ಸಂಕಷ್ಟಗಳಿಗೆ ಸೆಡ್ಡುಹೊಡೆದು ಮಾದರಿಯಾದ ಆಶ್ರಯ್‌


Team Udayavani, May 11, 2019, 6:11 AM IST

10KSDE5-AASHRAY

ಜಿಲ್ಲೆಯ ಕುಳತ್ತೂರು ನಿವಾಸಿಯಾಗಿರುವ ಇವರು ಬೆಷಿಟ್‌ ಡಿಸೀಸ್‌ ಎಂಬ ಅತ್ಯಪರೂಪ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಂತಹಂತವಾಗಿ ದೇಹದ ಎಲ್ಲ ಅಂಗಾಗಗಳನ್ನೂ ಕ್ಷೀಣಿಸುವಂತೆ ಮಾಡುವ ಈ ರೋಗ ಈಗಾಗಲೇ ಇವರನ್ನು ಸಾಕಷ್ಟು ಬಳಲಿಸಿದೆ. ಮಾತನಾಡಲು, ಬಾಯಿ ತೆರೆಯಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇವರು ತೊಳಲುತ್ತಿದ್ದಾರೆ.

ಕಾಸರಗೋಡು: ತಮಗಿರುವ ಮಿತಿಗಳನ್ನು ಹಿಂದೇಟು ಹಾಕಿಸಿ ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ 1,200ರಲ್ಲಿ 1,133 ಅಂಕಗಳಿಸಿರುವ ಆಶ್ರಯ್‌ ಕುಮಾರ್‌ ಇತರರಿಗೆ ಮಾದರಿಯಾಗಿದ್ದಾರೆ.

ಆಶ್ರಯ್‌ ಚಟ್ಟಂಚಾಲ್‌ ಹೈಯರ್‌ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ವಿಜ್ಞಾನ ಇವರ ಪ್ರಧಾನ ಕಲಿಕಾ ವಿಷಯವಾಗಿದೆ. ರೋಗಬಾಧೆಯ ಪರಿಣಾಮ ಕೆಲವು ತಿಂಗಳು ಮಾತ್ರ ಶಾಲೆಗೆ ತೆರಳಲು ಇವರಿಗೆ ಸಾಧ್ಯವಾಗಿತ್ತು. ಮನೆಯಲ್ಲಿ ಕುಳಿತು ಇವರು ನಡೆಸಿದ ಅಹೋರಾತ್ರಿ ಕಲಿಕೆಯ ಹಿನ್ನೆಲೆಯಲ್ಲಿ ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ನಾಡಿಗೆ ಅಭಿಮಾನ ತಂದಿದ್ದಾರೆ. ಎಸ್‌.ಎಸ್‌.ಎಲ್‌.ಸಿ.ಯಲ್ಲೂ ಇವರು ಎಲ್ಲ ವಿಷಯಗಳಲ್ಲೂ “ಎ’ ಶ್ರೇಣಿ ಪಡೆದಿದ್ದರು. ವಿಜ್ಞಾನದಲ್ಲಿ ಈಗಾಗಲೇ ಇವರು ತಮ್ಮ ನೈಪುಣ್ಯವನ್ನು ಖಚಿತಪಡಿಸಿದ್ದಾರೆ.

ಐರಿಶ್‌ ವಿಜ್ಞಾನ ಮೇಳದಲ್ಲಿ
ರಾಜ್ಯದ ಪ್ರತಿನಿಧಿ
ದೇಶದ ಅತಿ ಶ್ರೇಷ್ಠ ವಿಜ್ಞಾನ ಮೇಳಗಳಲ್ಲಿ ಒಂದಾದ ಐರಿಶ್‌ ವಿಜ್ಞಾನ ಮೇಳದಲ್ಲಿ ಎರಡು ಬಾರಿ ರಾಜ್ಯದ ಪ್ರತಿನಿ ಧಿಯಾಗಿ ಭಾಗವಹಿಸಿ ಸೈ ಎನಿಸಿದ್ದಾರೆ. 2018ರಲ್ಲಿ ನಡೆದಿದ್ದ ಐರಿಶ್‌ ವಿಜ್ಞಾನ ಮೇಳದಲ್ಲಿ ಆಯ್ಕೆಗೊಂಡಿದ್ದ ಮೂರು ಪ್ರಬಂಧಗಳಲ್ಲಿ ಒಂದು ಇವರದಾಗಿತ್ತು. ಎಂಡೋಸಲಾ #ನ್‌ ಸಂತ್ರಸ್ತ ಮಕ್ಕಳ ಉದರದಲ್ಲಿ ಮೈಕ್ರೋ ಆರ್ಗನೈಸಂನ ಕುರಿತು ಇವರು ಅಂದು ಪ್ರಬಂಧ ರಚಿಸಿ, ಮಂಡಿಸಿದ್ದರು.

ಕೂಲಿಕಾರ್ಮಿಕ ರವೀಂದ್ರನ್‌-ದೀಪಾ ದಂಪತಿಯ ಎರಡನೇ ಮಗ ಈ ಆಶ್ರಯ್‌. ಬಾಲ್ಯದಿಂದಲೇ ಶಿಕ್ಷಣದಲ್ಲಿ ಅಪಾರ ಚುರುಕುತನ ಹೊಂದಿದ್ದರು. ರವೀಂದ್ರನ್‌ ಅವರ ಅಕಾಲಿಕ ಮರಣದ ನಂತರ ಕೊಳತ್ತೂರು ಗ್ರಾಮ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿರುವ ದೀಪಾ ಅವರ ಅಲ್ಪ ವೇತನವೇ ಈ ಮನೆಗೆ ಆಧಾರವಾಗಿದೆ. ನರ್ಸಿಂಗ್‌ ಕಲಿಕೆ ನಡೆಸುತ್ತಿರುವ ಅಣ್ಣ ಮತ್ತು ಹತ್ತನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ತಮ್ಮನೂ ಆಶ್ರಯ್‌ಗೆ ಇದ್ದಾರೆ.

ಬೆಳಗ್ಗೆ 5 ರಿಂದ 7 ಗಂಟೆ ವರೆಗೆ , ರಾತ್ರಿ 7 ರಿಂದ 11 ಗಂಟೆ ವರೆಗೆ ಇವರು ಕಲಿಕೆ ನಡೆಸುತ್ತಾರೆ. ತಮ್ಮ ಕಲಿಕೆ ಅತ್ಯಧಿ ಕ ಪ್ರೋತ್ಸಾಹ ನೀಡುತ್ತಿರುವ ತಮ್ಮ ತಾಯಿ, ಕೇಂದ್ರ ವಿವಿಯ ಸಹಾಯಕ ಪ್ರಾಚಾರ್ಯ ಟೋನಿ ಗ್ರೇಸ್‌ ಮತ್ತು ಶಾಲಾ ಪ್ರಾಂಶುಪಾಲ ನಾರಾಯಣನ್‌ ಅವರನ್ನು ಆಶ್ರಯ್‌ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಒಬ್ಬ ಉತ್ತಮ ಡಾಕ್ಟರ್‌ ಆಗಬೇಕು ಎಂಬುದು ಆಶ್ರಯ್‌ ಅವರ ಬದುಕಿನ ಕನಸಾಗಿದೆ. ನೀಟ್‌ ಪರೀಕ್ಷೆಯ ಫಲಿತಾಂಶ ತಮ್ಮ ಆಗ್ರಹಕ್ಕೆ ಪೂರಕವಾಗಲಿದೆ ಎಂದವರು ನಿರೀಕ್ಷಿಸಿದ್ದಾರೆ.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.