ಸ್ಮಶಾನ ಸ್ವಚ್ಛತೆ: ಪೌರಾಯುಕ್ತ ಕ್ರಮಕ್ಕೆ ಶ್ಲಾಘನೆ
Team Udayavani, May 11, 2019, 10:11 AM IST
ಅರಸೀಕೆರೆ: ನಗರದ ಹುಳಿಯಾರು ರಸ್ತೆಯ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಇದ್ದ ಸಮಸ್ಯೆಗಳನ್ನು ನಗರಸಭೆ ಪೌರಾಯುಕ್ತ ಚಲಪತಿ ಪರಿಹರಿಸಿದ್ದಾರೆ.
ಸಾರ್ವಜನಿಕರ ಹಿಂದೂ ರುದ್ರ ಭೂಮಿಯ ಉದ್ದಗಲಕ್ಕೂ ಅನೇಕ ವರ್ಷಗಳಿಂದ ಗಿಡಗಂಟಿಗಳು ಬೆಳೆದು ನಿಂತಿದ್ದವು. ಇದರಿಂದಾಗಿ ಶವ ಸಂಸ್ಕಾರ ಮಾಡಲು ಬರುವ ಸಂಬಂಧಿಕರಿಗೆ ತೀವ್ರ ತೊಂದರೆಯಾಗಿತ್ತು. ಅಲ್ಲದೇ, ನೀರು ಹಾಗೂ ವಿದ್ಯುತ್ ಸಮಸ್ಯೆಯಿತ್ತು. ಇಂತಹ ಮೂಲಭೂತ ಸೌಲಭ್ಯಗಳನ್ನು ನಗರಸಭೆ ಆಡಳಿತ ಕಲ್ಪಿಸಬೇಕು ಎಂದು ವಿವಿಧ ಜನಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ತೆರವು:ಹೀಗಾಗಿ ರುದ್ರಭೂಮಿ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆಯನ್ನು ಮಾತ್ರ ನಿರ್ಮಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನಗರಸಭೆ ಪೌರಾಯುಕ್ತರ ಚಲಪತಿ ಅವರ ಗಮ ನಕ್ಕೆ ತಂದ ಕಾರಣ ಆರೋಗ್ಯ ನಿರೀ ಕ್ಷಕರು ಮತ್ತು ಪೌರ ಕಾರ್ಮಿಕರೊಂದಿಗೆ ಸ್ಮಶಾನದ ಆವರ ಣದಲ್ಲಿದ್ದ ಗಿಡಗಂಟಿ ಹಾಗೂ ತ್ಯಾಜ್ಯ ವಸ್ತು ತೆರವು ಮಾಡಿಸಿದರು.
ನಗರಸಭೆ ಪೌರಾಯುಕ್ತ ಛಲಪತಿ ಮಾತನಾಡಿ, ನಗರದ ಸ್ವಚ್ಛತೆಗೆ ನೀಡುವ ಆದ್ಯತೆಯನ್ನು ಸಾರ್ವಜನಿಕ ರುದ್ರ ಭೂಮಿಗೂ ನೀಡುವುದು ನಗರಸಭೆಯ ಕರ್ತವ್ಯ. ಈ ನಿಟ್ಟಿನಲ್ಲಿ ನಗರಸಭೆ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದೆ. ಮೊದಲ ಹಂತದಲ್ಲಿ ಸ್ಮಶಾನದ ಸುತ್ತ ಕಾಂಪೌಂಡ್ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಡ ಲಾಗಿದೆ ಎಂದರು.
ಶವ ಸಂಸ್ಕಾರ ಮಾಡಲು ಬರುವ ಮೃತರ ಸಂಬಂಧಿಕರಿಗೆ ಸ್ಮಶಾನದ ಆವರಣದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುವ ಜೊತೆಗೆ ಸ್ಮಶಾನದಲ್ಲಿ ಬೆಳೆದು ನಿಂತಿದ್ದ ಗಿಡ ಬಳ್ಳಿಗಳನ್ನು ತೆರವುಗೊಳಿಸಿ ಮತ್ತೆ ಈ ರೀತಿ ಬೆಳೆಯದಂತೆ ನೋಡಿ ಕೊಳ್ಳುವ ಜವಾಬ್ದಾರಿಯನ್ನು ನಗರ ಸಭೆಯ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡುವುದಾಗಿ ಹೇಳಿದರು.
ಮನವಿ: ಸ್ಮಶಾನದ ಆವರಣದಲ್ಲಿ ವಾಚ್ಮೆನ್ ಶೆಡ್ ನಿರ್ಮಿಸಿ ನಮ್ಮ ಪೌರಕಾರ್ಮಿಕರೊಬ್ಬರನ್ನು ನಿಯೋಜಿ ಸುವ ಮೂಲಕ ಶವ ಸಂಸ್ಕಾರ ಮಾಡಲು ಬರುವವರಿಗೆ ಸಹಕಾರ ನೀಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳುವುದು , ಸ್ಮಶಾನದ ಮುಖ್ಯ ದ್ವಾರದಲ್ಲಿ ನಾಮ ಫಲಕ, ವಿದ್ಯುತ್ ದೀಪ ಅಳವಡಿಕೆಗೆ ಅನುದಾನದ ಅವಶ್ಯಕತೆ ಇದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಮಶಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ರಾಘ ವೇಂದ್ರ, ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿನ ಸಮಸ್ಯೆ ಬಗ್ಗೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ನಗರ ಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯ ಲಾಗಿತ್ತು. ಈ ನಿಟ್ಟಿನಲ್ಲಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಆಗಮಿಸಿರುವ ಚಲಪತಿ ಅವರು ಸ್ಮಶಾನದ ಅಭಿವೃದ್ಧಿಗೆ ಕ್ರಮಕೈಗೊಂಡಿರು ವುದಕ್ಕೆ ನಗರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.