ಬೋರ್‌ವೆಲ್‌ ರೀಚಾರ್ಜ್‌ ಮಾಡಿದರೆ 25 ವರ್ಷ ನೀರು ಖಾತ್ರಿ

Team Udayavani, May 8, 2019, 6:30 AM IST

borewell-recharge

ಉಡುಪಿ: ವರ್ಷಕ್ಕೆ ಸುಮಾರು 4,000 ಮಿ.ಮೀ. ಮಳೆಯಾಗುವ ಕರಾವಳಿಯಲ್ಲೂ ಮಳೆನೀರನ್ನು ಕೊಳವೆಬಾವಿಗೆ ಇಂಗಿಸುವ (ಬೋರ್‌ವೆಲ್‌ ರೀಚಾರ್ಜ್‌) ಅಗತ್ಯವನ್ನು ಮಳೆನೀರು ಕೊಯ್ಲು ತಜ್ಞ ಡಾ| ಎನ್‌.ಜಿ.ದೇವರಾಜ ರೆಡ್ಡಿ ಅವರು ಪ್ರತಿಪಾದಿಸಿದ್ದಾರೆ.

ಹೊಸೂರು ಕರ್ಜೆಯಲ್ಲಿ ಕೊಳವೆ ಬಾವಿಗೆ ನೀರು ಇಂಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಉದಯವಾಣಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

– ರೀಚಾರ್ಜ್‌ ಆವಶ್ಯಕತೆ ಯಾಕೆ?
ಇರುವ ಜಲಮೂಲವನ್ನು ಸಂರಕ್ಷಿ ಸುವ ಕೆಲಸ ಮಾಡಿದರೆ ಅವಿಭಜಿತ ದ.ಕ.
ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಆವಶ್ಯಕತೆ ಇರುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 60ಕ್ಕೂ ಅಧಿಕ ಕಡೆಗಳಲ್ಲಿ ರೀಚಾರ್ಜ್‌ ಮಾಡಲಾಗಿದೆ ಎಂದರು.

– ರೀಚಾರ್ಜ್‌ ಹೇಗೆ?
8 ಅಡಿ ಅಗಲ 10 ಅಡಿ ಆಳದ ಕೊಳವೆ ಬಾವಿ ಹೊಂಡಕ್ಕೆ ರೀಚಾರ್ಜ್‌ ಮಾಡಬೇಕಿದ್ದರೆ 180 ರಂಧ್ರಗಳಿರುವ ಕೇಸಿಂಗ್‌ ಪೈಪ್‌ ಅಳವಡಿಸಿಕೊಳ್ಳಬೇಕು. ಇದಕ್ಕೆ ಅಕ್ವಾ ಮೆಡ್‌, ನೈಲನ್‌ ಮೆಷ್‌, ಮರಳು ಹೊದಿಕೆಯ ಮೂರು ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. 5 ಅಡಿ ಎತ್ತರದಷ್ಟು ದಪ್ಪ ಕಲ್ಲು, 40 ಎಂಎಂ ಜಲ್ಲಿಕಲ್ಲನ್ನು 2 ಅಡಿ ಎತ್ತರಕ್ಕೆ ತುಂಬಬೇಕು. ಇದರ ಮೇಲಾºಗಕ್ಕೆ 20 ಎಂಎಂ ಜಲ್ಲಿಕಲ್ಲನ್ನು 1 ಅಡಿಗಳಷ್ಟು ತುಂಬಬೇಕು. ಮೇಲಾºಗದಲ್ಲಿ ಗೊಜ್ಜುಕಲ್ಲು ತುಂಬ ಬೇಕು. ಅನಂತರ ಮಳೆನೀರನ್ನು (ಮೇಲಿನಿಂದ ಬೀಳುವ ಮತ್ತು ಭೂಮಿ ಮೇಲೆ ಹರಿದು ಬರುವ) ನೇರವಾಗಿ ಇಂಗುಗುಂಡಿಗೆ ತುಂಬಿಸಬಹುದು. ಬಾವಿಗೆ ಮನೆ ಮಾಡಿನ ನೀರನ್ನು ನೇರವಾಗಿ ಇಳಿಸುವಂತೆ ಮಾಡಲು ಕೇವಲ 500-1,000 ರೂ. ಸಾಕು.

– ಎಷ್ಟು ವಿಧಾನಗಳಿವೆ?
ಕೊಳವೆಬಾವಿಯನ್ನು ರೀಚಾರ್ಜ್‌ ಮಾಡುವುದರಿಂದ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಲ್ಲಿ 15 ಪ್ರಕಾರದ ಮಾದರಿಗಳಿವೆ. 20ರಿಂದ 40ಸಾವಿರ ರೂ. ವೆಚ್ಚ ತಗಲುತ್ತದೆ. ಒಂದು ಬಾರಿ ರೀಚಾರ್ಜ್‌ ಪ್ರಕ್ರಿಯೆಯನ್ನು ನಿರ್ಮಿಸಿದರೆ ಅದು 25 ವರ್ಷ ಬಾಳಿಕೆ ಬರುತ್ತದೆ.

– ಚಿತ್ರದುರ್ಗ ಮುಂದೆ
ಕೊಳವೆ ಬಾವಿ ರೀಚಾರ್ಜ್‌ ಮಾಡು ವುದರಲ್ಲಿ ಚಿತ್ರದುರ್ಗ ಪ್ರಥಮ ಸ್ಥಾನದ ಲ್ಲಿದೆ. ಉದ್ಯೋಗ ಖಾತರಿ ಯೋಜನೆ ಮೂಲಕ 2015ರಲ್ಲಿ 5 ಸಾವಿರ ನಿರ್ಜೀವ ಕೊಳವೆ ಬಾವಿಗಳಿಗೆ ಪುನರ್ಜನ್ಮ ನೀಡಲಾ ಗಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ್‌ಗಳಲ್ಲಿ ಕೊಳವೆ ಬಾವಿ ರೀಚಾರ್ಜ್‌ ಮಾಡಿ ಇವರು ಯಶಸ್ಸು ಕಂಡಿದ್ದಾರೆ.

– ರಕ್ಷಣೆ ಹೇಗೆ?
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಲಕ್ಷಗಟ್ಟಲೆ ನೀರಿನ ಚಿಲುಮೆಯಿದೆ. ಅದನ್ನು ರಕ್ಷಿಸುವ ಜತೆಗೆ ಪಾರಂಪರಿಕ ಗಿಡಗಳ ಸಹಿತ ಅರಣ್ಯ ಬೆಳೆಸುವ ಕಾರ್ಯವೂ ನಡೆಯಬೇಕು. ನೀರಿನ ಒರತೆ ಹೆಚ್ಚಿಸಬೇಕು. ನದಿ, ತೋಡು ಇಂಗಿಸಬಾರದು. ಖಾಸಗಿ ಜಾಗದಲ್ಲಿ ಶೇ. 25ರಷ್ಟು ಜಾಗವನ್ನು ಅರಣ್ಯಕ್ಕೆ ಮೀಸಲಿರಿಸಬೇಕು. ಮನೆಯಲ್ಲಿ ಒಮ್ಮೆ ಬಳಸಿದ ನೀರನ್ನು 3ನೇ ಬಾರಿ ಬಳಸುವಂತೆ ಮಾಡಬೇಕು. ಉದಾಹರಣೆಗೆ ಸ್ನಾನ ಮಾಡಿದ, ಬಟ್ಟೆ ಒಗೆದ ನೀರನ್ನು ಗಿಡಗಳಿಗೆ, ವಾಹನ ತೊಳೆಯಲು ಬಳಸಬಹುದು.

ಎಕ್ರೆ ಜಾಗದಲ್ಲಿ ಕೋಟಿ ಲೀ. ನೀರು!
ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 1 ಎಕ್ರೆ ಪ್ರದೇಶದಲ್ಲಿ 1 ಕೋಟಿ ಲೀ. ನೀರು ಬೀಳುತ್ತದೆ. ಇದರಲ್ಲಿ ಉಳಿತಾಯವಾಗುವುದು ಶೇ.10 ಮಾತ್ರ. ಉಳಿದ ಶೇ. 90 ನೀರು ಪೋಲಾಗುತ್ತಿದೆ.

-ಡಾ| ಎನ್‌.ಜಿ.ದೇವರಾಜ ರೆಡ್ಡಿ , ಮಳೆ ಕೊಯ್ಲು ತಜ್ಞ

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

fraud-2

ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್‌ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

2

Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ

balli

Padubidri: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.