ಆಧ್ಯಾತ್ಮಿಕ ಸತ್ಯ ಶೋಧನೆಯೇ ಶರಣರ ಗುರಿಯಾಗಿತ್ತು
ಸಾಂಸಾರಿಕ ಜವಾಬ್ದಾರಿ ನಿರ್ವಹಿಸುತ್ತ ಕಾಯಕಕ್ಕೆ ಪ್ರಾಧಾನ್ಯತೆ ನೀಡಿದವರು•ನಾಡು ಕಟ್ಟಲು ಕೊಡುಗೆ ನೀಡಿ
Team Udayavani, May 8, 2019, 12:52 PM IST
ಮಲೇಬೆನ್ನೂರು: ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು.
ಮಲೇಬೆನ್ನೂರು: ಬಸವ ಜಯಂತಿ ಶುಭದಿನವಾದ ಇಂದು ಶರಣರ ಬದುಕನ್ನು ಆಲೋಚನೆ ಮಾಡಬೇಕಿದೆ ಹಾಗೂ ಅವರು ಹೇಗೆ ಬದುಕಿದ್ದರು ಎಂದು ಚಿಂತನೆ ಮಾಡಬೇಕಿದೆ ಎಂದು ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶರಣರಿಗೂ ಒಂದು ಸಂಸಾರವಿತ್ತು. ಸಾಂಸಾರಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಅವರ ಗುರಿ ಆಧ್ಯಾತ್ಮಿಕ ಸತ್ಯವನ್ನು ಕಂಡುಕೊಳ್ಳುವುದಾಗಿತ್ತು ಎಂದರು.
ಪರಮಾತ್ಮನ ಸಾಕ್ಷಾತ್ಕಾರ ಅವರ ಗುರಿಯಾಗಿತ್ತು. ಹಾಗಿದ್ದರೂ ಎಲ್ಲೂ ಸಾಂಸಾರಿಕ ಜವಾಬ್ದಾರಿ ಮತ್ತು ಕಾಯಕದಿಂದ ಅವರು ವಿಮುಕ್ತರಾಗದೆ ಕಾಯಕಕ್ಕೆ ಅತ್ಯಂತ ಪ್ರಾಧಾನ್ಯತೆ ಕೊಟ್ಟಿದ್ದರು. ಕಷ್ಟದಿಂದ ಬಂದವರಿಗೆ ಅನ್ನವನ್ನು ನೀಡಿ, ಉದ್ಯೋಗದ ಪರಿಕಲ್ಪನೆ ನೀಡಿ ಅವರಿಗೂ ಸನ್ಮಾರ್ಗ ತೋರುತ್ತಿದ್ದರು. ಇಂತಹ ಶರಣರ ಜಯಂತ್ಯುತ್ಸವನ್ನು ಆದರ್ಶಪೂರ್ಣವಾಗಿ ಆಚರಿಸಲೇಬೇಕೆಂದಾದರೆ ನಮ್ಮ ಬದುಕಿನಲ್ಲಿ ನಾವು ಪರಿಶುದ್ಧ ಪ್ರಾಮಾಣಿಕ ಕಾಯಕದಲ್ಲಿ ಬದುಕಬೇಕು ಎಂದರು.
ಜಗತ್ತು ಶ್ರೀಮಂತರನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಯಾರು ತನ್ನನ್ನು ಇತರರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅಂತಹ ವ್ಯಕ್ತಿಯನ್ನು ಸ್ಮರಿಸುತ್ತದೆ. ಆದ್ದರಿಂದಲೇ ಸೇವೆ ಅತ್ಯಂತ ಮಹತ್ತರವಾದುದು ಎಂದರು.
ಸರಳವಾದ ಒಂದು ಮದುವೆ ಮಾಡಲು ಕನಿಷ್ಟ ಎರಡರಿಂದ ಮೂರು ಲಕ್ಷ ರೂ. ಖರ್ಚು ಆಗುತ್ತದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿದಲ್ಲಿ ಇಂತಹ ಖರ್ಚನ್ನು ತಡೆದು ಆ ಹಣದಿಂದ ಸಣ್ಣ ಮನೆಯನ್ನೇ ಕಟ್ಟಬಹುದು. ತೋಟದಲ್ಲಿ ಬೋರ್ ತೆಗೆಸಿ ನೀರಿನ ಬವಣೆ ತಪ್ಪಿಸುವ ಅವಕಾಶವಿದೆ ಎಂದರು.
ಮದುವೆ ಎರಡು ಉದ್ದೇಶಗಳ ಹಿನ್ನೆಲೆಯಲ್ಲಿ ನಡೆಯಬೇಕು. ಒಂದು, ನಿಮಗೆ ಹುಟ್ಟುವ ಸಂತತಿಯಿಂದ ನಿಮ್ಮ ಕುಟುಂಬ ವ್ಯವಸ್ಥೆ ಬೆಳೆಸುವುದು. ಇನ್ನೊಂದು ನಿಮಗೆ ಹುಟ್ಟುವ ಸಂತತಿಗೆ ಧರ್ಮದ ಸಂಸ್ಕಾರವನ್ನು, ಜ್ಞಾನವನ್ನು ಕೊಟ್ಟು ಬೆಳಸುವುದರ ಮೂಲಕ ಅವರನ್ನೇ ಒಂದು ಆಸ್ತಿಯನ್ನಾಗಿ ಮಾಡಬೇಕು ಎಂದರು.
ದೇಶದ ಆಸ್ತಿಯನ್ನು ಹೊಡೆದು ಬಹಳಷ್ಟು ಬೇಗ ಶ್ರೀಮಂತರಾಗಬೇಕೆಂಬ ಮನೋಭಾವ ಬಹಳಷ್ಟು ಜನರಲ್ಲಿ ಇಂದು ಇರುವುದನ್ನು ಕಂಡಿದ್ದೇನೆ. ಪ್ರತಿಯೊಬ್ಬರೂ ನಾಡನ್ನು ಕಟ್ಟಬೇಕು. ಈ ಪುಣ್ಯಭೂಮಿಯನ್ನು ಉಳಿಸಬೇಕು ಎನ್ನುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಮೋಸದ ಜೀವನ ಬಿಟ್ಟು ಸತ್ಯ, ಶುದ್ಧ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೌಟುಂಬಿಕ ವ್ಯವಸ್ಥೆಯನ್ನು ಬೆಳೆಸಿದರೆ ಸಾಕು ಎಂದರು.
ಸಾರ್ವತ್ರಿಕವಾಗಿ ಎಲ್ಲರೂ ಒಳ್ಳೆಯವರಾದರೆ, ಎಲ್ಲರೂ ಪರಿಶುದ್ಧ, ಪ್ರಾಮಾಣಿಕ ಕಾಯಕದಲ್ಲಿ ಬದುಕಿದರೆ, ಈ ದೇಶದ ಬದಲಾವಣೆ ಆಗುತ್ತದೆ. ಅದಕ್ಕೆ ಎಲ್ಲರೂ ಚಿಂತನೆ ಮಾಡಬೇಕಿದೆ ಎಂದರು.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಟ್ರಸ್ಟನ ಅಧ್ಯಕ್ಷ ಕಣ್ಣಾಳ ಧರ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಮಂಜುನಾಥ ಪಟೇಲ್ ಮತ್ತು ವರ್ತಕ ಬಿ. ವೀರಯ್ಯ ಮಾತನಾಡಿದರು.
ಮುಖಂಡರಾದ ಪೂಜಾರ್ ಗಂಗೇನಳ್ಳೆಪ್ಪ, ಮಾಗನಹಳ್ಳಿ ಹಾಲಪ್ಪ, ದಾನಯ್ಯನವರ ಮಂಜುನಾಥ್, ಬಾರಿಕರ ಮಲ್ಲಿಕಾರ್ಜುನ, ಬಿ.ಎಂ. ಜಯದೇವಯ್ಯ, ಕಣ್ಣಾಳ್ ಪರಶುರಾಮಪ್ಪ, ಮುದೇಗೌಡ್ರ ಬಸವರಾಜಪ್ಪ, ಪೂಜಾರ್ ನಾಗಪ್ಪ, ಕೆ.ಪಿ. ಗಂಗಾಧರ್, ಎಂ.ಎನ್ ಮಂಜುನಾಥ್, ಮೈಲಾರಪ್ಪ, ಬಿ. ಸುರೇಶ್, ಇತರರು ಇದ್ದರು.
ಬಿಂದು ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಕರಿಬಸಪ್ಪ ನಿರೂಪಿಸಿದರು. ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.