![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, May 9, 2019, 6:10 AM IST
ನವದೆಹಲಿ: ಪುಲ್ವಾಮಾ ದಾಳಿ ನಂತರ, ಪಾಕಿಸ್ತಾನದ ನೆಲದಲ್ಲೇ ಹೋಗಿ ಭಾರತ ನಡೆಸಿದ್ದ ಸರ್ಜಿಕಲ್ ದಾಳಿಯಲ್ಲಿ ಸುಮಾರು 170 ಜೈಶ್ ಉಗ್ರರು ಸತ್ತಿದ್ದಾರೆ ಎಂದು ಇಟಲಿಯ ಪತ್ರಕರ್ತೆಯೊಬ್ಬರು ವರದಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನವೇ ವಿದೇಶಿ ಪತ್ರಕರ್ತರನ್ನು ಬಾಲಕೋಟ್‌ಗೆ ಕರೆದೊಯ್ದಿತ್ತು. ಈ ತಂಡದಲ್ಲಿದ್ದ ಇಟಲಿ ಪತ್ರಕರ್ತೆ ಫ್ರಾನ್ಸೆಕಾ ಮರಿನೋ, ಸ್ಥಳೀಯ ಮೂಲಗಳನ್ನು ಆಧರಿಸಿ ವಸ್ತುಸ್ಥಿತಿ ವರದಿ ಮಾಡಿದ್ದಾರೆ. ಭಾರತ ನಡೆಸಿದ ದಾಳಿಯಲ್ಲಿ ಸುಮಾರು 130-170 ಜೈಶ್ ಉಗ್ರರು ಸತ್ತಿದ್ದಾರೆ. 45ಕ್ಕೂ ಹೆಚ್ಚು ಉಗ್ರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇನ್ನೂ ಪಾಕ್ ಸೇನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಬರೆದಿದ್ದಾರೆ. ಇವರ ಪ್ರಕಾರ ದಾಳಿ ವೇಳೆ 100 ಕ್ಕೂ ಹೆಚ್ಚು ಉಗ್ರರು ಸ್ಥಳದಲ್ಲೇ, ಸೇನೆಯ ಆಸ್ಪತ್ರೆಯಲ್ಲಿ ಕೆಲವರು ಸತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.
ಬಾಲಕೋಟ್‌ನಲ್ಲಿನ ಉಗ್ರರ ನೆಲೆ ಬಳಿಯೇ ಶಿಂಕಿಯಾರಿಯಲ್ಲಿ ಸೇನಾ ನೆಲೆ ಇದೆ. ದಾಳಿ ನಡೆದ ಎರಡೂವರೆ ಗಂಟೆಗಳಲ್ಲಿ ಅಂದರೆ, ಬೆಳಗ್ಗೆ 6 ಗಂಟೆ ಸುಮಾರಿಗೆ ಸೇನೆ ಅಲ್ಲಿಗೆ ತಲುಪಿತ್ತು. ಆಗ ಗಾಯಗೊಂಡವರನ್ನು ಹರ್ಕತ್ ಉಲ್ ಮುಜಾಹಿದೀನ್ ಕ್ಯಾಂಪ್‌ಗೆ ಸಾಗಿಸಿದೆ. ಇಲ್ಲಿ ಪಾಕ್ ಸೇನೆಯ ವೈದ್ಯರು ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಪಕಿ 20 ಉಗ್ರರು ಸಾವನ್ನಪ್ಪಿದ್ದರೆ, ಉಳಿದವರು ಇನ್ನೂ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಚೇತರಿಸಿಕೊಂಡಿದ್ದು, ಅವರನ್ನೂ ಸೇನೆ ತನ್ನ ವಶದಲ್ಲಿಟ್ಟುಕೊಂಡಿದೆ. ಸಾವನ್ನಪ್ಪಿದವರ ಪೈಕಿ 11 ತರಬೇತುದಾರರೂ ಇದ್ದಾರೆ. ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿರುವ ಇವರು ಇತರರಿಗೆ ಬಾಂಬ್ ತಯಾರಿಕೆ ತರಬೇತಿ ನೀಡುತ್ತಿದ್ದರು.
ಸೇನೆ ನಿಯಂತ್ರಣದಲ್ಲಿ ಉಗ್ರ ಕ್ಯಾಂಪ್: ಈಗಲೂ ಈ ಕ್ಯಾಂಪ್ ಸೇನೆ ನಿಯಂತ್ರಣದಲ್ಲಿದೆ. ಈ ಉಗ್ರ ನೆಲೆ ಒಂದು ಗುಡ್ಡದ ಮೇಲಿದ್ದು, ಗುಡ್ಡದ ಬುಡದಲ್ಲಿ ಹೊಸದಾಗಿ ಬೋರ್ಡ್ ಹಾಕಲಾಗಿದೆ.
ಈ ಹಿಂದೆ ಜೈಶ್ ಎ ಮೊಹಮದ್ ಉಲ್ಲೇಖ ಬೋರ್ಡ್‌ನಲ್ಲಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಇದನ್ನು ತೆಗೆದುಹಾಕಲಾಗಿದೆ. ಸ್ಥಳೀಯ ಪೊಲೀಸರಿಗೂ ಇಲ್ಲಿಗೆ ತೆರಳಲು ಅನುಮತಿ ಇಲ್ಲ. ಕೇವಲ ಸೇನೆಯೇ ಈ ಪ್ರದೇಶಕ್ಕೆ ಕಾವಲು ಹಾಕಿದೆ.
ತ್ಯಾಜ್ಯ ನದಿಗೆ ಎಸೆದ ಸೇನೆ: ಬಾಲಕೋಟ್ ದಾಳಿ ನಡೆದ ನಂತರ ದಾಳಿಯಿಂದಾಗಿ ಹಾನಿಗೀಡಾದ ಪ್ರದೇಶವನ್ನು ಮರುನಿರ್ಮಾಣ ಮಾಡಿದೆ. ದಾಳಿ ನಡೆದ ಮರುದಿನ ರಾತ್ರಿಯಿಂದಲೇ ಲಾರಿಗಳಲ್ಲಿ ತ್ಯಾಜ್ಯವನ್ನು ಸಮೀಪದ ನದಿಗೆ ಎಸೆಯಲಾಗಿದೆ. ಹಗಲು ಹೊತ್ತಿನಲ್ಲಿ ಇಲ್ಲಿ ಯಾವ ಕೆಲಸವೂ ನಡೆಯುತ್ತಿರಲಿಲ್ಲ. ರಾತ್ರಿಯೇ ಕೆಲಸ ಮಾಡಿ ಇಡೀ ಪ್ರದೇಶದಲ್ಲಿ ದಾಳಿಯ ಕುರುಹು ಕಾಣದಂತೆ ಮರುನಿರ್ಮಾಣ ಮಾಡಲಾಗಿದೆ. ಇಡೀ ಕಟ್ಟಡಕ್ಕೆ ಹೊಸದಾಗಿ ಪೇಂಟ್ ಮಾಡಲಾಗಿದೆ ಎಂದು ಪತ್ರಕರ್ತೆ ಮರಿನೋ ಹೇಳಿದ್ದಾರೆ. ಪಾಕಿಸ್ತಾನ ತನ್ನ ಮಾನ ಉಳಿಸಿಕೊಳ್ಳಲು ಅಂತಾರಾಷ್ಟ್ರೀಯ ಪತ್ರಕರ್ತರಿಗೆ ಈ ಪ್ರದೇಶವನ್ನು ತೋರಿಸಿತ್ತು. ಆದರೆ ನಿಜವಾಗಿ ದಾಳಿಗೊಳಗಾದ ಪ್ರದೇಶವನ್ನು ತೋರಿಸಲಿಲ್ಲ. ಈ ಪ್ರದೇಶ ಸುಮಾರು ಒಂದೂವರೆ ಎಕರೆ ವ್ಯಾಪ್ತಿಯಲ್ಲಿದೆ. 3-4 ಶಿಕ್ಷಕರನ್ನು ತೋರಿಕೆಗೆ ನೇಮಿಸಲಾಗಿದೆ. ಈ ಪ್ರದೇಶಕ್ಕೆ ತೆರಳಲು ಗುಡ್ಡದ ಬುಡದಿಂದ ಒಂದೂವರೆ ಗಂಟೆ ಬೇಕು. ಇಲ್ಲಿ ಜನವಸತಿ ಇಲ್ಲ. ಜನವಸತಿಯಿಂದ ಇಷ್ಟು ದೂರದಲ್ಲಿ ಯಾರೂ ಮದರಸಾ ನಿರ್ಮಾಣ ಮಾಡುವುದಿಲ್ಲ ಎಂದು ಪತ್ರಕರ್ತೆ ಮರಿನೋ ತಮ್ಮ ವರದಿಯಲ್ಲಿ ಹೇಳಿಕೊಂಡಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.