ಬೈಕ್-ಟಿಪ್ಪರ್ ಢಿಕ್ಕಿ: ಇಬ್ಬರ ಸಾವು
ಪುಂಜಾಲಕಟ್ಟೆ ಸಮೀಪ ದುರಂತ
Team Udayavani, May 9, 2019, 6:15 AM IST
ಸುರೇಂದ್ರ ಹಾಗೂ ಜಯಲಕ್ಷ್ಮೀ .
ಪುಂಜಾಲಕಟ್ಟೆ: ಟಿಪ್ಪರ್ ಲಾರಿ ಮತ್ತು ಬುಲೆಟ್ ಬೈಕ್ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರು ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಅಣ್ಣಳಿಕೆ-ಹಿರ್ಣಿ ರಸ್ತೆ ನಡುವಿನ ಕುಮೇರ್‌ನಲ್ಲಿ ಬುಧವಾರ ಸಂಭವಿಸಿದೆ.
ಅರಳ ಗ್ರಾಮದ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ, ಬೈಕ್ ಸವಾರ ಸುರೇಂದ್ರ (33) ಹಾಗೂ ಅವರ ಸಂಬಂಧಿ ಜಯಲಕ್ಷ್ಮೀ (36) ಮೃತಪಟ್ಟವರಾಗಿದ್ದಾರೆ.
ಘಟನೆಯ ವಿವರ
ಬೆಳಗ್ಗೆ ಸುರೇಂದ್ರ ಅವರು ಬೈಕಿನಲ್ಲಿ ಸೋದರಿಯನ್ನು ರಾಯಿ ಗ್ರಾಮ ಪಂಚಾಯತ್‌ಗೆ ಬಿಟ್ಟು ವಾಪಸ್ ಬರುತ್ತಿದ್ದರು. ಆಗ ಅಣ್ಣಳಿಕೆಯಲ್ಲಿ ಸಂಬಂಧಿ ಜಯಲಕ್ಷಿ$¾ ಅವರನ್ನು ಕೂರಿಸಿ ಮನೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಢಿಕ್ಕಿಯಾಗಿದೆ.ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಮಂಗಳೂರಿನ ಆಸ್ಪ ತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಲಾರಿ ಚಾಲಕನನ್ನು ವಶಕ್ಕೆ ಪಡೆ ದುಕೊಂಡಿದ್ದಾರೆ.
ಸುರೇಂದ್ರ
ಸುರೇಂದ್ರ ಅವರು ರಮೇಶ್ ಪೂಜಾರಿ ಅವರ ನಾಲ್ವರು ಮಕ್ಕಳಲ್ಲಿ ಹಿರಿಯವರಾಗಿದ್ದು, ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದರು.ಸಹೋದರಿಯ ವಿವಾಹ ಕಾರ್ಯಕ್ರಮಕ್ಕೆಂದು ಊರಿಗೆ ಬಂದಿದ್ದರು. ಈ ನಡುವೆ ಸುರೇಂದ್ರರಿಗೂ ಬುಧವಾರ ಹುಡುಗಿ ನೋಡಲು ನಿರ್ಧರಿಸಲಾಗಿತ್ತು. ಅವರು ಬುಧವಾರವೇ ರಾತ್ರಿಯೇ ಬೆಂಗಳೂರಿಗೆ ತೆರಳುವವರಿದ್ದರು.
ಜಯಲಕ್ಷ್ಮೀ
ಮಂಗಳೂರಿನ ತೊಕ್ಕೊಟ್ಟು ಸಮೀಪದ ಪಂಡಿತ್ ಹೌಸ್ ನಿವಾಸಿ ರಾಜೇಶ್ ಅವರ ಪತ್ನಿ ಜಯಲಕ್ಷ್ಮೀ ಅವರು ಹತ್ತಿರದ ಸಂಬಂಧಿಯಾಗಿದ್ದು, ಸುರೇಂದ್ರರಿಗೆ ವಧು ನೋಡಲೆಂದೇ ಅವರು ಮೂರು ದಿನಗಳ ಹಿಂದಷ್ಟೇ ಬಂಟ್ವಾಳದ ಹಿರ್ಣಿಯಲ್ಲಿರುವ ತಾಯಿ ಮನೆಗೆ ತೆರಳಿದ್ದರು. ರಾಜೇಶ್ – ಜಯಲಕ್ಷ್ಮೀ ದಂಪತಿಗೆ 5 ಮತ್ತು 10ರ ಹರೆಯದ ಇಬ್ಬರು ಪುಟ್ಟ ಹೆಣ್ಮಕ್ಕಳಿದ್ದಾರೆ. ರಾಜೇಶ್ ಅವರು ಉಳ್ಳಾಲದ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.