ಮಾಣಿ-ಮೈಸೂರು ರಸ್ತೆಯಲ್ಲಿ ಅಪಾಯಕಾರಿ ಸೇತುವೆ
ವಾಹನಗಳು ಗುದ್ದಿ ತೋಡಿಗೆ ಬಿದ್ದಿದೆ ತಡೆಗೋಡೆಯ ಕಲ್ಲು, ಪಿಲ್ಲರ್
Team Udayavani, May 8, 2019, 6:00 AM IST
ಅರಂತೋಡು: ಮಾಣಿ-ಮೈಸೂರು ರಸ್ತೆಯ ಕಡೆಪಾಲ ಎನ್ನುವಲ್ಲಿ ಮೋರಿಯ ಸೇತುವೆಯೊಂದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಸೇತುವೆಯ ತಡೆಗೋಡೆಗೆ ವಾಹನಗಳು ಢಿಕ್ಕಿ ಹೊಡೆದಿರುವ ಪರಿಣಾಮ ತಡೆಗೋಡೆಯ ಕಲ್ಲು, ಪಿಲ್ಲರ್‌ಗಳು ತೋಡಿಗೆ ಉರುಳಿ ಬಿದ್ದಿವೆ.
ಮಾಣಿ- ಮೈಸೂರು ರಸ್ತೆ ಅಭಿವೃದ್ಧಿ ಸಂದರ್ಭ ಸೇತುವೆ ಅಗಲ ಕಡಿಮೆ ಮಾಡಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಪ್ರಯಾಣಿಕರು, ವಾಹನ ಚಾಲಕರು ದೂರುತ್ತಿದ್ದಾರೆ. ಸೇತುವೆ ಬದಿಗಳನ್ನು ಸಾಕಷ್ಟು ಗಟ್ಟಿಯಾಗಿ ಎತ್ತರಕ್ಕೆ ನಿರ್ಮಾಣ ಮಾಡದೆ ಇರುವುದರಿಂದ ವಾಹನಗಳು ರಸ್ತೆಯಿಂದ ಕೆಳಗೆ ಉರುಳುತ್ತಿವೆ. ವಾಹನ ಚಾಲಕನ ಗಮನ ಸ್ವಲ್ಪ ಬೇರೆಡೆಗೆ ಹೋದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಅನೇಕ ಬಾರಿ ಅಪಘಾತ
ಕಡೆಪಾಲದಲ್ಲಿ ಅವೈಜ್ಞಾನಿಕ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಅನೇಕ ವಾಹನಗಳು ಇದರಿಂದ ಕೆಳಗಡೆ ಉರುಳಿ ಬಿದ್ದಿವೆ. ಹೆಚ್ಚಾಗಿ ವಾಹನಗಳು ರಾತ್ರಿ ಹೊತ್ತಿನಲ್ಲಿ ಕೆಳಗಡೆ ಉರುಳಿ ಬೀಳುತ್ತವೆ. ಇದರಿಂದ ಅಪಾಯ ಮತ್ತಷ್ಟು ಹೆಚ್ಚು.
ಪ್ರತಿಭಟನೆ ಎಚ್ಚರಿಕೆ
ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡಿದ್ದ ಹಿನ್ನೆಲೆಯಲ್ಲಿ ಕಡೆಪಾಲ ಸಮೀಪ ಆಗಾಗ ವಾಹನಗಳು ಅಪಾಘತಕ್ಕೀಡಾಗಿ ತೋಡಿಗೆ ಉರುಳಿ ಬೀಳುತ್ತಿವೆ.
ಕೆ.ಆರ್.ಡಿ.ಸಿ.ಎಲ್. ಶೀಘ್ರವಾಗಿ ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವರ್ಷದ ಹಿಂದೆ ಸಂಪಾಜೆ ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿತ್ತು. ಆದರೆ ಕೆ.ಆರ್.ಡಿ.ಸಿ.ಎಲ್.ನವರು ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ಆದರೂ ಗ್ರಾಮ ಪಂಚಾಯತ್ ಪ್ರತಿಭಟನೆ ನಡೆಸಿಲ್ಲ.
ಸೂಕ್ತ ಕ್ರಮ ಅಗತ್ಯ
ಮಾಣಿ – ಮೈಸೂರು ರಸ್ತೆಯ ಕಡೆಪಾಲದಲ್ಲಿ ಅವೈಜ್ಞಾನಿವಾಗಿ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ವಾಹನಗಳು ಆಗಾಗ್ಗೆ ಅಪಘಾತಕ್ಕೆ ಒಳಗಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
– ರಮೇಶ್, ವಾಹನ ಚಾಲಕ
ಚರ್ಚಿಸಿ ನಿರ್ಧಾರ
ಅಲ್ಲಿ ವಾಹನ ಅಪಘಾತಕ್ಕೀಡಾಗುವುದು ಹೌದು.ನಾವು ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಸೇತುವೆ ಸಮಸ್ಯೆಯ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
– ಸುಂದರಿ ಮುಂಡಡ್ಕ ಸಂಪಾಜೆ ಗ್ರಾ.ಪಂ. ಅಧ್ಯಕ್ಷರು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.