ಬಾಳುಗೋಡು: ಗಾಯಾಳು ಕಾಡಾನೆಗೆ ಚಿಕಿತ್ಸೆ

3 ದಿನಗಳ ಹಿಂದೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಗಜರಾಜ

Team Udayavani, May 11, 2019, 8:41 AM IST

24

ಗಾಯಗೊಂಡ ಆನೆಗೆ ವನ್ಯಜೀವಿ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಅರಣ್ಯ ವಿಭಾಗದ ಬಾಳುಗೋಡು ಮೀಸಲು ಅರಣ್ಯದಲ್ಲಿ ಬುಧವಾರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆಗೆ ಮೂರನೇ ದಿನ ಶುಕ್ರವಾರ ಚಿಕಿತ್ಸೆ ನೀಡಲಾಗಿದೆ. ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಅಭಯಾರಣ್ಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್‌ ನೇತೃತ್ವದಲ್ಲಿ ಸ್ಥಳಿಯ ಪಶುವೈದ್ಯರ ಸಹಕಾರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸಮತಟ್ಟು ಜಾಗಕ್ಕೆ ತರಲು ಸಾಹಸ
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಸುತ್ತಾಡುತ್ತಿದ್ದ ಆನೆ ಯನ್ನು ಸಮತಟ್ಟಾದ ಸ್ಥಳಕ್ಕೆ ತರುವಲ್ಲಿ ಅರಣ್ಯಾಧಿಕಾರಿಗಳ ಪ್ರಯತ್ನ ಶುಕ್ರವಾರ ಫಲ ನೀಡಿತು. ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟ್ರಿನ್‌ ಪಿ. ಸೋನ್ಸ್‌ ಮಾರ್ಗದರ್ಶನದಲ್ಲಿ ಸುಬ್ರ ಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್‌ ಮತ್ತು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್‌ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಿಬಂದಿ ಹಾಗೂ ಊರವರ ಸಹಕಾರದಿಂದ ಆನೆಯನ್ನು ಪೊದೆಯ ಭಾಗದಿಂದ ಸಮತಟ್ಟಾದ ಸ್ಥಳಕ್ಕೆ ತರಲಾಯಿತು.

ಗಣಪತಿ ದೇವರಿಗೆ ಪೂಜೆ
ಗಾಯಗೊಂಡ ಆನೆಗೆ ಚಿಕಿತ್ಸೆ ಕಾರ್ಯಚರಣೆ ಯಶಸ್ವಿಯಾಗಿದೆ. ದಟ್ಟ ಕಾಡು ಪ್ರದೇಶದಲ್ಲಿ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ತಂದು ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ತುಸು ಎಚ್ಚರ ತಪ್ಪಿದರೂ ಆನೆಯ ದೇಹಕ್ಕೆ ಗಾಯವಾಗುವ ಸಾಧ್ಯತೆಗಳಿತ್ತು. ಕಾರ್ಯಾಚರಣೆಗೂ ಮೊದಲು ಸುಬ್ರಹ್ಮಣ್ಯ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ್ದೆವು. ದೇವರ ಆಶೀರ್ವಾದ, ವೈದ್ಯರ ಚಿಕಿತ್ಸಾ ವಿಧಾನ, ಸಿಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಚಿಕಿತ್ಸೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಒಂದು ವಾರ ಕಾಲ ಆನೆಯ ಆರೋಗ್ಯ ಸ್ಥಿತಿ ಹಾಗೂ ಚಲನವಲನಗಳ ಮೇಲೆ ಸಿಬಂದಿ ನಿಗಾ ಇರಿಸುತ್ತಾರೆ ಎಂದು ಕಾರ್ಯಾಚರಣೆ ಬಳಿಕ ಎಸಿಎಫ್ ಆಸ್ಟ್ರಿನ್‌ ಪಿ. ಸೋನ್ಸ್‌ ಪ್ರತಿಕ್ರಿಯಿಸಿದರು.

ಆನೆಗಳ ಕಾದಾಟದಲ್ಲಿ ಗಾಯ
ಆನೆ ಮುಂಗಾಲಿಗೆ ಆಳವಾದ ಗಾಯವಾಗಿದ್ದು, ಅದರಲ್ಲಿ ಕೀವು ಉಂಟಾಗಿದೆ. ಆನೆಗಳು ಪರಸ್ಪರ ಜಗಳವಾಡುವ ಸಂದರ್ಭದಲ್ಲಿ ಎದುರಾಳಿ ಆನೆಯು ದಂತದ ತಿವಿತದಿಂದ ಗಾಯಗೊಂಡಿರುವ ಸಾಧ್ಯತೆ ಕಂಡುಬರುತ್ತಿದೆ. ಆನೆಯ ಗಾಯ ಒಣಗಲು ಮತ್ತು ನೋವು ಕಡಿಮೆಯಾಗಲು ಚುಚ್ಚುಮದ್ದು ಹಾಗೂ ಔಷಧ ನೀಡಿದ್ದೇವೆ. ವಾಸಿಯಾಗಲು ಮೂರರಿಂದ 4 ದಿನಗಳ ಕಾಲಾವಕಾಶ ಬೇಕು. ಬಳಿಕ ಪ್ರಕೃತಿ ಸಹಜವಾಗಿ ಅವುಗಳ ನೋವು ಮಾಸುತ್ತವೆ ಎಂದು ವೈದ್ಯರು ತಿಳಿಸಿದರು.

ಗುತ್ತಿಗಾರು ಪಶು ವೈದ್ಯಾಧಿಕಾರಿ ವೆಂಕಟಾಚಲಪತಿ ಸಹಕರಿಸಿದರು. ಫಾರೆಸ್ಟರ್‌ ಸಂತೋಷ್‌, ಸುಬ್ರಹ್ಮಣ್ಯ ಹಾಗೂ ಪಂಜ ವಲಯದ 30ಕ್ಕೂ ಅಧಿಕ ಸಿಬಂದಿ ಎರಡು ದಿನಗಳಿಂದ ಸತತ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸ್ಥಳಿಯರು ಸಿಬಂದಿಗೆ ಊಟ, ವಸತಿ, ನೀರು ಇತ್ಯಾದಿ ಒದಗಿಸಿ ಸಹಕರಿಸಿದರು.

ಗಾಯಾಗೊಂಡ ಕಾಡಾನೆ ಚಿಕಿತ್ಸೆ ನೀಡುವುದನ್ನು ವೀಕ್ಷಿಸಲು ಸ್ಥಳೀಯರು ಬೆಳಗ್ಗೆಯಿಂದಲೇ ಕಾಡಿನ ಬದಿಯಲ್ಲಿ ಕಾದಿದ್ದರು. ಕೆಲವರು ಮರಗಳನ್ನೇರಿ ವೀಕ್ಷಿಸಿದರು. ಚಿಕಿತ್ಸೆ ವೇಳೆ ಆನೆ ಪಕ್ಕ ನಿಂತು ಸೆಲ್ಫಿ ಕ್ಲಿಕ್ಕಿಸಲೂ ಕೆಲವರು ಮುಂದಾದರು.

ಹೀಗೆ ನಡೆಯಿತು ಚಿಕಿತ್ಸೆ…
ಅಪರಾಹ್ನ 2 ಗಂಟೆಗೆ ಹೊತ್ತಿಗೆ ಆನೆಗೆ ವನ್ಯಜೀವಿ ವಿಭಾಗದ ವೈದ್ಯ ಮುಜೀಬ್‌ ಮತ್ತವರ ತಂಡ ಚಿಕಿತ್ಸೆ ಕಾರ್ಯಾಚರಣೆ ಆರಂಭಿಸಿತು. ಆರಂಭದಲ್ಲಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಅದು ಕೆಲಸ ಮಾಡದೇ ಇದ್ದಾಗಿ ತುಸು ಹೊತ್ತಿನಲ್ಲಿ ಹೆಚ್ಚುವರಿ ಡೋಸ್‌ನ ಅರಿವಳಿಕೆ ನೀಡಲಾಯಿತು. ಈ ವೇಳೆ ಆನೆಯು ನಿಧಾನವಾಗಿ ನಡೆದಾಡುತ್ತ ನೀರಿನ ಝರಿಯ ಒಂದು ಭಾಗಕ್ಕೆ ಬಂದು ಸಮತಟ್ಟಾದ ಸ್ಥಳದಲ್ಲಿ ಮರವೊಂದಕ್ಕೆ ಒರಗಿ ನಿಂತಿತು. ಬಳಿಕ ವೈದ್ಯರು ಮುಂಗಾಲಿನ ಮೇಲ್ಭಾಗದಲ್ಲಿ ಆಗಿರುವ ಆಳವಾದ ಗಾಯವನ್ನು ಔಷಧ ಬಳಸಿ ಸ್ವಚ್ಛಗೊಳಿಸಿದರು. ಗಾಯದ ಒಳಭಾಗವನ್ನು ಪೂರ್ಣವಾಗಿ ಶುಚಿಗೊಳಿಸಿ, ಗಾಯದೊಳಗೆ ಮದ್ದು ಇರಿಸಿ, ಚುಚ್ಚುಮದ್ದು ನೀಡಲಾಯಿತು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಆನೆ ಪ್ರಜ್ಞೆ ಪಡೆದುಕೊಂಡು ಚಲನವಲನ ಆರಂಭಿಸಿತು.

ಟಾಪ್ ನ್ಯೂಸ್

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.