ಕಟ್ಟಕಡೆ ವ್ಯಕ್ತಿಗೂ ಅರ್ಥವಾಗುವಂತೆ ವಚನ ರಚನೆ
Team Udayavani, May 8, 2019, 3:00 AM IST
ಎಚ್.ಡಿ.ಕೋಟೆ: ಕಟ್ಟಕಡೆಯ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿ ಆ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ, ವಿಶ್ವದಲ್ಲಿ ಭಾರತವನ್ನು ಮುನ್ನಡೆಗೆ ತಂದ ಕೀರ್ತಿ ಬಸವಣ್ಣ ನವರಿಗೆ ಸಲ್ಲುತ್ತದೆ ಎಂದು ಉಪತಹಶೀಲ್ದಾರ್ ಆನಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವಣ್ಣನವರ 886 ನೇ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಡ್ಯ, ಕಂದಚಾರಗಳನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಬಸವಣ್ಣ ನವರು ಕ್ರಾಂತಿಕಾರಿ ಚಳವಳಿಯನ್ನು ಹುಟ್ಟು ಹಾಕಿದರು ಎಂದು ಸ್ಮರಿಸಿದರು.
ಕಾಯಕ ನಿಷ್ಠೆ: ಮಾನವಿಯತೆ ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿ ಸಮಾಜವನ್ನು ಸುಧಾರಣೆ ತಂದರು. ಶರಣು ಧರ್ಮದ ಪ್ರಸಾರ, ಕಾಯಕ ನಿಷ್ಠೆ, ಮಾನವತಾವಾದದಲ್ಲಿ ದೃಢ ವಿಶ್ವಾಸದಂತಹ ವಿಚಾರಗಳನ್ನು ವಚನಗಳ ಮೂಲಕ ಸಮಾಜದಲ್ಲಿ ಆಂದೋಲನ ಮೂಡಿಸಿ ಇಂದಿಗೂ ಸಮಾಜದ ಚಿಂತಕರಿಗೆ ದಾರಿದೀಪವಾಗಿ ಉಳಿದಿರುವವರು ಎಂದರೆ ಬಸವಣ್ಣ ಮಾತ್ರ. ಅವರು ರಚಿಸಿದ ವಚನಗಳು ಎಲ್ಲಿಯರೆಗೆ ಇರುತ್ತವೆಯೇ ಅಲ್ಲಿಯವರೆಗೂ ಅವರು ನಮ್ಮೊಳಗೆ ಇರುತ್ತಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು.
ಕಾಯಕದ ಮಹತ್ವ: ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರ್ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿ ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ನೀಡಿ ಸಮಾಜ ಪರಿವರ್ತನೆ ಕಾರಣರಾದವರು ಬಸವಣ್ಣನವರು. ನಾವೆಲ್ಲರೂ ಕಾಯಕದ ಮಹತ್ವವನ್ನು ಅರಿಯಬೇಕು, ಆತ್ಮವಲೋಕನ ಮಾಡಿಕೊಂಡು ಕೆಲಸ ಮಾಡಬೇಕು. ಅದರಲ್ಲೂ ಸರ್ಕಾರಿ ನೌಕರರು ಬಸವಣ್ಣನವರನ್ನು ಸ್ಫೂರ್ತಿಯಾಗಿ ತೆಗುದುಕೊಂಡು ಕೆಲಸ ನಿರ್ವಹಿಸಿಬೇಕು ಕಿವಿಮಾತು ಹೇಳಿದರು.
ಅನುಭವ ಮಂಟಪ: ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಬಸವಣ್ಣ ಅವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಳವಾದ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ನಾವು ಸಮಾಜ ಸುಧಾರಕರ ಅನುಭವವನ್ನು ಮುಂದುವರಿಸಿಕೊಂಡು ಹೋಗಿದ್ದೇ ಆದಲ್ಲಿ ಸುಖೀ ಕಲ್ಯಾಣ ರಾಜ್ಯ ನಿರ್ಮಾಣ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಆದಿಕರ್ನಾಟಕ ಮಹಾಸಭದ ತಾಲೂಕು ಅಧ್ಯಕ್ಷ ಮುದ್ದಮಲ್ಲಯ್ಯ, ಹೊಸಹಳ್ಳಿ ಬಿ.ವಿ. ಬಸವರಾಜು, ಮೊತ್ತ ಬಸವರಾಜಪ್ಪ, ವೈ.ಟಿ.ಮಹೇಶ್, ಜಕ್ಕಹಳ್ಳಿ ಮಹದೇವಪ್ರಸಾದ್, ಮನುಗನಹಳ್ಳಿ ಮಾದಪ್ಪ, ಭೀಮನಹಳ್ಳಿ ಸೊಮೇಶ್, ಚೌಡಹಳ್ಳಿ ಜವರಯ್ಯ, ಮಹದೇವಪ್ರಸಾದ್, ತಾಪಂ ಇಒ ದರ್ಶನ್, ಡಾ.ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಸಹಯಕ ನಿರ್ದೇಶಕ ಗೋಪಾಲಕೃಷ್ಣಮೂರ್ತಿ, ಉಪತಹಶೀಲ್ದಾರ್ ಪುಟ್ಟಸ್ವಾಮಿ, ಶಿಕ್ಷಣ ಸಂಯೋಜಕ ಮಹದೇವಯ್ಯ, ವೇದಕುಮಾರ್, ರವಿಚಂದ್ರ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.