ಕುಸಿಯುವ ಭೀತಿಯಲ್ಲಿ ಪ್ರಯಾಣಿಕರ ತಂಗುದಾಣ
ಮಳೆಗಾಲಕ್ಕೆ ಮೊದಲು ದುರಸ್ತಿಯಾಗದಿದ್ದರೆ ಅಪಾಯ ಸಾಧ್ಯತೆ
Team Udayavani, May 10, 2019, 6:00 AM IST
ಕಡಬ: ತಾಲೂಕು ಕೇಂದ್ರ ಕಡಬ ಪೇಟೆಯಲ್ಲಿರುವ ಪಂಚಾಯತ್ ಅಧೀನದ 2 ಪ್ರಯಾಣಿಕರ ತಂಗುದಾಣದ ಪೈಕಿ ದೈವಗಳ ಮಾಡದ ಬಳಿ ಇರುವ ತಂಗುದಾಣ ಸಂಪೂರ್ಣವಾಗಿ ಶಿಥಿಲಗೊಂಡು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದೆ.
ಮಳೆಗಾಲಕ್ಕೆ ಮೊದಲು ಈ ತಂಗು ದಾಣವನ್ನು ದುರಸ್ತಿಪಡಿಸದಿದ್ದಲ್ಲಿ ತಂಗು ದಾಣದ ಛಾವಣಿ ಕುಸಿದು ಪ್ರಯಾಣಿ ಕರಿಗೆ ಅಪಾಯ ಉಂಟಾಗುವುದರಲ್ಲಿ ಸಂಶಯವಿಲ್ಲ.
ಗ್ರಾ.ಪಂ.ಗೆ ಸಾರ್ವಜನಿಕರ ಆಗ್ರಹ
ಕಡಬ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತ ಬಸ್ ತಂಗುದಾಣವಿಲ್ಲ. ಕೆಎಸ್ಸಾರ್ಟಿಸಿ ವತಿಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿದೆಯಾದರೂ ಜಮೀನಿನ ಸಮಸ್ಯೆಯಿಂದಾಗಿ ಅದೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದು ಸಂಶಯ. ಇದೀಗ ಇರುವ ಪ್ರಯಾಣಿಕರ ತಂಗುದಾಣವೂ ಕುಸಿದು ಬೀಳುವ ಹಂತದಲ್ಲಿದೆ. ತಂಗುದಾಣದ ಛಾವಣಿಯ ಮರದ ಪಕ್ಕಾಸು ಹಾಗೂ ರೀಪುಗಳು ಶಿಥಿಲಗೊಂಡು ಮುರಿದು ಹೋಗಿವೆ. ಅಲ್ಲಲ್ಲಿ ಹೆಂಚುಗಳು ಕೆಳಕ್ಕೆ ಬಿದ್ದು ಆಕಾಶ ಕಾಣಿಸುತ್ತಿದೆ. ಪ್ರಸ್ತುತ ಸಾರ್ವಜನಿಕರು ಇದೇ ತಂಗುದಾಣವನ್ನು ಬಳಸುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಆದುದರಿಂದ ಕೂಡಲೇ ಪಂಚಾಯತ್ ಆಡಳಿತ ಈ ಕುರಿತು ಗಮನಹರಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
– ರಾಜ್‌ಕುಮಾರ್ ಜೈ ಭಗವಾನ್, ಕಡಬ ನಿವಾಸಿ
– ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.