ಕಣ್ಮುಂದೇ ಪೋಲಾಗುತ್ತಿದೆ “ವರ್ಷದ ನೀರು’

ನೀರು ಬವಣೆ -1

Team Udayavani, May 9, 2019, 3:10 AM IST

kanmunde

ಮಳೆಗಾಲದ ಸಿದ್ಧತೆ ಎಂದರೆ, ಮಳೆ ಅನಾಹುತಗಳಿಂದ ಸಾಧ್ಯವಾದಷ್ಟು ರಕ್ಷಣೆ ಪಡೆಯುವುದು. ಅದಕ್ಕಾಗಿ ಒಣಗಿದ ಮರ ಮತ್ತು ರೆಂಬೆಗಳನ್ನು ಕಡಿಯುವುದು, ಗುಂಡಿಗಳು ಬೀಳದಂತೆ ರಸ್ತೆಗಳ ರಿಪೇರಿ, ನೀರು ನುಗ್ಗದಂತೆ ಮಳೆ ನೀರುಗಾಲುವೆಗಳ ದುರಸ್ತಿ ಮಾಡುವುದಕ್ಕೆ ಮಾತ್ರ ಸಿದ್ಧತೆಗಳು ಸೀಮಿತವಾಗಿವೆ. ಆದರೆ, ಅದೇ ನೀರನ್ನು ಹಿಡಿದಿಟ್ಟುಕೊಳ್ಳುವುದು ಈ ಪೂರ್ವಸಿದ್ಧತಾ ಕ್ರಮಗಳಲ್ಲಿ ನಮಗೆ ಆದ್ಯತೆ ಆಗುವುದೇ ಇಲ್ಲ.

ಇಡೀ ಬೆಂಗಳೂರು ಒಂದು ವರ್ಷ ಬಳಕೆ ಮಾಡಬಹುದಾದ ನೀರು ಕಣ್ಮುಂದೆಯೇ ಹರಿದುಹೋಗುತ್ತದೆ. ಅದರಲ್ಲಿ ಅಲ್ಪಸ್ವಲ್ಪ ಸಂಗ್ರಹಿಸಿದರೂ ಹಾಹಾಕಾರ ತಕ್ಕಟ್ಟಮಟ್ಟಿಗೆ ತಗ್ಗಿಸಬಹುದು. ಆದರೆ, ಅದಕ್ಕೆ ನಾವು ಇನ್ನೂ ಸಿದ್ಧರಾಗಿಲ್ಲ. ಹಾಗಾಗಿ, ಅನಾಯಾಸವಾಗಿ ಮತ್ತೂಂದು ಅವಕಾಶ ಕಳೆದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ “ನೀರಿನ ಬವಣೆ’ ಸರಣಿ ಬೆಳಕು ಚೆಲ್ಲಲಿದೆ.

ಬೆಂಗಳೂರು: ನಗರದಲ್ಲಿ ಒಂದು ವರ್ಷದಲ್ಲಿ ಲಭ್ಯವಾಗುವ ನೀರು 30.84 ಟಿಎಂಸಿ. ಬೇಡಿಕೆ ಇರುವುದು 18ರಿಂದ 20.05 ಟಿಎಂಸಿ. ಇನ್ನೂ ಸುಮಾರು 10 ಟಿಎಂಸಿ ನೀರು ಹೆಚ್ಚುವರಿಯಾಗಿದೆ. ಆದರೂ, ಬೇಸಿಗೆ ಬಂದರೆ ಇಲ್ಲಿ ನೀರಿಗಾಗಿ ಹಾಹಾಕಾರ!

ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಿದಂತೆ ನೀರಿನ ಬವಣೆ ಕೂಡ ತೀವ್ರವಾಗುತ್ತಿದೆ. ಈ ಬೇಡಿಕೆ ಪೂರೈಸಲು ಕಾವೇರಿ 5ನೇ ಹಂತ, ಶರಾವತಿ, ಎತ್ತಿನಹೊಳೆಯಿಂದ ನೀರು ಎತ್ತಬಹುದೇ ಎಂಬ ಲೆಕ್ಕಾಚಾರ ನಡೆದಿದೆ. ಆದರೆ, ಆ ನೀರು ನಗರದಲ್ಲೇ ಇದೆ. ಅದರ ನಿರ್ವಹಣೆ ಆಗುತ್ತಿಲ್ಲ ಅಷ್ಟೇ. ಆಳುವವರು ಮತ್ತು ಅಧಿಕಾರಿಗಳು ಮನಸ್ಸು ಮಾಡಿದರೆ, ಇಡೀ ನಗರದ ದಾಹ ನೀಗಿಸಬಹುದು ಎಂಬ ವಾದವನ್ನು ವಿಜ್ಞಾನಿಗಳು ಮುಂದಿಡುತ್ತಾರೆ.

ನಗರದಲ್ಲಿ ವಾರ್ಷಿಕವಾಗಿ ಬೀಳುವ ಮಳೆ ನೀರಿನಿಂದ 14.80 ಟಿಎಂಸಿ ಹಾಗೂ ಕೊಳಚೆನೀರನ್ನು ಶುದ್ಧೀಕಣದಿಂದ ಲಭ್ಯವಾಗುವ ನೀರು 16.04 ಟಿಎಂಸಿ. ಇವೆರಡನ್ನೂ ಸೇರಿಸಿದರೆ 30.84 ಟಿಎಂಸಿ ಆಗುತ್ತದೆ. ಇನ್ನು ಒಬ್ಬ ವ್ಯಕ್ತಿ ಒಂದು ದಿನಕ್ಕೆ 135ರಿಂದ 150 ಲೀ. ನೀರು ಬಳಸುತ್ತಾನೆ. ಒಟ್ಟಾರೆ ಜನಸಂಖ್ಯೆಗೆ ಲೆಕ್ಕಹಾಕಿದರೆ, 18ರಿಂದ 20 ಟಿಎಂಸಿ ನೀರು ಆಗುತ್ತದೆ. ಅಂದರೆ, 10ರಿಂದ 12 ಟಿಎಂಸಿ ಹೆಚ್ಚುವರಿ ಇದೆ.

ಇದರಲ್ಲಿ ಅರ್ಧದಷ್ಟು ನೀರನ್ನು ಸಂಗ್ರಹಿಸಲು ಸಾಧ್ಯವಾದರೂ ಸಾಕು, ನೀರಿನ ಸಮಸ್ಯೆ ನೀಗುವುದರ ಜತೆಗೆ ವಿವಿಧ ಯೋಜನೆಗಳಡಿ ನೀರಿನಂತೆ ಹರಿಸಲು ಉದ್ದೇಶಿಸಿರುವ ನೂರಾರು ಕೋಟಿ ಹಣವನ್ನೂ ಉಳಿಸಬಹುದು ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು. ಈ ಸಂಬಂಧ ವಿಜ್ಞಾನಿಗಳ ತಂಡ ವೈಜ್ಞಾನಿಕ ಅಧ್ಯಯನ ವರದಿ ಕೂಡ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ 787 ಮಿ.ಮೀ. ಹೀಗೆ ಬಿದ್ದ ಮಳೆ ನೀರಿನಲ್ಲಿ ಶೇ. 49.5ರಷ್ಟು ಅಂದರೆ 7.32 ಟಿಎಂಸಿ ನೀರು ವೃಷಭಾವತಿ ಕಣಿವೆಯಲ್ಲಿ ಹರಿದುಹೋಗುತ್ತದೆ. ಅದೇ ರೀತಿ, ಕೋರಮಂಗಲ-ಚಲ್ಲಘಟ್ಟ ಕಣಿವೆ ಶೇ. 35.2 (5.2 ಟಿಎಂಸಿ) ಮತ್ತು ಹೆಬ್ಬಾಳ ಕಣಿವೆ ಮೂಲಕ ಶೇ. 15.3 (4.2 ಟಿಎಂಸಿ) ನೀರು ಹರಿಯುತ್ತದೆ.

ಇದು ಒಟ್ಟಾರೆ 14.80 ಟಿಎಂಸಿ ಆಗುತ್ತದೆ. ಅದೇ ರೀತಿ, ಕೊಳಚೆನೀರನ್ನು ವಿಕೇಂದ್ರೀಕೃತ ಸಂಸ್ಕರಣಾ ಘಟಕಗಳಿಂದ ಶುದ್ದೀಕರಿಸಿದಲ್ಲಿ ಹೆಚ್ಚು-ಕಡಿಮೆ ಮಳೆ ನೀರಿನಷ್ಟೇ ಪ್ರಮಾಣದಲ್ಲಿ ಇದನ್ನು ಸಂಗ್ರಹಿಸಬಹುದು. ಜಕ್ಕೂರು ಕೆರೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ.

ಇನ್ನು ಈ ಕಣಿವೆಗಳ ವ್ಯಾಪ್ತಿಯಲ್ಲಿ ಈ ಹಿಂದೆ 285 ಕೆರೆಗಳಿದ್ದವು. ಒತ್ತುವರಿಯಿಂದ ಈಗ ಅವುಗಳ ಸಂಖ್ಯೆ 194ಕ್ಕೆ ಕುಸಿದಿದೆ. ಈ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ವಾಸ್ತವವಾಗಿ 5 ಟಿಎಂಸಿ. ಆದರೆ, ಹೂಳು ತುಂಬಿಕೊಂಡಿದ್ದರಿಂದ ಕೇವಲ 1.2 ಟಿಎಂಸಿ ನೀರು ಹಿಡಿದಿಡಲು ಸಾಧ್ಯವಾಗುತ್ತಿದೆ.

ಸದ್ಯದ ಸ್ಥಿತಿಯಲ್ಲಿ ಅಸಾಧ್ಯ?: ಆದರೆ, ನಗರ ಪರಿಸರದಲ್ಲಿ ಅದರಲ್ಲೂ ಈಗಿರುವ ವ್ಯವಸ್ಥೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸುವುದು ಕಷ್ಟಸಾಧ್ಯ. ಯಾಕೆಂದರೆ, ಮೊದಲಿನಿಂದಲೂ ನಾವು ಮಳೆ ನೀರು ಸಂಗ್ರಹಕ್ಕೆ ಒತ್ತುಕೊಡದಿರುವ ಹಿನ್ನೆಲೆಯಲ್ಲಿ ಏಕಾಏಕಿ ಈ ಪ್ರಮಾಣದ ನೀರನ್ನು ಹಿಡಿದಿಡುವುದು ಅಸಾಧ್ಯದ ಮಾತು ಎಂದು ಜಲಮಂಡಳಿ ಅಧಿಕಾರಿಗಳು ಮತ್ತು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಹೀಗೆ ಮಾಡಿದ್ರೆ ಸಾಧ್ಯ?: ಹೂಳು ತೆಗೆದು ಕೆರೆಗಳ ವ್ಯವಸ್ಥಿತ ಜೋಡಣೆ, ಒತ್ತುವರಿ ತೆರವುಗೊಳಿಸಿ ಬಫ‌ರ್‌ಝೋನ್‌ನಲ್ಲಿ ಹಸಿರೀಕರಣ, ಕೆರೆಗಳ ಪುನಃಶ್ಚೇತನ ಮತ್ತು ನಿಯಮಿತ ನಿರ್ವಹಣೆ, ಶುದ್ಧೀಕರಣಗೊಳಿಸಿದ ನೀರನ್ನು ಮಾತ್ರ ಕೆರೆಗಳಿಗೆ ಹರಿಸುವುದು (ಜಕ್ಕೂರು ಕೆರೆ ಮಾದರಿಯಲ್ಲಿ), ಪ್ರತಿ ವಾರ್ಡ್‌ಗಳಲ್ಲಿ ಜೌಗುಪ್ರದೇಶಗಳನ್ನು ನಿರ್ಮಿಸಿ ಸ್ಥಳೀಯ ಪ್ರಭೇದಗಳನ್ನು ಬೆಳೆಸುವುದು ಮತ್ತಿತರ ಕ್ರಮಗಳ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಐಐಎಸ್ಸಿ ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ಸ್ಪಷ್ಟಪಡಿಸುತ್ತಾರೆ.

ಸಂಗ್ರಹ ಸಾಮರ್ಥ್ಯ ಶೇ.60ರಷ್ಟು ಕುಸಿತ: 1800ರಲ್ಲಿ ನಗರದ ನೀರಿನ ಸಂಗ್ರಹಣಾ ಸಾಮರ್ಥ್ಯ 35 ಟಿಎಂಸಿ ಇತ್ತು. 70ರ ದಶಕದಲ್ಲಿ ಇಲ್ಲಿನ ಕೆರೆಗಳ ವಿಸ್ತೀರ್ಣ 3,180 ಹೆಕ್ಟೇರ್‌ ಇತ್ತು. ಆದರೆ, ಈಗ ಕೆರೆಗಳ ವಿಸ್ತೀರ್ಣ 2,792 ಹೆಕ್ಟೇರ್‌ಗೆ ಇಳಿಕೆ ಆಗಿದೆ. ಅಲ್ಲದೆ, ಶೇ. 60ರಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕಡಿಮೆ ಆಗಿದೆ.

ಹಂಚಿಕೆಯೇ ಉಲ್ಟಾ!: ನಗರದ ಭೂಮಿಯ ಬಳಕೆಯಲ್ಲಿ ತುಂಬಾ ಏರುಪೇರು ಆಗಿದ್ದು, 1973ರಲ್ಲಿ ನಿರ್ಮಿತ ಪ್ರದೇಶ (ಬಿಲ್ಟ್ಅಪ್‌ ಏರಿಯಾ)ದ ಪ್ರಮಾಣ ಶೇ. 8ರಷ್ಟಿದ್ದು, ಹಸಿರುಹೊದಿಕೆ ಶೇ. 68.3ರಷ್ಟಿತ್ತು. ನೀರಿನಿಂದ ಆವೃತವಾಗಿರುವ ಪ್ರದೇಶ ಶೇ. 3.4ರಷ್ಟಿತ್ತು.

ಆದರೆ, 2016ರಲ್ಲಿ ನಿರ್ಮಿತ ಪ್ರದೇಶ ಶೇ. 76.9ರಷ್ಟಿದ್ದು, ಹಸಿರುಹೊದಿಕೆ ಶೇ. 7.5 ಹಾಗೂ ನೀರಿನಿಂದ ಆವೃತವಾಗಿರುವ ಪ್ರದೇಶ ಶೇ. 1ರಷ್ಟಿದೆ. 2020ರ ವೇಳೆಗೆ ಇದು ಕ್ರಮವಾಗಿ ಶೇ. 93.3 ಮತ್ತು ಶೇ. 3 ಹಾಗೂ ಶೇ. 1ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ!

ಮಳೆ ಬಿದ್ದರೂ ನೀರಿಗೆ ಬರ!: ರಾಜ್ಯಾದ್ಯಂತ ಸತತ ಬರಗಾಲ ಎದುರಾಗಿದ್ದರೂ, ನಗರದ ಮಟ್ಟಿಗೆ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ಒಂದು ದಶಕದಲ್ಲಿ ಎಂಟು ವರ್ಷಗಳು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಆದಾಗ್ಯೂ ಇಲ್ಲಿ ನೀರಿಗೆ ಬರ!

ನಗರದಲ್ಲಿ ವಾರ್ಷಿಕ ವಾಡಿಕೆ ಮಳೆ 977.4 ಮಿ.ಮೀ. 2008ರಿಂದ 2017ರವರೆಗೆ ಸಾವಿರ ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಾಗಿದೆ. 2012 ಮತ್ತು 2016ರಲ್ಲಿ ಮಾತ್ರ ಕ್ರಮವಾಗಿ 724 ಮಿ.ಮೀ. ಹಾಗೂ 795 ಮಿ.ಮೀ. ಮಳೆ ದಾಖಲಾಗಿದೆ. 2017ರಲ್ಲಿ ಅತಿ ಹೆಚ್ಚು 1,696 ಮಿ.ಮೀ. ಮಳೆಯಾಗಿದ್ದು, ಅದು ದಾಖಲೆ ಮಳೆ ಬಿದ್ದ ವರ್ಷವಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಒಟ್ಟಾರೆ 977.4 ಮಿ.ಮೀ. ಮಳೆಯಲ್ಲಿ ಶೇ. 60ರಷ್ಟು ಮುಂಗಾರಿನಲ್ಲೇ (ಜೂನ್‌-ಸೆಪ್ಟೆಂಬರ್‌) ಬೀಳುತ್ತದೆ. ಇನ್ನು ಮಳೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ, ಮಳೆಯ ದಿನಗಳು ಕಡಿಮೆ ಆಗಿವೆ. ಒಂದು ಹಂಗಾಮಿನಲ್ಲಿ ಬೀಳಬೇಕಾದ ಮಳೆ ಕೇವಲ ಒಂದು ತಿಂಗಳಲ್ಲಿ ಸುರಿಯುತ್ತಿದೆ.

ಒಂದು ತಿಂಗಳ ಮಳೆ ಒಂದು ವಾರದಲ್ಲಿ ಅಬ್ಬರಿಸುತ್ತಿದೆ. ಈ ಮಧ್ಯೆ ನಗರದಲ್ಲಿ ನಿರ್ಮಿತ ಪ್ರದೇಶ ವಿಸ್ತರಿಸಿದೆ. ಹಾಗಾಗಿ, ನೀರು ಇಂಗುವಿಕೆ ಕಡಿಮೆ ಆಗಿದ್ದು, ಹರಿಯುವಿಕೆ ಹೆಚ್ಚಿದೆ. ಪರಿಣಾಮ ಮಳೆಯಾದರೂ ಅಂತರ್ಜಲಮಟ್ಟ ಹೆಚ್ಚುತ್ತಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಅಂತರ್ಜಲ ಕುಸಿತ: ಇನ್ನು ನಗರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿಯುತ್ತಲೇ ಇದ್ದು, ಕಳೆದ ಹತ್ತು ವರ್ಷಗಳಲ್ಲಿ ಆನೇಕಲ್‌ ಸೇರಿದಂತೆ ನಾಲ್ಕೂ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಕನಿಷ್ಠ 3ರಿಂದ ಗರಿಷ್ಠ 28.65 ಮೀಟರ್‌ನಷ್ಟು ಕುಸಿತ ಕಂಡಿದೆ ಎಂದು ಅಂತರ್ಜಲ ನಿರ್ದೇಶನಾಲಯ ತಿಳಿಸಿದೆ.

1.50 ಲಕ್ಷ ನಿವೇಶನಗಳಲ್ಲಿ ಮಳೆ ನೀರು ಕೊಯ್ಲು: ನಗರದಲ್ಲಿ ಪ್ರಸ್ತುತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕಾರ ನಗರದಲ್ಲಿ ಆಸ್ತಿ ತೆರಿಗೆದಾರರ ಸಂಖ್ಯೆ 19.5 ಲಕ್ಷ. ಜಲ ಮಂಡಳಿಯಲ್ಲಿ ನೀರಿನ ಸಂಪರ್ಕ ಹೊಂದಿದವರ ಸಂಖ್ಯೆ 10 ಲಕ್ಷ. ಆದರೆ, ಇದರಲ್ಲಿ 30×40 ಅಡಿಗಿಂತ ಹೆಚ್ಚು ವಿಸ್ತೀರ್ಣದ 2007ರಿಂದ ನಂತರದ ನಿವೇಶನಗಳಿಗೆ ಮಾತ್ರ ಮಳೆ ನೀರು ಕೊಯ್ಲು ಕಡ್ಡಾಯ.

ಅಂತಹ ಮನೆಗಳ ಸಂಖ್ಯೆ 2 ಲಕ್ಷ ಇದ್ದು, ಈ ಪೈಕಿ ಈಗಾಗಲೇ ಒಂದೂವರೆ ಲಕ್ಷ ನಿವೇಶನಗಳಲ್ಲಿ ಅಳವಡಿಕೆ ಆಗಿದೆ. 50 ಸಾವಿರ ನಿವೇಶನಗಳು ಮಾತ್ರ ಬಾಕಿ.  ಜಲಮಂಡಳಿ ಮೂಲಗಳ ಪ್ರಕಾರವೇ 30×40 ಚದರಡಿಯ ಹತ್ತು ಮನೆಗಳಿರುವ ಒಂದು ಪ್ರದೇಶದಲ್ಲಿ 50 ಮಿ.ಮೀ. ಮಳೆ ಬಿದ್ದರೆ, ಒಂದು ಲಕ್ಷ ಲೀ. ನೀರು ಹರಿದು ಅನಾಯಾಸವಾಗಿ ಚರಂಡಿಗೆ ಹೋಗುತ್ತದೆ.

ಈ ರೀತಿ ಹರಿಯುವ ನೀರು ಚರಂಡಿ ಮೂಲಕ ಕೆರೆಗಳಿಗೆ ಸೇರುತ್ತಿದೆ. ಇದರೊಂದಿಗೆ ಕೊಳಚೆ ನೀರು ಕೂಡ ಅದೇ ಕೆರೆಗೆ ಸೇರುತ್ತಿದೆ. ಹಾಗಾಗಿ, ಕೊಳಚೆ ನೀರಿನಿಂದ ಕೆರೆಗಳನ್ನು ಮುಕ್ತಗೊಳಿಸಿ, ಮಳೆ ನೀರನ್ನು ಆ ಕೆರೆಗಳಿಗೆ “ಲಿಂಕ್‌’ ಮಾಡಬಹುದು. ಕೆರೆ ಪಕ್ಕದಲ್ಲೇ ಸಂಸ್ಕರಣಾ ಘಟಕಗಳನ್ನು ಹಾಕಿ, ಆ ನೀರನ್ನು ಮರುಬಳಕೆ ಮಾಡಲು ಅವಕಾಶ ಇದೆ.

2008ರಿಂದ 2017ರವರೆಗೆ ನಗರದಲ್ಲಿ ಮಳೆ ಪ್ರಮಾಣ
ವರ್ಷ ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)
-2008 1,286.7
-2009 1,056.1
-2010 1,039.4
-2011 1,178.8
-2012 724.6
-2013 1,185.7
-2014 1,159.3
-2015 1,279.3
-2016 795.6
-2017 1,696

ಕಳೆದ ಹತ್ತು ವರ್ಷಗಳಲ್ಲಿ ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸರಾಸರಿ ಅಂತರ್ಜಲಮಟ್ಟ (ಮೀಟರ್‌ಗಳಲ್ಲಿ)
ತಾಲೂಕು ಏರಿಕೆ ಇಳಿಕೆ
-ಆನೇಕಲ್‌ – 18.58
-ಬೆಂಗಳೂರು ಉತ್ತರ – 2.99
-ಬೆಂಗಳೂರು ದಕ್ಷಿಣ – 4.68
-ಬೆಂಗಳೂರು ಪೂರ್ವ – 28.65

ವಿವಿಧ ಹಂತಗಳಲ್ಲಿ ನಗರ ಭೌಗೋಳಿಕ ವಿಸ್ತೀರ್ಣದ ವಿವರ (ಗೆಜೆಟೀಯರ್‌ ಪ್ರಕಾರ)
ವರ್ಷ ವಿಸ್ತೀರ್ಣ (ಚದರ ಕಿ.ಮೀ.)
-1700-1790 2
-1800-1947 69
-1951 69
-1963-1964 112
-1969 134
-1979 161
-1995 226
-2006 696
-2011 741

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.