ಸಮಾನತೆಯ ಹರಿಕಾರ ಅಣ್ಣ ಬಸವಣ್ಣ


Team Udayavani, May 9, 2019, 12:56 PM IST

Udayavani Kannada Newspaper

ಗದಗ: ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರು ಮಾನವೀಯ ಮೌಲ್ಯಗಳ ಮೇರು ಪರ್ವತ ಇದ್ದಂತೆ ಎಂದು ದಸಂಸ ರಾಜ್ಯ ಮುಖಂಡ ದಲಿತ ನೌಕರ ಅಧ್ಯಕ್ಷ ಎಸ್‌.ಎನ್‌. ಬಳ್ಳಾರಿ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಬಸವಣ್ಣನವರ 914ನೇ ಜಯಂತ್ಯುತ್ಸವದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಅಣ್ಣ ಬಸವಣ್ಣನ ಆಶಯದಂತೆ ಇವನಾರವ ಇವನಾರವ ಎಂದೆನಿಸದೇ, ಇವನಮ್ಮವ ಎಂದೆನಿಸಯ್ಯ ಎಂಬ ನುಡಿಯಂತೆ ಸರ್ವರೂ ಬಾಳಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಶಾಂತಿ, ಸಹೋದರತೆ ಬೆಳೆಯುತ್ತದೆ ಎಂದರು.

ಜೈ ಭೀಮ ಆಟೋ ರಿಕ್ಷಾ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ ಮಾತನಾಡಿ, 12ನೇ ಶತಮಾನನದಲ್ಲಿ ಬಸವಣ್ಣನವರು ಮೂಢನಂಬಿಕೆ, ಅಸ್ಪೃಶ್ಯತೆ ತೊಲಗಿಸಲು ಸಾಕಷ್ಟು ಪ್ರಯತ್ನಿಸಿದರು. ತಮ್ಮ ವಚನಗಳ ಮೂಲಕ ಬಸವಾದಿ ಶರಣರು ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಪ್ರಯತ್ನಿಸಿದರು. 12ನೇ ಶತಮಾನದಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾರುತಿ ಗುಡಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವರಾಜ್‌ ಬಳ್ಳಾರಿ, ವಿನಾಯಕ ಬಳ್ಳಾರಿ, ರವಿ ಹಾದಿಮನಿ, ಚಂದ್ರಶೇಖರ ಮೇಲಿನಮನಿ, ಚಂದ್ರಶೇಖರ ಹಾದಿಮನಿ, ವೈ.ಡಿ. ಮುಳ್ಳಾಳ, ಮಂಜುನಾಥ ಪೂಜಾರ, ಚಂದ್ರು ಚವ್ಹಾಣ, ಧರ್ಮಣ್ಣ ಹೊಸಮನಿ, ಇಮಾಮ ಕದಡಿ, ಸತೀಶ ಹೂಲಿ, ಶಿವಕುಮಾರ ಹಾದಿಮನಿ, ಶಿವಕುಮಾರ ಕೋಟ್ನೆಕಲ್, ನವೀನ ಭಂಡಾರಿ ಇದ್ದರು.

ಸಂಭ್ರಮದ ಬಸವೇಶ್ವರರ ಮೂರ್ತಿ ಮೆರವಣಿಗೆ
ಗಜೇಂದ್ರಗಡ: ಶ್ರೀ ಬಸವ ಜಯಂತಿ ಪ್ರಯುಕ್ತ ಗಜೇಂದ್ರಗಡ -ಉಣಚಗೇರಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೈಸೂರ ಮಠದಿಂದ ಆರಂಭವಾದ ಮೂರ್ತಿ ಮೆರವಣಿಗೆ ಶ್ರೀ ಬಸವೇಶ್ವರ ವೃತ್ತ, ಕೊಳ್ಳಿಯವರ ಕತ್ರಿ, ಶ್ರೀ ಕಟ್ಟಬಸವೇಶ್ವರ ರಂಗಮಂದಿರ, ಹಿರೇಬಜಾರ, ಗೌಳಿ ಗಲ್ಲಿ, ಶ್ರೀದುರ್ಗಾ ವೃತ್ತ ಮೂಲಕ ಮಠ ತಲುಪಿತು. ಮೆರವಣಿಗೆಯಲ್ಲಿ ನಂದಿ ಕೋಲು, ಡೊಳ್ಳು ಸೇರಿ ವಿವಿಧ ಮಂಗಲ ವಾದ್ಯಗಳು ಮೇಳೈಸಿದವು. ಶೃಂಗಾರಗೊಂಡ ನೂರಾರು ಜೋಡೆತ್ತುಗಳು ಮೆರವಣಿಗೆಗೆ ಮೆರಗು ನೀಡಿದವು. ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ, ಶಾಸಕ ಕಳಕಪ್ಪ ಬಂಡಿ, ಸಿ.ಎಸ್‌. ವಾಲಿ, ಐ.ಎ. ರೇವಡಿ, ಮುತ್ತಣ್ಣ ಮೆಣಸಿನಕಾಯಿ, ಶರಣಪ್ಪ ಇದ್ದರು.

ಟಾಪ್ ನ್ಯೂಸ್

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Waqf

Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.