ಶಾಸಕರು, ಸಾರ್ವಜನಿಕರಿಂದ ಶ್ರಮದಾನ
Team Udayavani, May 10, 2019, 6:10 AM IST
ಉಡುಪಿ: ಬಜೆ ಅಣೆಕಟ್ಟು ಪ್ರದೇಶಕ್ಕೆ ನೀರು ಹರಿಸಲು ಶಾಸಕ ರಘುಪತಿ ಭಟ್, ನಗರಸಭಾ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಗುರುವಾರ ಶ್ರಮದಾನ ನಡೆಯಿತು.
“ನೀರಿದ್ದರೂ ನಿರ್ವಹಣೆಯ ವೈಫಲ್ಯದಿಂದಾಗಿ ಉಡುಪಿ ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾ ಗಿದೆ. ಈ ಹಿಂದೆಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಹಲವು ಬಾರಿ ಸೂಚಿಸಿದರೂ ಗಮನ ಹರಿಸಿಲ್ಲ. ಈಗ ತಡವಾಗಿ ಎಚ್ಚೆತ್ತುಕೊಂ ಡಿದ್ದಾರೆ. ಶೀರೂರು ಅಣೆಕಟ್ಟಿನಿಂದ ಬಜೆ ಅಣೆಕಟ್ಟಿನ ವರೆಗೆ ಅಲ್ಲಲ್ಲಿ ಗುಂಡಿಗಳಲ್ಲಿ ನೀರಿದೆ. ಅದು ಬಜೆ ಡ್ಯಾಂಗೆ ಪ್ರವಹಿಸು ವಂತೆ ಮಾಡಿದರೆ ಮುಂದಿನ 45 ದಿನಗಳವರೆಗೆ ನೀರು ಕೊಡಬಹುದು. ಪ್ರಸ್ತುತ ನಾನು ಮತ್ತು ನಗರಸಭಾ ಸದಸ್ಯರು ಸಾರ್ವಜನಿಕರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದೇವೆ’ ಎಂದು ರಘುಪತಿ ಭಟ್ ತಿಳಿಸಿದರು.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶ್ರಮದಾನ ಆರಂಭವಾಗಲಿದೆ.
ಜಿಲ್ಲಾಧಿಕಾರಿಗೆ ದೂರು
ಈ ನಡುವೆ ಶಾಸಕರು ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ವಾಟ್ಸ್ಆ್ಯಪ್ನಲ್ಲಿ ಕರೆ ನೀಡಿದ್ದಾರೆ ಎಂಬ ಬಗ್ಗೆ ಚುನಾವಣ ಅಧಿಕಾರಿಗಳಿಗೆ ದೂರು ಬಂದಿದೆ. ಪಕ್ಷದ ಏಜೆಂಟರನ್ನು ಸಂಪರ್ಕಿಸಿದಾಗ ಜಾಲತಾಣದಲ್ಲಿ ಯಾವುದೇ ಕರೆ ನೀಡಿಲ್ಲ ಎಂದು ತಿಳಿದು ಬಂದಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.