್ನು ಇವತ್ತು ನಿಮಗೆ ಪರಿಚಯಿಸುತ್ತಿದ್ದೇನೆ’ ಎಂಬ ಬರಹದೊಂದಿಗೆ ಈ ಮುದ್ದಾದ ಫೊಟೋವನ್ನು ಯಶ್ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈಕೆಗಿನ್ನೂ ನಾಮಕರಣ ಆಗಿಲ್ಲದಿರುವ ಕಾರಣ ನೀವು ಬೇಕಾದರೆ ಈಕೆಯನ್ನು ‘ವೈ.ಆರ್.’ ಎಂದು ಕರೆಯಬಹುದು ಎಂದೂ ಯಶ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Presenting to you ” The girl who rules my world ”
Since we haven’t named her yet, let’s call her baby YR for now
Do shower your love n blessings on her too pic.twitter.com/x62kV5sEAC— Yash (@TheNameIsYash) May 7, 2019
ಈ ನನ್ನ ಮುದ್ದು ರಾಜಕುಮಾರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎನ್ನುವುದು ರಾಕಿಂಗ್ ಸ್ಟಾರ್ ಮನವಿ. ಯಶ್-ರಾಧಿಕಾ ದಂಪತಿಯ ಈ ಮುದ್ದು ಮಗುವಿಗೆ ಆದಷ್ಟು ಬೇಗ ಮುದ್ದಾದ ಹೆಸರು ಬರಲಿ ಎಂಬುದು ನಮ್ಮ ಆಶಯ.
ಇನ್ನೊಂದು ಟ್ವೀಟ್ ನಲ್ಲಿ ಯಶ್ ಅವರು ತಮ್ಮ ಬೆರಳನ್ನು ಮಗಳ ಪುಟಾಣಿ ಕೈಗಳು ಹಿಡಿದಿರುವ ಫೊಟೋ ಹಾಕಿಕೊಂಡಿದ್ದಾರೆ. ಅಪ್ಪನಾಗುವ ಹಾದಿಯಲ್ಲಿ ನನ್ನನ್ನು ಮುನ್ನಡೆಸಿಕೊಂಡು ಹೋಗುವ ಪುಟ್ಟ ಕೈಗಳಿವು. ಈಕೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ ಎಂದೂ ಬರೆದುಕೊಂಡಿದ್ದಾರೆ.
ಕ್ಯೂಟ್ ಕ್ಯೂಟ್ ಆಗಿರುವ ಈ ಮುದ್ದು ಮಗುವಿಗೆ ನಾವೂ ನೀವೂ ಸೇರಿ ಒಂದು ಬೆಸ್ಟ್ ವಿಶಷ್ ಹೇಳಿಬಿಡೋಣ ಅಲ್ವಾ..?
The little hand, clasping my finger, guiding me on my way to fatherhood. Falling in love with someone without seeing is an amazing feeling but now that I do see her, I love her more than ever ❤️ pic.twitter.com/1q1Jnok6YM
— Yash (@TheNameIsYash) December 3, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.