ಮುಂದುವರಿದ ಮಳೆ ಅನಾಹುತ
Team Udayavani, May 9, 2019, 3:05 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅನಾಹುತಗಳು ಮುಂದುವರಿದಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ಮರವೊಂದು ಯುವತಿ ತಲೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಜೋರು ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ನಗರದಲ್ಲಿ ನೂರಾರು ಮರ-ಕೊಂಬೆಗಳು ಧರೆಗುರುಳಿದ್ದು, ಹಲವಾರು ವಾಹನಗಳು ಜಖಂಗೊಂಡಿವೆ. ಇದರೊಂದಿಗೆ ಗಾಯತ್ರಿನಗರ ವಾರ್ಡ್‌ನಲ್ಲಿ ಮರವೊಂದು ಪೂಜಾ ಎಂಬವರ ತಲೆ ಮೇಲೆ ಬಿದ್ದ ಪರಿಣಾಮ ಬೆನ್ನು ಹುರಿಗೆ ಹಾನಿಯಾಗಿದೆ.
ನಗರದಲ್ಲಿ ಬೀಳುವ ಸ್ಥಿತಿಯಲ್ಲಿರುವ ಹಾಗೂ ಒಣಗಿದ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ನಗರದಲ್ಲಿ ಮರಗಳು ಉರುಳಿ ಸಾವು-ನೋವು ಸಂಭವಿಸುತ್ತಿವೆ. ಇತ್ತೀಚೆಗೆ ನಾಗವಾರ ಹೊರವರ್ತುಲ ರಸ್ತೆಯಲ್ಲಿ ಮರ ಉರುಳಿ, ವ್ಯಕ್ತಿ ಮೃತಪಟ್ಟಿದ್ದರು.
ಮಂಗಳವಾರ ರಾತ್ರಿ ಮಳೆ ನಿಂತ ಬಳಿಕ ಪೂಜಾ ಅವರು ದ್ವಿಚಕ್ರ ವಾಹನ ನಿಲ್ಲಿಸವಾಗ ಸಮೀಪದಲ್ಲಿದ್ದ ಮರ ಉರುಳಿ, ಅವರ ತಲೆಗೆ ಪೆಟ್ಟಾಗಿದ್ದು, ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ಟು ಬಲವಾಗಿ ಬಿದ್ದ ಕಾರಣ ಪೂಜಾ ಅವರ ಬೆನ್ನು ಮೂಳೆಗೆ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.
63 ಮರಗಳು ಧರೆಗೆ: ಮಂಗಳವಾರ ರಾತ್ರಿ ಸುರಿದ ಮಳೆಗೆ ವಿವಿಧೆಡೆ 63 ಮರಗಳು ಧರೆಗುರುಳಿವೆ. ಇದರೊಂದಿಗೆ 75 ಕಡೆ ರೆಂಬೆ-ಕೊಂಬೆಗಳು ಬಿದ್ದು, ಕಾರು, ಆಟೋ ಹಾಗೂ ಬೈಕ್‌ಗಳಿಗೆ ಹಾನಿಯಾಗಿದೆ. ಮುಂಗಾರು ಪೂರ್ವದಲ್ಲೇ ಸಂಭವಿಸುತ್ತಿರುವ ಅನಾಹುತಗಳಿಂದ ಜನ ಆತಂಕಗೊಂಡಿದ್ದು, ಮಳೆ ಬರುವಾಗ ರಸ್ತೆಗಿಳಿಯಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ವೈದ್ಯಕೀಯ ವೆಚ್ಚ ಭರಿಸುವ ಭರವಸೆ: ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂಜಾ ಅವರನ್ನು ಬುಧವಾರ ಬೆಳಗ್ಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಮೇಯರ್ ಗಂಗಾಂಬಿಕೆ, ಪೋಷಕರಿಂದ ಘಟನೆ ಕುರಿತು ಮಾಹಿತಿ ಪಡೆದರು. ಜತೆಗೆ ವೈದ್ಯರಿಂದಲೂ ಮಾಹಿತಿ ಪಡೆದಿದ್ದು, ಪೂಜಾ ಅವರ ಚಿಕಿತ್ಸೆ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸುವ ಭರವಸೆ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬದಲಾದ ಪೋಸ್ಟ್‌ಗಳು: ನಗರದಲ್ಲಿ ಮಳೆಯಾದ ಸಂದರ್ಭಗಳಲ್ಲಿ ಮಳೆ ಚಿತ್ರಗಳನ್ನು ತೆಗೆದು ಹಂಚಿಕೊಳ್ಳುತ್ತಿದ್ದ ಜಾಲತಾಣಿಗರು, ಇದೀಗ ಫೇಸ್‌ಬುಕ್, ವಾಟ್ಸ್‌ಆ್ಯಫ್ ಸೇರಿ ವಿವಿಧ ಸಾಮಾಜಿಕ ತಾಣಗಳಲ್ಲಿ; “ಮಳೆಯಾಗುತ್ತಿದೆ. ಮನೆ ಹೋಗುವಾಗ ಹುಷಾರು. ಮರಗಳು ಉರುಳಿ ಅನಾಹುತಗಳು ಸಂಭವಿಸುತ್ತಿವೆ’ ಎಂಬ ಪೋಸ್ಟ್ ಹಾಕುತ್ತಿದ್ದಾರೆ. ಇನ್ನೂ ಕೆಲವರು, “ರಸ್ತೆಯಲ್ಲಿ ಬರುವಾಗ ಪಕ್ಕದಲ್ಲಿನ ಮರ ನನ್ನಮೇಲೇ ಬೀಳುತ್ತದೇನೋ ಅನ್ನೋ ಭಯ ಕಾಡುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಅನಾಹುತ ಪರಿಶೀಲಿಸಿದ ಮೇಯರ್: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಮೇಯರ್ ಗಂಗಾಂಬಿಕೆ ಅವರು ಬುಧವಾರ ಬೆಳಗ್ಗೆ ಭೇಟಿ ನೀಡಿದ್ದರು. ಯಲಹಂಕ ವಲಯದ ಕೊಡಿಗೆಹಳ್ಳಿ ವಾರ್ಡ್‌ನ ಭದ್ರಪ್ಪ ಬಡಾವಣೆಯಲ್ಲಿ ಮಳೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದರು.
ಈ ವೇಳೆ ಪಾಲಿಕೆಯಿಂದ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಚರಂಡಿ ನೀರು ಸಮರ್ಪಕವಾಗಿ ಹರಿಯಲಾಗಿದೆ. ಬಡಾವಣೆ ರಸ್ತೆಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಚರಂಡಿ ನೀರು ಹೋಗಲು ಅಗತ್ಯ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮೇಯರ್‌ಗೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಮೇಯರ್, ಕೂಡಲೇ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಇಲ್ಲವೆ, ನೀರು ರಸ್ತೆ ಮೇಲೆ ಬಾರದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಹೆಬ್ಬಾಳ ವೃತ್ತದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಮೇಯರ್, ಪ್ರತಿ ಬಾರಿ ಈ ವೃತ್ತದಲ್ಲಿ ಮಳೆ ನೀರು ನಿಂತು ತೊಂದರೆಯಾಗುತ್ತಿದೆ. ಆದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಗರಂ ಆದರು. ಕೂಡಲೇ ಚರಂಡಿಗಳಲ್ಲಿರುವ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ನಂತರ ಬಸವೇಶ್ವರ ವೃತ್ತದ ಬಳಿ ಆಲದ ಮರದ ಕೊಂಬೆಗಳು ರಸ್ತೆಗೆ ಅಡ್ಡವಾಗಿರುವುದನ್ನು ಪಾಲಿಕೆಯ ಸಿಬ್ಬಂದಿ ತೆರವುಗೊಳಿಸುತ್ತಿರುವ ಕಾರ್ಯವನ್ನು ಪರಿಶೀಲಿಸಿ, ನಗರದಲ್ಲಿ ಯಾವುದೇ ಭಾಗದಲ್ಲಿ ಮರ ಉರುಳಿದರೂ ಕೂಡಲೆ ತೆರವುಗೊಳಿಸುವಂತೆ ಸೂಚಿಸಿದರು. ನಗರ ಪರಿಶೀಲನೆಯ ವೇಳೆ ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷ ನಾಯಕ ವಾಜೀದ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.