ಧರ್ಮವನ್ನು ರಕ್ಷಿಸಬೇಕಾದ ಅನಿವಾರ್ಯತೆಯಿದೆ
Team Udayavani, May 11, 2019, 10:17 AM IST
ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಲ್ಲೇಶ್ವರಸ್ವಾಮಿ ಪ್ರತಿಷ್ಠಾಪನೆ ಹಾಗೂ ದೇಗುಲದ ಲೋಕಾರ್ಪಣಾ ಕಾರ್ಯಕ್ರಮವನ್ನು ಶ್ರೀಮಲ್ಲೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.
ಕಳಸ ಸ್ಥಾಪನೆ: ಶ್ರೀವಿರುಪಾಕ್ಷ ಲಿಂಗ ಶಿವಚಾರ್ಯ ಸ್ವಾಮೀಜಿ, ಶ್ರೀಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ, ಶ್ರೀಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಗೆ ಕಳಸ ಪೂಜಾ ಕಾರ್ಯ ನೆರವೇರಿತು. ಪವಿತ್ರ ಗಂಗೆಯನ್ನೂ 108 ಕುಂಭ ಕಳಸ ಹಾಗೂ ದೇಗುಲದ ಗೋಪುರ ಕಳಸದೊಂದಿಗೆ ಪೂಜಿಸ ಲಾಯಿತು. ಈ ಮುನ್ನ ಜಾನಪದ ಕಲಾ ತಂಡಗ ಳೊಂದಿಗೆ ಮೆರವಣಿಗೆ ನಡೆಸಿದ ಬಳಿಕ, ಶ್ರೀಶಿವಾ ಚಾರ್ಯ ಮಹಾ ಸ್ವಾಮೀಜಿ ಗಳಿಂದ ಆಕಾಶ ಗೋಪುರ ಕಳಸ ಸ್ಥಾಪನೆ ನೆರವೇರಿಸಲಾಯಿತು.
ಭಗವಂತನ ಅನುಗ್ರಹ ಪಡೆಯಿರಿ: ಶ್ರೀಮಲ್ಲೇಶ್ವರ ಸ್ವಾಮಿ ದೇಗುಲದ ಲೋಕಾರ್ಪಣೆ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಹುಲಿ ಕೆರೆ ದೊಡ್ಡಮಠದ ಶ್ರೀ ವಿರುಪಾಕ್ಷ ಮಹಾ ಸ್ವಾಮೀ ಜಿ, ಭಕ್ತಿ ಎಂದರೆ ಮನಸ್ಸು. ಮನಸ್ಸಿಟ್ಟು ಭಗವಂತ ನನ್ನು ಭಕ್ತಿಯಿಂದ ಆರಾಧಿಸಿದರೆ ದೇವರ ಅನುಗ್ರಹ ಪಡೆದುಕೊಳ್ಳಲು ಸಾಧ್ಯ. ಧರ್ಮ ಅತೀ ಸೂಕ್ಷ್ಮ ವಿಚಾರವಾಗಿದ್ದು ಪ್ರತಿಯೊಬ್ಬರೂ ರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಗುರು-ಹಿರಿಯರು, ಮಾತಾ-ಪಿತೃ, ಅತಿಥಿ ಮಹಾಶಯರನ್ನು ಗೌರವಿಸಿ ದರೆ ಮಾತ್ರ ದೇವರಿಗೆ ತೋರುವ ಭಕ್ತಿಯೂ ಮೌಲ್ಯಯುತವಾಗಿರುತ್ತದೆ ಎಂದರು.
2020ರಿಂದ ಬೇಲೂರಿನಲ್ಲಿ ದಸರಾ: ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಕಣಗುಪ್ಪೆ ಎಂಬ ಪುಟ್ಟ ಗ್ರಾಮದಲ್ಲಿ ಭವ್ಯವಾದ ದೇಗುಲ ನಿರ್ಮಿಸಿ ರುವುದು ಸಂತೋಷದ ಸಂಗತಿ. ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರು ಅವರ ಆಶಯದಂತೆ 2020ರಿಂದ ಬೇಲೂರಿನಲ್ಲಿ ದಸರಾ ಮಹೋತ್ಸವವನ್ನು ಆಚರಿಸಲು ರೂಪು ರೇಷೆ ಸಿದ್ಧಪಡಿಸಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆ ಉಳಿಸಿ: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ 4 ಪಬ್ಲಿಕ್ ಶಾಲೆ ತೆರೆಯಲಿದ್ದು, ಅದರಲ್ಲಿ ಒಂದನ್ನು ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಕಣಗುಪ್ಪೆಯ ಪುರಾತನ ಕಾಲದ ಉಸುಬಿನ ಕೆರೆ ಹೂಳು ತೆಗೆಯುವುದರ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಲು 5 ಲಕ್ಷ ರೂ., ಬಿಡುಗಡೆ ಮಾಡಲಾಗುವುದು. ಅಲ್ಲದೇ ಜಲ, ಮರ- ಉಳಿಸುವ ಮೂಲಕ ಪರಿಸರ ರಕ್ಷಿಸುವ ಹೊಣೆ ನಮ್ಮೆಲ್ಲರದ್ದೆಂದರು.
ಈ ವೇಳೆ ಶ್ರೀಮಲ್ಲೇಶ್ವರ ಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ವೀರಭದ್ರ ಶೆಟ್ಟಿ, ಕಾರ್ಯದರ್ಶಿ ಕೆ.ಜಿ.ಕುಮಾರ್, ಖಜಾಂಚಿ ದೇವರಾಜ್, ಗ್ರಾಪಂ ಅಧ್ಯಕ್ಷೆ ಮಂಜು ಳಾ, ಜಿಪಂ ಸದಸ್ಯೆ ರತ್ನಮ್ಮ, ಕಾಫಿ ಬೆಳೆಗಾರರಾದ ಡಬ್ಲ್ಯೂ ಆರ್.ಪಿಂಟೋ, ಜಯರಾಮ್‌ಶೆಟ್ಟಿ, ಶರತ್, ಗೋಪಾಲಶೆಟ್ಟಿ, ತಿಮ್ಮೆಗೌಡ, ನಟರಾಜ್, ಗಂಗಪ್ಪ ಶೆಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.