ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಪೂರೈಕೆ: ವರಂಗ ಪಂಚಾಯತ್ ಮಾದರಿ ಕಾರ್ಯ
ಮುನಿಯಾಲುವಿನ ಪಂಚಾಯತ್ ಕಚೇರಿ ಬಳಿ ನೀರಿನ ತೊಟ್ಟಿ ನಿರ್ಮಾಣ
Team Udayavani, May 11, 2019, 6:10 AM IST
ಅಜೆಕಾರು: ಬಿಸಿಲಿನ ಬೇಗೆಗೆ ನೀರಿನ ಮೂಲಗಳು ಬತ್ತಿಹೋಗಿ ಪ್ರಾಣಿ ಪಕ್ಷಿಗಳಿಗೆ ನೀರೇ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯ ಗಂಭೀರತೆ ಮನಗಂಡ ವರಂಗ ಪಂಚಾಯತ್ ವಿಶಾಲವಾದ ನೀರಿನ ತೊಟ್ಟಿಯೊಂದನ್ನು (ಟ್ಯಾಂಕ್) ನಿರ್ಮಾಣ ಮಾಡಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಮಾನವೀಯ ಕಾರ್ಯ ಮಾಡಿದೆ.
ಮುನಿಯಾಲು ಪೇಟೆ ಹಾಗೂ ಸುತ್ತಮುತ್ತ ಲಿನ ನೂರಾರು ಜಾನುವಾರುಗಳು ಪ್ರತಿನಿತ್ಯ ಆಹಾರವನ್ನು ಅರಸುತ್ತ ಬರುತ್ತಿದ್ದು, ಇವು ಗಳಿಗೆ ಬೇಸಗೆಯ ಸಮಯದಲ್ಲಿ ದಾಹ ತೀರಿಸಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ಗಮನಿಸಿದ ಪಂಚಾಯತ್ ಆಡಳಿತ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದೊಂದಿಗೆ ನೀರಿನ ತೊಟ್ಟಿ ನಿರ್ಮಿಸಿ ಇದಕ್ಕೆ ಪ್ರತೀ ದಿನ ನೀರು ತುಂಬಿಸುತ್ತಿದೆ. ಪರಿಸರದ ದನಗಳು, ಇತರೆ ಸಾಕು ಪ್ರಾಣಿಗಳು ಹಾಗೂ ಸುತ್ತಲಿನ ಪಕ್ಷಿಗಳು, ಕಾಡು ಪ್ರಾಣಿಗಳು ಈ ತೊಟ್ಟಿಯಿಂದ ಈಗಾಗಲೇ ನೀರನ್ನು ಕುಡಿಯಲು ಪ್ರಾರಂಭಿಸಿವೆ.
ಪಂಚಾಯತ್‌ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾಗರಿಕರು ಇದೊಂದು ಮಾದರಿ ಕಾರ್ಯ ಎಂದಿದ್ದಾರೆ.
ಪ್ರಾಣಿ ಪಕ್ಷಿಗಳಿಗೂ ನೀರು ಬೇಕು
ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ತೊಟ್ಟಿಯನ್ನು ರಚನೆ ಮಾಡಲಾಗಿದ್ದು ಇದೀಗ ಪ್ರತೀನಿತ್ಯ ನೂರಾರು ದನಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಈ ತೊಟ್ಟಿಯ ನೀರನ್ನು ಕುಡಿಯುತ್ತಿವೆ.
-ಸದಾಶಿವ ಸೇರ್ವೆಗಾರ್, ಪಿಡಿಒ ಗ್ರಾ.ಪಂ. ವರಂಗ
ಬೇಸಗೆಯಲ್ಲಿ ಸಹಕಾರಿ
ಬೇಸಗೆಯಲ್ಲಿ ನೀರಿನ ಮೂಲ ಇಲ್ಲದೆ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಬರುವ ಪರಿಸ್ಥಿತಿಯನ್ನು ಗಮನಿಸಿದ ಪಂಚಾಯತ್ ಆಡಳಿತ ಈ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಿ ಪ್ರತೀನಿತ್ಯ ನೀರು ತುಂಬಿಸುವ ಕಾರ್ಯ ಮಾಡುತ್ತಿದೆ. ಇದು ಪರಿಸರದ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಸಹಕಾರಿ.
-ಸುರೇಂದ್ರ ಶೆಟ್ಟಿ,
ಅಧ್ಯಕ್ಷರು ಗಾ.ಪಂ. ವರಂಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.