ಕ್ಯಾಟ್ಫಿಶ್‌ಗಳ ಸಾಕಣೆ: ಇಬ್ಬರು ಆರೋಪಿಗಳ ಸೆರೆ
Team Udayavani, May 10, 2019, 10:44 AM IST
ಬೆಂಗಳೂರು: ಸೋಲದೇವನಹಳ್ಳಿಯ ನೀಲಗಿರಿ ತೋಪಿನಲ್ಲಿ ನಿಷೇಧಿತ ಕ್ಯಾಟ್ಫಿಶ್‌ಗಳನ್ನು ಅಕ್ರಮ ಸಾಕುತ್ತಿದ್ದ ಜಾಲ ಪೊಲೀಸರ ಬಲೆಗೆ ಬಿದ್ದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಂಡಶೆಟ್ಟಿಹಳ್ಳಿಯ ನಾರಾಯಣ ಮೂರ್ತಿ (47) ಹಾಗೂ ಮಧುಗಿರಿಯ ಚಂದ್ರು (45) ಬಂಧಿತರು. ಆರೋಪಿಗಳು ಸೋಲದೇವನಹಳ್ಳಿಯ ಕಾಳತಮ್ಮನಹಳ್ಳಿಯ ನೀಲಗಿರಿ ತೋಪಿನ ಮಧ್ಯದಲ್ಲಿರುವ ಮೂರು ಎಕರೆ ಜಾಗದಲ್ಲಿನ ತೆರೆದ ಹೊಂಡಗಳಲ್ಲಿ ಕ್ಯಾಟ್ಫಿಶ್ ಸಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ, 20 ಟನ್‌ಗೂ ಅಧಿಕ ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಗುತ್ತಿಗೆ ಪಡೆದ ಜಮೀನಿನಲ್ಲಿ ಅರ್ಧ ಎಕರೆಗೆ ಒಂದರಂತೆ ಆರು ಹೊಂಡ ನಿರ್ಮಿಸಿ ಪಶ್ಚಿಮ ಬಂಗಾಳದಿಂದ ತಂದಿರುವ ಸಾವಿರಾರು ಮೀನುಗಳನ್ನು ಸಾಕುತ್ತಿದ್ದರು. ಸೋಲದೇವನಹಳ್ಳಿ ಸುತ್ತಲ ಕೋಳಿ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಮೀನುಗಳಿಗೆ ಹಾಕುತ್ತಿದ್ದರು. ನಂತರ ಬೆಳೆದ ಮೀನುಗಳನ್ನು ಮುಂಬೈ, ಕೇರಳ, ತಮಿಳುನಾಡಿನ ಕೆಲ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಉತ್ತರ ವಲಯದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ರೀನಾ, ಕ್ಯಾಟ್ಫಿಶ್‌ಗಳಿಗೆ ಕೋಳಿ ಅಥವಾ ಇತರೆ ಮಾಂಸದ ತ್ಯಾಜ್ಯವನ್ನು ಆಹಾರವಾಗಿ ಹಾಕಿ ಸಾಕಲಾಗುತ್ತದೆ. ಇದರಿಂದ ನೀರು ಕಲುಷಿತಗೊಂಡು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಆಫ್ರಿಕಾ ಮೂಲದ ಈ ಮೀನುಗಳನ್ನು ಭಾರತದಲ್ಲಿ ಸಾಕಣೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ಎನ್‌ಜಿಟಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರು ಹೊಂಡಗಳನ್ನು ನಾಶ ಪಡಿಸಿ, ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.