ಜೆ ಬ್ರದರ್ಸ್ ಸರ್ಕಾರ ಪತನ ಪಟಾಕಿ
• ಮೂರನೇಯವರ ತಡೆಗೆ ತಂತ್ರ•ನೀರಾದರೆ ಅಂಬಲಿ, ಗಟ್ಟಿಯಾದರೆ ರೊಟ್ಟಿ ಜಾರಕಿಹೊಳಿ ಜಾಯಮಾನ
Team Udayavani, May 11, 2019, 12:03 PM IST
ಬೆಳಗಾವಿ: ಖಾಸಗಿ ಹೋಟೆಲ್ದಲ್ಲಿ ಯಮಕನಮರಡಿ ಕ್ಷೇತ್ರದ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ.
ಬೆಳಗಾವಿ: ಲೊಕಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಸರಕಾರ ಪತನಕ್ಕೆ ಕ್ಷಣ ಗಣನೆ ಆರಂಭವಾಗಲಿದೆ ಎಂದು ಜಾರಕಿಹೊಳಿ ಸಹೋದರರು ಬಹಿರಂಗವಾಗಿ ಹೇಳುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳ ಚಿತ್ತ ಮತ್ತೆ ಗಡಿನಾಡು ಬೆಳಗಾವಿಯ ಕಡೆ ತಿರುಗುವಂತೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಗುಪ್ತ ಸಭೆ ನಡೆಸಿದ್ದಲ್ಲದೆ ಮೈತ್ರಿ ಸರಕಾರದ ಉಳಿವಿನ ಬಗ್ಗೆ ಅನುಮಾನದ ಮಾತು ಆಡಿರುವುದು ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಳ್ಳುವಂತೆ ಮಾಡಿದ್ದಾರೆ.
ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರ ಆಯ್ಕೆ ಸಂಬಂಧ ನಗರದ ಖಾಸಗಿ ಹೋಟೆಲ್ದಲ್ಲಿ ಬಾಲಚಂದ್ರ ಜಾರಕಿಹೊಳಿ ನಿರ್ದೇಶಕರ ಸಭೆ ನಡೆಸುತ್ತಿರುವ ಸಂದರ್ಭದಲ್ಲೇ ರಮೇಶ ಜಾರಕಿಹೊಳಿ ಅಲ್ಲಿಗೆ ಆಗಮಿಸಿದ್ದು ನಾನಾ ರೀತಿಯ ರಾಜಕೀಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿತು. ಸಹೋದರ ಬಾಲಚಂದ್ರ ಜೊತೆ ಕೆಲಕಾಲ ಮಾತುಕತೆ ನಡೆಸಿದ ರಮೇಶ ಜಾರಕಿಹೊಳಿ ನಂತರ ಯಮಕನಮರಡಿ ಭಾಗದ ಬಿಜೆಪಿ ಹಿರಿಯ ನಾಯಕರ ಜೊತೆ ಸಹ ಗುಪ್ತ ಸಭೆ ನಡೆಸಿ ಮತ್ತಷ್ಟು ಕುತೂಹಲ ಉಂಟುಮಾಡಿದ್ದಾರೆ.
ರಮೇಶ ಅವರನ್ನು ಭೇಟಿ ಮಾಡಿಲ್ಲ ಎಂದು ಬಾಲಚಂದ್ರ ಹೇಳಿದರೂ ಒಂದೇ ಹೋಟೆಲ್ನಲ್ಲಿ ಇಬ್ಬರೂ ಏಕಕಾಲಕ್ಕೆ ಕಾಣಿಸಿಕೊಂಡಿದ್ದು, ಅವರ ಬೆಂಬಲಿಗರು ಪರಸ್ಪರ ಸಮಾಲೋಚನೆ ನಡೆಸಿದ್ದು, ಮುಂದಿನ ರಾಜಕೀಯ ಬೆಳವಣಿಗೆಯ ಸೂಚನೆ ನೀಡಿತು.
ಯಮಕನಮರಡಿ ಸಭೆ: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬಂದಾಗಿನಿಂದ ಪಕ್ಷದ ನಾಯಕರ ಜೊತೆ ಮುನಿಸಿಕೊಂಡು ಸಾಕಷ್ಟು ಅಂತರ ಕಾಯ್ದುಕೊಂಡಿರುವ ರಮೇಶ ಪಕ್ಷದ ಚಟುವಟಿಕೆಗಳಿಂದ ಸಹ ದೂರ ಉಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಶುಕ್ರವಾರ ಯಮಕನಮರಡಿಯ ಬಿಜೆಪಿ ಮುಖಂಡರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ.
ಯಮಕನಮರಡಿ ಭಾಗದ ಬಿಜೆಪಿ ಹಿರಿಯ ಮುಖಂಡರಾದ ಬಿ.ಬಿ. ಹಂಜಿ ಹಾಗೂ ಅವರ ಪುತ್ರ ರವಿ ಹಂಜಿ ಜೊತೆ ಸುಮಾರು ಆರ್ಧಗಂಟೆಗಳ ಕಾಲ ರಹಸ್ಯ ಸಭೆ ನಡೆಸಿದ ರಮೇಶ ಜಾರಕಿಹೊಳಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಹಾಗೂ ಜನರ ಅಭಿಪ್ರಾಯದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಈ ಸರಕಾರ ಬೀಳುವುದು ಖಚಿತ. ಆಗ ತಾವೂ ರಾಜೀನಾಮೆ ನೀಡಿ ನಂತರ ನಡೆಯುವ ಉಪ ಚುನಾವಣೆಯಲ್ಲಿ ಗೋಕಾಕದಿಂದ ಸ್ಪರ್ಧೆ ಮಾಡುತ್ತೇನೆ. ಮುಂದೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಯಮಕನಮರಡಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ತಮ್ಮ ಸ್ಪರ್ಧೆಯಿಂದ ಆಗುವ ಸಾಧಕ-ಬಾಧಕಗಳೇನು. ಜಾರಕಿಹೊಳಿ ಕುಟುಂಬದ ಬಗ್ಗೆ ಕ್ಷೇತ್ರದ ಜನರಲ್ಲಿ ಯಾವ ಅಭಿಪ್ರಾಯ ಇದೆ ಎಂಬುದರ ಬಗ್ಗೆ ರಮೇಶ ಮಾಹಿತಿ ಪಡೆದುಕೊಂಡಿದ್ದಾರೆ.
ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ. ಆಗ ಸತೀಶ ಜಾರಕಿಹೊಳಿ ನಮ್ಮ ವಿರುದ್ಧ ಸ್ಪರ್ಧೆ ಮಾಡಬಹುದು. ಇಲ್ಲವೇ ರಾಯಚೂರು ಭಾಗದಿಂದ ಸ್ಪರ್ಧೆ ಮಾಡಬಹುದು. ಆಗ ಇಲ್ಲಿ ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಿದ್ದ ಮಾರುತಿ ಅಷ್ಟಗಿ ಸತೀಶ ಅವರ ಬೆಂಬಲ ಪಡೆದು ಕಾಂಗ್ರೆಸ್‌ದಿಂದ ಸ್ಪರ್ದೆ ಮಾಡಿದರೆ ಅದರಿಂದ ಆಗುವ ಪರಿಣಾಮಗಳೇನು. ಕ್ಷೇತ್ರದಲ್ಲಿ ಜಾರಕಿಹೊಳಿ ವಿರುದ್ಧ ಇರುವ ಅಭಿಪ್ರಾಯ ನಮ್ಮ ಮೇಲೆ ಆಗಬಹುದೇ ಎಂಬುದರ ಬಗೆಗೆ ಸಹ ರಮೇಶ ಜಾರಕಿಹೊಳಿ ವಿಚಾರಿಸಿದ್ದಾರೆ.
ಇದಲ್ಲದೆ ತಾವು ಬಿಜೆಪಿ ಯಿಂದ ಸ್ಪರ್ಧೆ ಮಾಡಿದರೆ ಆಗ ಹುಕ್ಕೇರಿಯ ಕತ್ತಿ ಸಹೋದರರಿಂದ ವಿರೋಧ ವ್ಯಕ್ತವಾಗಬಹುದು. ಅವರು ಪಕ್ಷ ಬಿಟ್ಟು ನಮ್ಮ ವಿರುದ್ಧ ರಾಜಕೀಯ ಚಟುವಟಿಕೆ ಮಾಡಬಹುದು. ಇದರಿಂದ ತಮ್ಮ ಗೆಲುವಿಗೆ ಸಮಸ್ಯೆಯಾಗುವುದಿಲ್ಲವೇ ಎಂಬುದರ ಬಗ್ಗೆ ಸಹ ರಮೇಶ ಅವರು ಹಂಜಿ ಕುಟುಂಬದ ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದು ಅವರ ಆಪ್ತ ವಲಯದ ಹೇಳಿಕೆ.
ಆದರೆ ಜಾರಕಿಹೊಳಿ ಕುಟುಂಬದ ಅದರಲ್ಲೂ ರಮೇಶ ಜಾರಕಿಹೊಳಿ ಅವರನ್ನು ಬಹಳ ಹತ್ತಿರದಿಂದ ನೋಡಿರುವ ಗೋಕಾಕದ ನಾಯಕರು ಇದು ಈ ಕುಟುಂಬದ ಮತ್ತೂಂದು ನಾಟಕ. ಮೂರನೇಯವರ ಪ್ರವೇಶ ಎಲ್ಲಿಯೂ ಆಗಬಾರದು ಎಂಬ ಲೆಕ್ಕಾಚಾರದಿಂದ ಇದು ನಡೆದಿದೆ. ಹಿಟ್ಟು ನೀರಾದರೆ ಅಂಬಲಿ ಮಾಡಿಕೊಳ್ಳುವದು ಗಟ್ಟಿಯಾದರೆ ರೊಟ್ಟಿ ಮಾಡುವುದು ಜಾರಕಿಹೊಳಿ ಅವರ ಲೆಕ್ಕಾಚಾರ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
•ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.