ಅಂತಾರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯ ಪ್ರಾರಂಭ
ಉತ್ತರ ಕರ್ನಾಟಕದಲ್ಲಿಯೇ ವಿನೂತನ ಹೈಟೆಕ್ ವಾಣಿಜ್ಯ ಮಹಾವಿದ್ಯಾಲಯ
Team Udayavani, May 11, 2019, 10:57 AM IST
ಬನಹಟ್ಟಿ: ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಸಂಸ್ಥಾಪಕ ಚೇರಮನ್ ಪ್ರೊ. ಬಸವರಾಜ ಕೊಣ್ಣೂರ ಮಾತನಾಡಿದರು.
ಬನಹಟ್ಟಿ: ಉತ್ತರ ಕರ್ನಾಟಕದಲ್ಲಿಯೇ ಅತ್ಯುನ್ನತವಾದ ಅಂತಾರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯವನ್ನು ಹೊಸ ಮಾದರಿಯಲ್ಲಿ ಪ್ರಸಕ್ತ 2019-20ನೇ ಸಾಲಿನಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ಕೊಣ್ಣೂರ ಶಿಕ್ಷಣ ಸಮೂಹ ಸಂಸ್ಥೆ ಪ್ರಾರಂಭಿಸಲಿದೆ.
ಸಂಸ್ಥೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಚೇರಮನ್ ಪ್ರೊ. ಬಸವರಾಜ ಕೊಣ್ಣೂರ, ಹೊಸ ಮಾದರಿಯಲ್ಲಿ ಕೇಂದ್ರ ಹಾಗೂ ರಾಜ್ಯ ರಾಜಧಾನಿಗಳಲ್ಲಿ ದೊರಕುವಂಥ ಸೌಲಭ್ಯಗಳನ್ನು ಹೊತ್ತು ಸದ್ಯ ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಪ್ರಮುಖವಾಗಿ ಮೂಲ ಗಣಿತ ವಿಷಯಗಳ ಸಂಯೋಜನೆ ಹೊತ್ತು, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಪ್ರತಿ ಶನಿವಾರ ರವಿವಾರ ಸಿಎ ವಿಶೇಷ ತರಬೇತಿ ನೀಡಲಾಗುವುದು. ಟ್ಯಾಲಿ(ಇಆರ್‌ಪಿ), ಸಿಎ, ಫೌಂಡೇಶನ್ ಕೋರ್ಸ್ ಗಳನ್ನು ಒದಗಿಸಲಾಗುವದೆಂದು ತಿಳಿಸಿದರು. ಕಡ್ಡಾಯವಾಗಿ ವಾಣಿಜ್ಯ ವಿಭಾಗದ ಪಪೂ ಎರಡು ವರ್ಷಗಳಲ್ಲಿನ ಅವಧಿಯಲ್ಲಿ ಹೊರ ಜಗತ್ತಿನ ಶಿಕ್ಷಣ, ಶಿಸ್ತು ಹಾಗೂ ವಾಣಿಜ್ಯವಾಗಿ ಪ್ರಗತಿ ಹೊಂದಿದ ದೇಶಗಳ ವೀಕ್ಷಣೆಗಾಗಿ ಸಿಂಗಾಪುರ ಹಾಗೂ ದುಬೈ ಪ್ರವಾಸವನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಕನಸ್ಸುಗಳ ದೊಡ್ಡದಾಗಿವೆ. ಅವುಗಳಿಗೆ ಪುಷ್ಠಿ ನೀಡುವುದು ನಮ್ಮೆಲ್ಲರ ಕೆಲಸ. ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಭಾಷೆಯಾದ ಫ್ರೆಂಚ್, ಸ್ಪಾನಿಷ್ ಹಾಗೂ ಜರ್ಮನ್ ಭಾಷೆಗಳಲ್ಲಿ ಒಂದನ್ನು ಕಲಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಅನುಕೂಲವಾಗಲಿದೆ ಎಂದು ಕೊಣ್ಣೂರ ತಿಳಿಸಿದರು. ಒಟ್ಟಾರೆ ಅಮೂಲಾಗ್ರ ಬದಲಾವಣೆಯೊಂದಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣ ರಂಗದಿಂದ ವಂಚಿತರಾಗದಿರಲೆಂದು ವಿನೂತನ ಹಾಗೂ ಹೈಟೆಕ್ ಮಾದರಿಯ ವಾಣಿಜ್ಯ ಮಹಾವಿದ್ಯಾಲಯ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ ಎಂದರು. ಮೇ 12 ರವಿವಾರದಂದು ಬೆಳಗ್ಗೆ ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆಯನ್ನು ಕರೆಯಲಾಗಿದ್ದು, ಇಚ್ಛೇಯುಳ್ಳವರು 95918-62106 ಸಂಪರ್ಕಿಸಬಹುದಾಗಿದೆ ಎಂದು ಆಡಳಿತಾಧಿಕಾರಿ ಶೀತಲ್ ಕೊಣ್ಣೂರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.