‘ವೈಚಾರಿಕ ಬೆಳವಣಿಗೆಗೆ ಉತ್ತಮ ಸಾಹಿತ್ಯ ಕೃತಿ ಅಗತ್ಯ’
ಸಾಹಿತ್ಯ | ಚಾತುರ್ಮಾಸ್ಯ ಕವಿಗೋಷ್ಠಿ ಕವನಗಳ ಸಂಕಲನ ಬಿಡುಗಡೆ
Team Udayavani, May 10, 2019, 10:33 AM IST
ಡನೀರು ಶ್ರೀಗಳು ಕೃತಿಯನ್ನು ಬಿಡುಗಡೆಗೊಳಿಸಿದರು.
ಬದಿಯಡ್ಕ, ಮೇ 9: ವ್ಯಕ್ತಿತ್ವ ವಿಕಸನದೊಂದಿಗೆ ಸಾಮಾಜಿಕ, ಧಾರ್ಮಿಕ, ವೈಚಾರಿಕ ಬೆಳವಣಿಗೆಗಳಿಗೆ ಉತ್ತಮ ಸಾಹಿತ್ಯ ಕೃತಿಗಳು ಬೆಂಬಲ ನೀಡುತ್ತದೆ. ನಶಿಸುತ್ತಿರುವ ಪರಂಪರೆ, ನಂಬಿಕೆಗಳನ್ನು ಸುದೃಢಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳು ಮೂಡಿಬರಬೇಕು. ಭಕ್ತಿಯ ಶಕ್ತಿಯನ್ನು ಪ್ರಚುರಪಡಿಸುವ ಕೆಲಸ ಸಾಹಿತ್ಯ ಕೃತಿಗಳಿಂದ ಸಾಧ್ಯ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳು ತಿಳಿಸಿದರು.
ಎಡನೀರು ಶ್ರೀ ಮಠದಲ್ಲಿ 2018ರಲ್ಲಿ ನಡೆದ ನಡೆದ ಶ್ರೀಗಳ 58ನೇ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಏರ್ಪಡಿಸಲಾಗಿದ್ದ ಕವಿಗೋಷ್ಠಿಯ ವಾಚಿಸಲ್ಪಟ್ಟ ಕವನಗಳನ್ನು ಒಗ್ಗೂಡಿಸಿ ಪ್ರಕಟಿಸಲಾದ ಸ್ಮೃತಿ ಸಂಪದದ ಅನುಬಂಧ ರೂಪದಲ್ಲಿ ಹೊರತರಲಾದ ಕಾವ್ಯ ಸೌರಭ ಕವನ ಸಂಗ್ರಹ ಹೊತ್ತಗೆಯನ್ನು ಶ್ರೀ ಮಠದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಶ್ರೀಗಳು ಅನುಗ್ರಹ ಆಶೀರ್ವಚನ ನೀಡಿದರು. ಚಾತುರ್ಮಾಸ್ಯ ವ್ರತಾನುಷ್ಠಾನದ ಧಾರ್ಮಿಕ ವ್ಯವಸ್ಥೆಯಲ್ಲಿ ಸಾಹಿತ್ಯ ವೇದಿಕೆಯೊಂದು ಒದಗಿಬಂದದ್ದು ಅತ್ಯಂತ ಅರ್ಥಪೂರ್ಣವಾದುದು. ಜತೆಗೆ ಕವಿಗೋಷ್ಠಿಯ ಕವನಗಳ ಆಗ್ರಹವೂ ಒಂದು ದಾಖಲೆಯಾಗಿದೆ ಎಂದು ಶ್ರೀಗಳು ಈ ಸಂದರ್ಭ ತಿಳಿಸಿದರು.
ಕೃತಿಯ ಸಂಪಾದಕ, ಸಾಹಿತಿ, ಕಲಾವಿದ ಡಾ| ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ಉಪಸ್ಥಿತರಿದ್ದರು. ವೆಂಕಟ್ ಭಟ್ ಎಡನೀರು ವಂದಿಸಿದರು.
ಚಾತುರ್ಮಾಸ್ಯ ಕವಿಗೋಷ್ಠಿಯಲ್ಲಿ ಡಾ| ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಡಾ| ವಸಂತಕುಮಾರ್ ಪೆರ್ಲ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಎಸ್.ವಿ. ಭಟ್, ಡಾ| ರತ್ನಾಕರ ಮಲ್ಲಮೂಲೆ, ಟಿ.ಎನ್.ಎ.ಖಂಡಿಗೆ, ವಿರಾಜ್ ಅಡೂರು, ವಿಜಯಲಕ್ಷ್ಮೀ ಶ್ಯಾನುಭೋಗ್, ಸತ್ಯವತಿ ಎಸ್.ಭಟ್ ಕೊಳಚ್ಚಪ್ಪು, ಡಾ| ನರೇಶ್ ಮುಳ್ಳೇರಿಯ, ಪುರುಷೋತ್ತಮ ಭಟ್ ಕೆ, ಹ.ಸು. ಒಡ್ಡಂಬೆಟ್ಟು, ಡಾ| ರಾಧಾಕೃಷ್ಣ ಬೆಳ್ಳೂರು, ವೆಂಕಟ್ ಭಟ್ ಎಡನೀರು ಕವಿತೆಗಳನ್ನು ವಾಚಿಸಿದ್ದು, ಅವರ ಕವಿತೆಗಳು ಹೊತ್ತಗೆಯಲ್ಲಿ ಒಳಗೊಂಡಿದೆ. ಬಳಿಕ ಮಾಸ್ತರ್ ವಿಷ್ಣು ಭಟ್ ರಚಿಸಿದ್ದ ಪಾಂಚಜನ್ಯ ಯಕ್ಷಗಾನ ಪ್ರಸಂಗದ ಪ್ರದರ್ಶನ ಶ್ರೀ ಎಡನೀರು ಮೇಳದಿಂದ ಪ್ರಸ್ತುತಿಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.