ಮೆಚ್ಚುವಂತೆ ಮಾಡಿತ್ತು ಅಮೆರಿಕನ್ನರ ಸಂಸ್ಕೃತಿ


Team Udayavani, May 9, 2019, 6:00 AM IST

america-pravasa

ಮೊತ್ತ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಅದರಲ್ಲೂ ಅಮೆರಿ ಕಾದಲ್ಲಿ ಕಾಲಿಟ್ಟಾಗ ಏನೋ ಭಯ, ಅಲ್ಲಿನ ಸಂಸ್ಕೃತಿ, ಸಂಸ್ಕಾರಗಳು ಎಲ್ಲಿ ನಮ್ಮ ಪ್ರವಾಸಕ್ಕೆ ಅಡ್ಡಿಯಾಗುವುದೋ ಎಂಬ ಆತಂಕವಿತ್ತು. ಆದರೆ ಅಲ್ಲಿನ ಜನರು ನಮ್ಮನ್ನು ಸ್ವಾಗ ತಿಸಿದ ರೀತಿ, ರಸ್ತೆಯಲ್ಲಿ ನಡೆಯುತ್ತಿದ್ದಾಗ ಗೌರವದ ಭಾವ ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಚ್ಚುವಂತೆ ಮಾಡಿತ್ತು.

ಅಮೆರಿಕಾದ ಫೀನಿಕ್ಸ್‌ ಅಂತಾರಾಷ್ಟೀಯ ವಿಮಾನ ನಿಲ್ಡಾಣದಲ್ಲಿ ನಮ್ಮ ಸುರಕ್ಷತಾ ತಪಾಸಣೆ ಮುಗಿಯುತ್ತಿದ್ದಂತೆ ಅಲ್ಲಿನ ಸಿಬಂದಿ “ಹ್ಯಾವ್‌ ಅ ಗ್ರೇಟ್‌ ಟೈಮ್‌’ ಅನ್ನುತ್ತಾ ನಮ್ಮ ಅಮೆರಿಕಾ ಪ್ರವಾಸಕ್ಕೆ ಶುಭ ಹಾರೈಸಿದರು.

ವಿಮಾಣ ನಿಲ್ದಾಣದ ಅಧಿಕಾರಿಗಳು ನಡೆಸಿದ ತಪಾಸಣೆ ಕಾರ್ಯ ಅವರ ಕರ್ತವ್ಯವಾಗಿದ್ದರೆ ವಿದೇಶಿ ಯಾತ್ರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸುವ ಕ್ರಮ ಅವರ ನಾಡಿನ ಬಗ್ಗೆ ಸದಭಿಪ್ರಾಯ ಮೂಡುವಂತೆ ಮಾಡಿತು.

ನಾವು ಪ್ರಯಾಣಿಸಿದ ವಿಮಾನ ಬ್ರಿಟಿಷ್‌ ಏರ್‌ವೆàಸ್‌ನದ್ದಾಗಿದ್ದರೂ ನಾವು ಇಂಗ್ಲೆಂಡಿನ ಹೀತೃ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಪೈಲಟ್‌ ಮೊದಲಿಗೆ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿ ಶುಭ ಹಾರೈಸಿದರೆ ಬಳಿಕ 2 ನಿಮಿಷ ಅಚ್ಚ ಕನ್ನಡದಲ್ಲಿ ಸಂದೇಶ ನೀಡಿದಾಗ ಸಂತೋಷದ ಜತೆಗೆ ಆಶ್ಚರ್ಯವೂ ಆಯಿತು. ಇದು ನಮ್ಮಂತಹ ಬೆಂಗಳೂರಿನಿಂದ ವಿಮಾನವೇರಿದ ಕನ್ನಡಿಗರಿಗಾಗಿಯೇ ಪೈಲಟ್‌ ಆಯ್ಕೆ ಮಾಡಿಕೊಂಡ ಭಾಷೆಯಾಗಿತ್ತು. ಬ್ರಿಟಿಷ್‌ ನೆಲ ದಲ್ಲಿ ಕನ್ನಡ ಭಾಷೆ ಕೇಳಿ ಬೀಗುವ ಸರದಿ ಈಗ ನನ್ನ ದಾ ಗಿತ್ತು.
ಇಲ್ಲಿ ನನ್ನ ಪ್ರವಾಸದುದ್ದಕ್ಕೂ ನನಗೆ ಖುಷಿ ಕೊಟ್ಟದ್ದು ಇಲ್ಲಿನ ಜನರ ಸಭ್ಯತೆ ಮತ್ತು ಶಿಷ್ಟಾಚಾರ. ನಾವು ಹೊರಗಡೆ ಎಲ್ಲೇ ಸುತ್ತಾಡುತ್ತಿರಲಿ ನೀವು ಯಾರನ್ನೇ ಕಂಡರೂ ಅವರು ಸ್ವದೇಶೀಯರು, ವಿದೇಶಿಯರು, ಗಂಡು, ಹೆಣ್ಣು, ಎಳೆಯರು, ಕಿರಿಯರು ಎಂಬ ತಾರತಮ್ಯವಿಲ್ಲದೆ ನಿಮ್ಮನ್ನು ವಂದಿಸುವ ಪರಿಯಂತೂ ಒಮ್ಮಿಂದೊಮ್ಮೆಗೆ ಈ ದೇಶದ ಬಗ್ಗೆ ಗೌರವ ಮೂಡಿಸುತ್ತದೆ. ಒಮ್ಮಿಂದೊಮ್ಮೆಲೆ ಅವರ ಮುಖದಲ್ಲಿ ಮುಗುಳ್ನಗೆಯ ಪ್ರಭೆ ಬೆಳಗುತ್ತದೆ. “ಹಾಯ್‌’ ಅಂತ ಬೇಷರತ್‌ ಆದ ವಂದನೆಯ ನುಡಿಗಳು ನಿಮ್ಮ ಹೃದಯವನ್ನು ಗೆಲ್ಲುತ್ತವೆ.

ಉಪಾಹಾರ ಗೃಹ, ಆಸ್ಪತ್ರೆ, ಮಾರ್ಕೆಟ್‌ ಪ್ರವೇಶಿಸುತ್ತಿದ್ದಂತೆ ನಿಮ್ಮ ಹಿಂದಿರುವ ಗ್ರಾಹಕರು ಬಾಗಿಲನ್ನು ತೆರೆದು ಹಿಡಿದುಕೊಂಡದ್ದªಕ್ಕಾಗಿ ನಿಮಗೆ ತಲೆ ಬಾಗಿ, ನಿಷ್ಕಲ್ಮಶ ನಗುವಿನೊಂದಿಗೆ “ಥ್ಯಾಂಕ್ಯೂ’ ಎಂದು ಹೇಳಲು ಮರೆಯುವುದೇ ಇಲ್ಲ.

ಬಸ್‌ ಏರಲು ಕಾಯುತ್ತಿದ್ದೀರಿ ಎಂದಾದರೆ ಅಲ್ಲಿ ಎಷ್ಟೇ ಜನರಿರಲಿ “ಯು ಪ್ಲೀಸ್‌’ ಎನ್ನುತ್ತ ನಮ್ಮ ಅವಕಾಶವನ್ನು ನಮಗೆ ಬಿಟ್ಟು ಕೊಡುವ ಅನುಭವ ಸಾಕಷ್ಟೋ ಬಾರಿ ಆಯಿತು.

ಅಮೆರಿಕಾ ಹೇಳಿ ಕೇಳಿ ಕಾರುಗಳಿರುವ ಜನರ ದೇಶ. ಇಲ್ಲಿನ ರಸ್ತೆಗಳಲ್ಲಿ ಕಾರುಗಳೇ ಹೊಳೆಯಾಗಿ ಹರಿಯುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನಿಸುವುದುಂಟು. ಆದರೂ ನೀವೆಲ್ಲಾದರೂ ನಿಮ್ಮ ವಾಹನದಿಂದಿಳಿದು ರಸ್ತೆ ದಾಟಬೇಕೆಂದಾದರೆ ಅದಕ್ಕೆಂದೇ ನಿಗದಿಪಡಿಸಲಾದ ಸ್ಥಳದಲ್ಲಿ ನಿಶ್ಚಿಂತೆಯಿಂದ ರಸ್ತೆ ದಾಟಬಹುದಾಗಿದೆ. ಯಾಕೆಂದರೆ ರಸ್ತೆ ಮೇಲೆ ಓಡುವ ವಾಹನಗಳು ನಿಮಗಾಗಿ ನಿಂತೇ ಬಿಡುತ್ತವೆ. ಪಾದಚಾರಿ ರಸ್ತೆ ದಾಟಿದ ಬಳಿಕವಷ್ಟೇ ಹೊರಡುತ್ತವೆ.

ಅಮೆರಿಕ ಬಹುತೇಕ ಯುರೋಪಿಯನ್ನರೇ ನೆಲೆ ನಿಂತ ರಾಷ್ಟ್ರ. ಹೀಗಾಗಿ ಅವರ ಉಡುಗೆ ತೊಡುಗೆಗಳು ಅಂತೆಯೇ ಇವೆ. ತಮಗಿಷ್ಟ ಬಂದ ಉಡುಪನ್ನು ಅದು ಹಿತವೆಂದನಿಸಿದರೆ ಅವರು ಯಾವ ಮುಲಾಜಿಲ್ಲದೆ ಧರಿಸುತ್ತಾರೆ. ಹಾಗೆಂದು ನೀವು ಹೀಗೆಯೇ ಉಡುಪು ಧರಿಸಬೇಕು ಎಂದು ಅವರು ಯಾರಿಗೂ ತಾಕೀತು ಮಾಡುವುದಿಲ್ಲ.

ನಾನೂ ನನ್ನ ಅಮೆರಿಕಾ ವಾಸ್ತವ್ಯದ ವೇಳೆ ಎಷ್ಟೋ ಬಾರಿ ನಮ್ಮ ಊರಿನ ಫಾರ್ಮಲ್ಸ್‌ ಅಥವಾ ಇನ್‌ ಫಾರ್ಮಲ್ಸ್‌ ದಿರಿ ಸಿನಲ್ಲೇ ಇರುತ್ತಿದ್ದೆ. ನನ್ನ ಪತ್ನಿ ಅಪ್ಪಟ ಭಾರತೀಯ ನಾರಿಯಂತೆ ಸೀರೆ ಧರಿಸಿ ನಗರದಲ್ಲಿ ಸಂಚರಿಸುತ್ತಿದ್ದಾಗ ಅಮೆರಿಕನ್‌ ಮಹಿಳೆಯೊಬ್ಬಳು , “ವಾಹ್‌ ನಿಮ್ಮ ಡ್ರೆಸ್‌ ತುಂಬಾ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದಾಗ ನಮ್ಮ ದೇಶದ ಸಂಸ್ಕೃ ತಿಯ ಬಗ್ಗೆ ಹೆಮ್ಮೆ ಎನಿಸಿತು.
ಇಲ್ಲಿನ ಬಹುತೇಕ ಮನೆಗಳಿಗೆ ಕಾಲಿಂಗ್‌ ಬೆಲ್‌ಗ‌ಳೇ ಇಲ್ಲ. ನಿಮಗೆ ತಿಳಿಸದೇ, ನಿಮ್ಮ ಒಪ್ಪಿಗೆ ಇಲ್ಲದೆ ಯಾರೊಬ್ಬರೂ ನಿಮ್ಮ ಮನೆಯ ಬಾಗಿಲನ್ನು ಬಡಿಯುವುದಿಲ್ಲ.

ಅಮೆರಿಕ ಪ್ರವಾಸದ ವೇಳೆ ಗಮನ ಸೆಳೆದ ಈ ಎಲ್ಲ ವಿಚಾರ ಗಳು ಮನಸ್ಸಿಗೆ ಮುದ ನೀಡಿದ್ದು ಮಾತ್ರ ಸುಳ್ಳಲ್ಲ.

-ಬಿ.ವಿ.ಸೂರ್ಯನಾರಾಯಣ,ಪುತ್ತೂರು

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.