ಆರ್‌ಟಿಇಯಲ್ಲಿ ತಿದ್ದುಪಡಿ: ಹೆತ್ತವರ ನಿರಾಸಕ್ತಿ
ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಕೆ ಶೂನ್ಯ!
Team Udayavani, May 9, 2019, 7:04 AM IST
ಪುತ್ತೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನಗೊಂಡ ಬಳಿಕ ಇದೇ ಮೊದಲ ಬಾರಿಗೆ ಆರ್‌ಟಿಇ ಸೀಟುಗಳು ಬೇಡಿಕೆ ಕಳೆದುಕೊಂಡಿದ್ದು, ಪುತ್ತೂರಿನಲ್ಲಿ ಈ ಬಾರಿ 41 ಸೀಟುಗಳನ್ನು ಮೀಸಲಿಟ್ಟಿದ್ದರೂ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ!
ಸರಕಾರವು ಆರ್‌ಟಿಇನಲ್ಲಿ ತಿದ್ದುಪಡಿ ತಂದು ಅನುದಾನಿತ ಶಾಲೆಗಳಿಗೆ ಆದ್ಯತೆ ನೀಡಿದ ಪರಿಣಾಮ ಆರ್‌ಟಿಇ ಅಡಿ ತಮ್ಮ ಮಕ್ಕಳನ್ನು ದಾಖಲಿಸಲು ಹೆತ್ತವರು ಮುಂದೆ ಬರುತ್ತಿಲ್ಲ. ಹೀಗಾಗಿ 2012ರಲ್ಲಿ ರಾಜ್ಯದಲ್ಲಿ ಆರ್‌ಟಿಇ ಅನುಷ್ಠಾನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗದೇ ಇರುವುದು ವಿಶೇಷ.
ಈ ಹಿಂದಿನಿಂದಲೂ ಸರಕಾರ ಆರ್‌ಟಿಇ ಸೀಟು ಹಂಚಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದ ಪರಿಣಾಮ, ಹೆಚ್ಚಿನ ಹೆತ್ತವರು ಅರ್ಜಿ ಸಲ್ಲಿಕೆ ಆರ್‌ಟಿಇ ಸೀಟಿಗೆ ಕಾದು ಬಳಿಕ ತಮ್ಮ ಮಕ್ಕಳನ್ನು ಶುಲ್ಕ ಪಾವತಿಸಿಯೇ ಶಾಲೆಗೆ ದಾಖಲಿಸುತ್ತಿದ್ದರು. ಅಂದರೆ ಮೂರು ಹಂತಗಳಲ್ಲಿ ಆರ್‌ಟಿಇ ಸೀಟು ಹಂಚಿಕೆಯಾಗುವ ಪರಿಣಾಮ ಮೊದಲ ಹಂತದಲ್ಲಿ ಬಹುತೇಕ ಮಂದಿ ಆರ್‌ಟಿಇನ ಲಾಭ ಪಡೆದರೆ, ಉಳಿದ ಹಂತಗಳಲ್ಲಿ ಕೆಲವರು ಮಾತ್ರ ಆರ್‌ಟಿಇನಡಿ ಮಕ್ಕಳನ್ನು ದಾಖಲಿಸುತ್ತಿದ್ದರು. ಆದರೆ ಈ ಬಾರಿ ಅನುದಾನಿತ ಶಾಲೆಗಳಲ್ಲಿ ಕನ್ನಡಕ್ಕೆ ಮಾತ್ರ ಅವಕಾಶವಿರುವುದರಿಂದ ಯಾರೂ ಆರ್‌ಟಿಇಗೆ ಆಸಕ್ತಿ ತೋರಿಸುತ್ತಿಲ್ಲ.
ಕಳೆದ ವರ್ಷ 445 ಸೀಟುಗಳು
ಕಳೆದ ವರ್ಷ ಪುತ್ತೂರು ತಾಲೂಕಿನಲ್ಲಿ ಒಟ್ಟು ಮೂರು ಹಂತಗಳಲ್ಲಿ 445 ಸೀಟುಗಳನ್ನು ಆರ್‌ಟಿಇ ಅಡಿ ಮೀಸಲಿಡಲಾಗಿತ್ತು. ಕಳೆದ ವರ್ಷ 201 ಮಂದಿ ಖಾಸಗಿ ಶಾಲೆಗಳ ಎಲ್ಕೆಜಿಗೆ ದಾಖಲಾಗಿದ್ದರು. ಒಟ್ಟು 1,794 ವಿದ್ಯಾರ್ಥಿಗಳು 34 ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರು. ಆರ್‌ಟಿಇ ಅಡಿ ಸೀಟು ನೀಡಿರುವ ವಿದ್ಯಾಸಂಸ್ಥೆಗಳಿಗೆ 2 ಹಂತಗಳಲ್ಲಿ ಅನುದಾನ ಬಿಡುಗಡೆಯಾಗುತ್ತಿದ್ದು, ಮುಂದಿನ 4 ದಿನಗಳಲ್ಲಿ ಎಲ್ಲ ವಿದ್ಯಾ ಸಂಸ್ಥೆಗಳಿಗೂ ಮೊದಲ ಹಂತದ ಅನುದಾನ ಅವರ ಖಾತೆಗೆ ಜಮೆಯಾಗಲಿದೆ ಎಂದು ಬಿಇಒ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
7 ಶಾಲೆಗಳಲ್ಲಿ 41 ಸೀಟುಗಳು
ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ 2 ಸೀಟುಗಳು, ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲೆಯಲ್ಲಿ 6 ಸೀಟುಗಳು, ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿ.ಪ್ರಾ. ಶಾಲೆಯಲ್ಲಿ 4 ಸೀಟುಗಳು, ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ 3 ಸೀಟುಗಳು, ನೆಟ್ಟಣಿಗೆಮುಟ್ನೂರು ಪಾಲೆತ್ತಡ್ಕ ಶ್ರೀ ಗಜಾನನ ಹಿ.ಪ್ರಾ. ಶಾಲೆಯಲ್ಲಿ 13 ಸೀಟುಗಳು, ಪಡುವನ್ನೂರು ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ. ಶಾಲೆಯಲ್ಲಿ 5 ಸೀಟುಗಳು ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಹಿ.ಪ್ರಾ. ಶಾಲೆಯಲ್ಲಿ 8 ಸೀಟುಗಳು ಸೇರಿ ಒಟ್ಟು 7 ಶಾಲೆಗಳಲ್ಲಿ 41 ಸೀಟುಗಳನ್ನು ಮಾತ್ರ ಆರ್‌ಟಿಇ ಅಡಿ ಮೀಸಲಿರಿಸಲಾಗಿದೆ.
ಈ ಬಾರಿ ಬದಲಾವಣೆಆರ್‌ಟಿಇ ಸೀಟು ಪಡೆಯುವುದಕ್ಕೆ ಈ ಬಾರಿ ಬದಲಾವಣೆ ಮಾಡಿದ್ದು, ಅನುದಾನಿತ ಶಾಲೆಗಳಿಗೆ ಮಾತ್ರ ಅವಕಾಶವಿದೆ. ಅದರಲ್ಲೂ ಸರಕಾರಿ ಶಾಲೆಗಳಿದ್ದ ಪ್ರದೇಶದಲ್ಲಿ ಆರ್‌ಟಿಇ ಸೀಟುಗಳಿಗೆ ಅವಕಾಶವಿಲ್ಲ. ಆರ್‌ಟಿಇ ಅರ್ಜಿ ಸಲ್ಲಿಕೆ, ಸೀಟು ಹಂಚಿಕೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ.
– ಸುಂದರ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು.
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್ ಧನ್‌ಕರ್
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.