ಉಡುಪಿಯಲ್ಲಿ ನೀರಿಗೆ ಬರ: ಜನರಿಗೆ ಪ್ರಮೋದ್‌ ನೆನಪು!


Team Udayavani, May 8, 2019, 6:02 AM IST

pramod

ಉಡುಪಿ: ನಗರದಲ್ಲಿ ನೀರಿಗೆ ಬರ ಬಂದಿದ್ದು, ಜನರಿಗೆ ಮಾಜಿ ಶಾಸಕ
ಪ್ರಮೋದ್‌ ಮಧ್ವರಾಜ್‌ ಅವರ ನೆನಪಾಗುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ ಮತ್ತು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ಪ್ರಮೋದ್‌ ಶಾಸಕರಾಗುವ ಮೊದಲೇ ಉಡುಪಿ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ ಮೂಲಕ ವ್ಯವಸ್ಥೆಗೊಳಿಸಿದ್ದರು. ಶಾಸಕರಾದ ಅನಂತರ ರಾಜ್ಯ ಸರಕಾರದ ಟಾಸ್ಕ್ ಫೋರ್ಸ್‌ ಮುಖಾಂತರ ಅನುದಾನ ವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಟ್ಯಾಂಕರ್‌ ಮೂಲಕ ಸರಬರಾಜು ಪ್ರಾರಂಭಿಸಿದರು.

ಅಧಿಕಾರಿಗಳಿಗೆ ಮಾರ್ಗದರ್ಶನ
ಪ್ರಮೋದ್‌ ಶಾಸಕರಾಗಿದ್ದ 5 ವರ್ಷಗಳಲ್ಲಿ ಪ್ರತೀ ವರ್ಷ ಜನವರಿಯಲ್ಲಿ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆದು ಲಭ್ಯ ನೀರಿನ ಮಾಹಿತಿ ಪಡೆಯುತ್ತಿದ್ದರು. ಸರಕಾರಿ ಬಾವಿ, ಬೋರ್‌ವೆಲ್‌ಗ‌ಳನ್ನು ಸುಸ್ಥಿತಿಯಲ್ಲಿಡುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಶಾಸಕತ್ವದ ಅವಧಿಯ 5 ವರ್ಷಗಳಲ್ಲಿ ಎಪ್ರಿಲ್‌, ಮೇ ತಿಂಗಳಲ್ಲಿ ಕುಡಿಯುವ ನೀರನ್ನು ಒದಗಿಸಲು ಸರ್ವ ಪ್ರಯತ್ನ ಮಾಡಲಾಗಿತ್ತು.

24 ಗಂಟೆ ಕುಡಿಯುವ ನೀರು
ನಗರಸಭೆಯ 35 ವಾರ್ಡ್‌ಗಳಲ್ಲಿ ದಿನದ 24 ಗಂಟೆ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಟಾಸ್ಕ್ಫೋರ್ಸ್‌ ರಚಿಸಿ ಪ್ರತೀ ವಾರ್ಡಿಗೆ ಅಧಿಕಾರಿಯನ್ನು ಉಸ್ತುವಾರಿಯ ನ್ನಾಗಿ ನೇಮಿಸಲಾಗಿತ್ತು. ಎಪ್ರಿಲ್‌-ಮೇಯ ಲ್ಲಿ ಎತ್ತರ ಪ್ರದೇಶಗಳು, ನೀರಿನ ಅಭಾವ ಇರುವ ಲ್ಲಿಗೆ ಟ್ಯಾಂಕರ್‌ ಮೂಲಕ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿತ್ತು.

ನೀರಿನ ಸಮಸೆÂ ಇರಲಿಲ್ಲ
2017ರಲ್ಲಿ ಬಜೆ ಜಲಾಶಯ ಎ. 23ರಂದು ಬರಿದಾದಾಗ ಪ್ರಮೋದ್‌ ಸೂಚನೆಯಂತೆ ಹೊಂಡಗಳಲ್ಲಿ ಪಾದೆ ಒಡೆದು ನೀರು ಹರಿಯುವಂತೆ ಮಾಡಲಾಗಿತ್ತು. ಬೋಟ್‌ಗಳಲ್ಲಿ ಬೃಹತ್‌ ಪಂಪ್‌ ಅಳವಡಿಸಿ ಪಂಪಿಂಗ್‌ ಮಾಡಿ ನೀರನ್ನು ಭಂಡಾರಿಗುಂಡಿಯಿಂದ ಬೃಹತ್‌ ಕೊಳವೆ ಮುಖಾಂತರ ಬಜೆ ನೀರು ಶುದ್ಧೀಕರಣ ಘಟಕಕ್ಕೆ ಹಾಯಿಸಿ ಸರಬರಾಜು ಮಾಡಲಾಗಿತ್ತು.

2018ರ ಮಾರ್ಚ್‌ನಲ್ಲಿ ನಗರದ 35 ವಾರ್ಡ್‌ಗಳನ್ನು ಎರಡು ವಲಯಗಳನ್ನಾಗಿ ವಿಂಗಡಿಸಿ ಮೇ ತಿಂಗಳ 2ನೇ ವಾರದ ತನಕ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗಿತ್ತು.

ವಾರಾಹಿ ಯೋಜನೆಗೂ ಪ್ರಯತ್ನಿಸಿದ್ದರು
ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವಾರಾಹಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮೋದ್‌ ಅವಿರತ ಶ್ರಮ ವಹಿಸಿದ್ದರು. ಕೇಂದ್ರದ ಅಮೃತ್‌ ಯೋಜನೆ, ಎಡಿಬಿ ನೆರವಿನಿಂದ ರಾಜ್ಯ ಸರಕಾರ ಮತ್ತು ಉಡುಪಿ ನಗರಸಭೆಯ ಪಾಲುದಾರಿಕೆಯಿಂದ ಕುಡ್ಸೆಂಪ್‌ ಮುಖಾಂತರ ಕಾಮಗಾರಿ ನಿರ್ವಹಿಸಲು 320 ಕೋಟಿ ರೂ. ಅನುದಾನ ತಂದಿದ್ದರು. ವಾರಾಹಿ ಕುಡಿಯುವ ನೀರಿನ ಯೋಜನೆಯ 3ನೇ ಹಂತದ ಕಾಮಗಾರಿಗಳ ಪ್ಯಾಕೇಜ್‌ ಟೆಂಡರ್‌ ಆಗಿತ್ತು. ಆದರೆ ಇತ್ತೀಚೆಗೆ ಪಂಪಿಂಗ್‌ ಸ್ಟೇಶನ್‌ ಭರತ್ಕಲ್‌ನಲ್ಲಿಯೇ ಮಾಡುವ ನಿರ್ಧಾರದಿಂದ ಒಂದನೇ ಹಂತದ ಟೆಂಡರನ್ನು ಪುನಃ ಕರೆಯಬೇಕಾಗಿದೆ. 2ನೇ ಹಂತದ ಪ್ಯಾಕೇಜ್‌ ಪೈಪ್‌ಲೈನ್‌ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭ ಹಂತದಲ್ಲಿದೆ.

ಮೂರನೇ ಹಂತದ ಪ್ಯಾಕೇಜ್‌ ಆಗಿರುವ ಉಡುಪಿ ನಗರದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಟೆಂಡರ್‌ ಮುಗಿದು ನಿರ್ಮಾಣ ಹಂತದಲ್ಲಿದೆ ಎಂದು ಉಡುಪಿ ಕಾಂಗ್ರೆಸ್‌ ಪ್ರಕಟನೆ ಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.