ನೀರಿನ ಬವಣೆ ನಿಯಂತ್ರಣಕ್ಕೆ ಸಿದ್ಧತೆ

ಮೇವು ಬ್ಯಾಂಕ್‌, ಟ್ಯಾಂಕರ್‌ ನೀರು ವಿತರಣೆಗೆ ಜಿಲ್ಲಾಡಳಿತ ತಯಾರಿ • ಬರ ನಿರ್ವಹಣೆ ಅನುದಾನ ಉಪಯೋಗ

Team Udayavani, May 7, 2019, 4:08 PM IST

tumkur-tdy-1..

ತುಮಕೂರು ಜಿಲ್ಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು.

ತುಮಕೂರು: ಕಳೆದ ಮುಂಗಾರು-ಹಿಂಗಾರು ಮಳೆಗಳೆರಡೂ ಕೈಕೊಟ್ಟವು. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಸಾವಿರದ ಐನೂರು ಅಡಿ ಕೊರೆದರೂ ಒಂದನಿ ನೀರು ಬತ್ತಿಲ್ಲ. ಈವರೆಗೂ ಹೇಗೋ ತೆಂಗು ಅಡಕೆ ಕಾಪಾಡಿಕೊಂಡು ಬಂದ್ವಿ ಮುಂದೆ ನಮ್ಮ ಗತಿಯೇನು? ಬೆಲೆ ಕುಸ್ದೈತೆ, ಬೆಳೆ ಒಣಗ್ತಿೖತೆ. ನಮ್ಮ ಗೋಳು ಸರಕಾರಕ್ಕೆ ಮುಟ್ತಿಲ್ಲ. ನಮ್ಮನ್ನು ಕೇಳ್ಳೋರ್ಯಾರು ಸ್ವಾಮಿ ಎನ್ನುತ್ತಿದ್ದಾರೆ ರೈತರು.

ಕಳೆದ 5-6 ವರ್ಷಗಳಿಂದಲೂ ನಿರಂತರವಾಗಿ ಮಳೆ ಕೈಕೊಟ್ಟು ಬರ ಆವರಿಸಿದೆ. ಹೇಗೋ ಜೀವನ ಸಾಗಿಸಲು ಅನುವಾಗುತ್ತಿದ್ದ ತೋಟಗಾರಿಕಾ ಬೆಳೆಗಳೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆಗಳಲ್ಲಿ ಅಂತರ್ಜಲ ಕುಸಿದಿದೆ. ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುತ್ತಿದ್ದಾರೆ.

ಈ ನಡುವೆ ಜಿಲ್ಲೆಯಲ್ಲಿ ಇರುವ ಜಾನುವಾರು ಗಳನ್ನು ಸಂರಕ್ಷಿಸುವುದು ಕಷ್ಟವಾಗುತ್ತಿದ್ದು, ಜಾನು ವಾರುಗಳಿಗೆ ಮೇವು, ನೀರಿಲ್ಲದೆ.

ಜಾನುವಾರುಗಳ ಸಂತೆಗಳಲ್ಲಿ ಸಿಕ್ಕ ಹಣಕ್ಕೆ ಮಾರುತ್ತಿದ್ದಾರೆ. ಜಾನು ವಾರುಗಳ ಸಂರಕ್ಷಣೆಗಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 24 ಮೇವು ಬ್ಯಾಂಕ್‌ಗಳನ್ನು ತೆರೆದಿದ್ದು, ಇನ್ನು 12 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಮಾಡುವಲ್ಲಿ ಜಿಲ್ಲಾಡಳಿತ ಯಶ್ವಸಿಯಾಗಿದ್ದು, ಗೋವುಗಳಿಗೆ ನೀರು, ಹುಲ್ಲು ಸೌಲಭ್ಯಗಳನ್ನು ಕೊಡಲು ಸರ್ಕಾರ ಸಿದ್ಧವಾಗಿದೆ. ಪಡೆಯಲು ರೈತರು ಸಿದ್ಧವಾಗಬೇಕಿದೆ.

ಎಲ್ಲೆಲ್ಲಿ ಇವೆ ಮೇವಿನ ಬ್ಯಾಂಕ್‌ಗಳು: ಜಿಲ್ಲೆಯಲ್ಲಿರುವ ಗೋವುಗಳನ್ನು ರಕ್ಷಿಸಲು ಜಿಲ್ಲೆಯ 57 ಹೋಬಳಿಗಳಲ್ಲಿ ಜಿಲ್ಲಾಡಳಿತ 24 ಮೇವಿನ ಬ್ಯಾಂಕ್‌ಗಳನ್ನು ತೆರೆದಿದೆ. ಕೊರಟಗೆರೆ ತಾಲೂಕಿನ ಕಸಬಾ ಬಯಲಾಂಜನೇಯ ದೇವಸ್ಥಾನದ ಬಳಿ, ಹೊಳ್ಳವನಹಳ್ಳಿ ಕ್ಯಾಮೇನಹಳ್ಳಿ ಆಂಜನೇಯ ದೇವಸ್ಥಾನದ ಬಳಿ, ಕೊಳಾಲ ಬಸವಣ್ಣನ ದೇವಸ್ಥಾನದ ಬಳಿ ತೋವಿನಕೆರೆ ಸಂತೆ ಬೀದಿ, ಚಿಕ್ಕನಾಯಕನಹಳ್ಳಿ, ಚಿ.ನಾ.ಹಳ್ಳಿ, ಕಸಬಾ ಎಪಿಎಮ್‌ಸಿ ಯಾರ್ಡ್‌, ಕಂದಿಕೆರೆ ಶಾಂತಪ್ಪನ ಗುಡಿ, ಹುಳಿಯಾರ್‌ ಎಪಿಎಮ್‌ಸಿ ಯಾರ್ಡ್‌, ಅಂದನಕೆರೆ ಸಮುದಾಯ ಭವನ, ಶೆಟ್ಟಿಕೆರೆ ಸಮುದಾಯ ಭವನ, ಮಧುಗಿರಿ, ಕೊಡಿಗೇನಹಳ್ಳಿ ಪೊಲೀಸ್‌ ಮೈದಾನ, ಬಡವನಹಳ್ಳಿ ತೋಟಗಾರಿಕೆ ಫಾರಂ, ವೈ.ಎನ್‌.ಹೊಸಕೋಟೆ, ನಿಡುಗಲ್ಲು ಸಿ.ಕೆ.ಪುರ. ತಿಪಟೂರು- ಕಸಬಾ ಕೊನೆಹಳ್ಳಿ ಎಪಿಎಮ್‌ಸಿ ಯಾಡ್‌, ಹೊವನಹಳ್ಳಿ ಮುನಿಯಪ್ಪನ ಆಲದ ಮರ, ಸಿರಾ ಕಸಬಾ ಎಪಿಎಮ್‌ಸಿ ಯಾರ್ಡ್‌, ಕಳ್ಳಂಬೆಳ್ಳ ಚಿಕ್ಕನಾಹಳ್ಳಿ ರೈತರ ತರಬೇತಿ ಕೇಂದ್ರ, ಗೌಡಗೆರೆ ಪಟ್ಟನಾಯಕನಹಳ್ಳಿ ಮಠ, ಬುಕ್ಕಾಪಟ್ಟಣ್ಣ ಬೆಂಚಿಗೇಟ್, ಹುಲಿಕುಂಟೆ ಗಂಡಿಹಳ್ಳಿ ಮಠ, ತುರುವೇಕೆರೆ ಕುಣಿಕೇನಹಳ್ಳಿ ಫಾರಂ, ದಬ್ಬೇಘಟ್ಟ ಮಾಯಸಂದ್ರ ಹಳೆಯ ಆಸ್ಪತ್ರೆ ಆವರಣ, ದಂಡಿನ ಶಿವರ ಎಪಿಎಮ್‌ಸಿ ಯಾರ್ಡ್‌ಗಳಲ್ಲಿ ಮೇವಿನ ಬ್ಯಾಂಕ್‌ಗಳನ್ನು ತೆರೆಯಲಾಗಿದೆ.

128 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು : ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಲ್ಲಿಯೇ 128 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.

ತುಮಕೂರು ತಾಲೂಕಿನ 7 ಗ್ರಾಪಂ ವ್ಯಾಪ್ತಿಯ 7 ಗ್ರಾಮ, ಗುಬ್ಬಿ ತಾಲೂಕಿನ 12 ಗ್ರಾ.ಪಂ. 22 ಗ್ರಾಮ, ಚಿಕ್ಕನಾಯಕನಹಳ್ಳಿಯ 2 ಗ್ರಾ.ಪಂ. ವ್ಯಾಪ್ತಿಯ 2 ಗ್ರಾಮ, ಮಧುಗಿರಿ 9 ಗ್ರಾ.ಪಂ.ನ 12 ಗ್ರಾಮಗಳು, ಕುಣಿಗಲ್ನ 6 ಗ್ರಾ.ಪಂ.ನ 13 ಗ್ರಾಮಗಳು, ಕೊರಟ ಗೆರೆ 9 ಗ್ರಾ.ಪಂ.ನ 15 ಗ್ರಾಮಗಳು, ಪಾವಗಡ 12 ಗ್ರಾ.ಪಂ.23 ಗ್ರಾಮಗಳು, ತುರುವೇಕೆರೆ 5 ಗ್ರಾ.ಪಂ.ನ 11 ಗ್ರಾಮಗಳು, ಶಿರಾ, 9 ಗ್ರಾ.ಪಂ.ನ 11 ಗ್ರಾಮಗಳು ತಿಪಟೂರು 6 ಗ್ರಾ.ಪಂ. 7 ಗ್ರಾಮಗಳು ಸೇರಿದಂತೆ ಜಿಲ್ಲೆಯ 77 ಗ್ರಾಪಂ ವ್ಯಾಪ್ತಿಯ 128 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 481 ಟ್ರಿಪ್‌ನಲ್ಲಿ ಕುಡಿಯುವ ನೀರನ್ನು ಟ್ಯಾಂಕ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.

ಬರ ನಿರ್ವಹಣೆಗೆ 5.33 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಬರ ನಿರ್ವ ಹಣೆಗಾಗಿ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ 1ಕೋಟಿ ಅನುದಾನ ನಿಗದಿಯಾಗಿದ್ದು, 5.33 ಕೋಟಿ ರೂ. ಬಿಡುಗಡೆ ಆಗಿದೆ. ಜಿಲ್ಲೆಯ 10 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿದ್ದು, ಈಗಾಗಲೇ 24 ಕಡೆಗಳಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ.

ಜಿಲ್ಲೆಯ ಎಲ್ಲಾ ಕಡೆ ಕುಡಿಯವ ನೀರಿನ ಸಮಸ್ಯೆ ನಿವಾರಣೆ ಮಾಡಲು ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ ರೂ.ದಂತೆ ವಿತರಣೆ ಮಾಡಲಾಗಿದೆ. ಈ ಹಣದಲ್ಲಿ ಕೊಳವೆ ಬಾವಿ ದುರಸ್ತಿ, ಪಂಪು ಮೋಟಾರ್‌, ಪೈಪ್‌ ಲೈನ್‌ ಮಾಡಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ತಿಳಿಸಿದ್ದಾರೆ.

● ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Kunigal: ಹಿಂದು ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ : ಈದ್ ಮೀಲಾದ್ ಮೆರವಣಿಗೆ

Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ

Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು

Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು

8-koratagere

ಬಲಿಗಾಗಿ ಕಾದುಕುಳಿತ ಅರಳಿ ಮರ; ಯಾವುದೇ ಅಹಿತಕರ ಘಟನೆಯಾಗುವ ಮುನ್ನ ಅರಳಿ ಮರ ತೆರವುಗೊಳಿಸಿ

KN-Rajanna

Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್‌.ರಾಜಣ್ಣ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.