ಸಿಕ್ಕಿದ್ದು 90; ಕೊಟ್ಟದ್ದು 40!
Team Udayavani, May 9, 2019, 6:00 AM IST
ಸುಳ್ಯ: ಫಲಿತಾಂಶ ಪ್ರಕಟವಾದಾಗ ಕನ್ನಡ ಪಠ್ಯದಲ್ಲಿ ಸಿಕ್ಕಿದ್ದು 40 ಅಂಕ. ಉತ್ತರಪತ್ರಿಕೆ ತರಿಸಿ ಪರಿಶೀಲಿಸಿದಾಗ ಅದರಲ್ಲಿರುವುದು 90 ಅಂಕ!
ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ ಕಡಿಮೆ ಅಂಕ ದೊರೆತಿದೆ. ಉತ್ತರ ಪತ್ರಿಕೆ ಪರಿಶೀಲಿಸಿದ ಸಂದರ್ಭ ಅಸಲಿ ಕಥೆ ಗೊತ್ತಾಗಿದೆ.
ಕೇರ್ಪಳ ನಿವಾಸಿ ಸೋಮನಾಥ ಅವರ ಪುತ್ರಿ ಯುಕ್ತಾ ಕನ್ನಡ ಹೊರತುಪಡಿಸಿ ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರು. ಕನ್ನಡದಲ್ಲಿ ಹೆಚ್ಚು ಅಂಕ ಬರಬೇಕಿದ್ದ ಕಾರಣ ಹಣ ಪಾವತಿಸಿ ಉತ್ತರಪತ್ರಿಕೆಯ ಛಾಯಾಪ್ರತಿ ತರಿಸಲಾಯಿತು. ಈ ವೇಳೆ 90 ಅಂಕದಷ್ಟು ಈಕೆ ಸರಿ ಉತ್ತರ ಬರೆದಿರುವುದು ಬೆಳಕಿಗೆ ಬಂದಿದೆ.ಇದರಿಂದ ಈಕೆಗೆ 50 ಅಂಕ ನಷ್ಟವಾಗಿದೆ.
ಆದರೆ ಹೆಚ್ಚುವರಿ 50 ಅಂಕವನ್ನು ಪೂರ್ತಿ ಸೇರಿಸಲು ಸಾಧ್ಯವಿಲ್ಲ. 6 ಅಂಕವಷ್ಟೇ ಸೇರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ ಎಂದು ಆಕೆಯ ಪೋಷಕರು ದೂರಿದ್ದು, ಇದರಿಂದ ಶೇಕಡಾವಾರು ಅಂಕ ಕುಸಿತ ಕಂಡಿದೆ ಎಂದಿದ್ದಾರೆ. ವೈದ್ಯೆಯಾಗುವ ಕನಸು ಕಂಡಿರುವ ಈಕೆ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿದ್ದು, 44 ಅಂಕ ನೀಡದಿರುವ ಇಲಾಖೆ ಬಗ್ಗೆ ಅಚ್ಚರಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.