ಅಘನಾಶಿನಿ ನದಿಗೆ ಅಡ್ಡಗಟ್ಟಿದ ಮಣ್ಣು ತೆರವಿಗೆ ಮನವಿ

Team Udayavani, May 11, 2019, 3:41 PM IST

uk-tdy-3..

ಕುಮಟಾ: ವಿವಿಧ ಮೀನುಗಾರ ಹಾಗೂ ಮೀನುಗಾರಿಕೆ ಸಂಘಟನೆಗಳು ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ರಿಗೆ ಮನವಿ ಸಲ್ಲಿಸಿದರು.

ಕುಮಟಾ: ತಾಲೂಕಿನ ಐಗಳಕುರ್ವೆ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಅಘನಾಶಿನಿ ನದಿಗೆ ಕೆಂಪುಮಣ್ಣು ತುಂಬಿ ತಡೆಕಟ್ಟಿರುವುದರಿಂದ ಮೀನುಗಾರಿಕೆಯಿಂದ ಜೀವನ ನಡೆಸುವವರಿಗೆ ಸಮಸ್ಯೆಯಾಗಿದೆ ಹಾಗೂ ನದಿಯ ಸಹಜ ಪ್ರಕೃತಿಗೆ ಅಪಾಯ ಎದುರಾಗಿದೆ ಎಂದು ತಾಲೂಕಿನ ವಿವಿಧ ಮೀನುಗಾರ ಸಂಘಟನೆಗಳು, ಬೋಟ್ ಹಾಗೂ ದೋಣಿ ಸಂಘಟನೆಗಳ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಅಘನಾಶಿನಿ ನದಿಯನ್ನೇ ನಂಬಿ ಬದುಕುವ 30 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಅಘನಾಶಿನಿ ಜೀವನದಿಯಾಗಿದ್ದು, ವಿಶಿಷ್ಟತೆ, ವಿಶೇಷತೆಗಳ ಆಗರವಾಗಿದೆ. ಇಂತಹ ನದಿಯನ್ನು ಅವೈಜ್ಞಾನಿಕ ಕಾಮಗಾರಿಯಿಂದ ಹಾಳುಗೆಡಹುವುದು ಹಾಗೂ ನದಿಯನ್ನೇ ನಂಬಿರುವ ಜನರ ಬದುಕಿಗೆ ಶಾಶ್ವತ ಬರೆ ಎಳೆಯುವುದು ಸರಿಯಲ್ಲ. ಅಘನಾಶಿನಿ ನದಿಯಲ್ಲಿ ಕೆಂಪುಮಣ್ಣು ಸುರಿದು ನೀರಿನ ಹರಿವಿಗೆ ಮಾತ್ರವಲ್ಲದೇ ದೋಣಿಗಳ ಸುಗಮ ಸಂಚಾರಕ್ಕೂ ಅಡ್ಡಿಪಡಿಸಿರುವುದು ತುರ್ತು ಸಮಸ್ಯೆ ಮಾತ್ರವಲ್ಲದೇ ಹಲವಾರು ದೂರಗಾಮಿ ಸಮಸ್ಯೆಗಳಿಗೂ ಕಾರಣವಾಗಲಿದೆ. ಈ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ, ಪ್ರತಿಭಟನೆಗಳನ್ನು ಮಾಡಿದ್ದರೂ ಸಮಸ್ಯೆ ಬಗೆಹರಿಸುವ ಭರವಸೆ ಮಾತ್ರ ಈಡೇರಿಲ್ಲ. ದೋಣಿಗಳನ್ನು ಕ್ರೇನ್‌ ಮೂಲಕ ದಾಟಿಸುವ ವಿಧಾನವೂ ಸುರಕ್ಷಿತ ಹಾಗೂ ಸಮರ್ಪಕ ಕ್ರಮವಲ್ಲ.

ಆದ್ದರಿಂದ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಲು ಮುಂದಾಗಲಿದ್ದೇವೆ. ಮೇ 14 ರೊಳಗೆ ಹೊಳೆಗೆ ಅಡ್ಡಗಟ್ಟಿದ ಮಣ್ಣು ತೆಗೆಯದೇ ಇದ್ದಲ್ಲಿ ಮೇ 15ರಂದು ಪಾತಿ ದೋಣಿಗಳ ಮೂಲಕ ಸೇತುವೆ ಕಾಮಗಾರಿಗಾಗಿ ಮಣ್ಣು ಸುರಿದ ಜಾಗಕ್ಕೆ ತೆರಳಿ ನಮಗೆ ಅವಶ್ಯಕ ಇರುವಷ್ಟು ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ನಮ್ಮ ಈ ಕಾರ್ಯವನ್ನು ತಡೆದರೆ ಅಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಈ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಜವಾಬ್ದಾರರು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಗಣೇಶ ಅಂಬಿಗ, ರಾಮಚಂದ್ರ ಅಂಬಿಗ, ಗೋಪಾಲ ಅಂಬಿಗ, ಸುಮಂತ್‌ ಅಂಬಿಗ, ನಾಡದೋಣಿ ಹಾಗೂ ಸದಾನಂದ ಹರಿಕಂತ್ರ, ಪರ್ಶಿನ್‌-ಟ್ರಾಲ್ ಇನ್ನಿತರ ಬೋಟ್ ಯೂನಿಯನ್‌ ಹಾಗೂ ಹರಿಕಂತ್ರ ಸಮಾಜ ಮತ್ತಿತರ ಸಂಘಟನೆಗಳಿಂದ ಗೋಪಾಲ ಹೊಸ್ಕಟ್ಟಾ, ಸುಧಾಕರ ತಾರಿ, ಸುರೇಶ ಹರಿಕಂತ್ರ ಹೊರಭಾಗ, ಉದಯ ಹರಿಕಂತ್ರ, ಜಗದೀಶ ಹರಿಕಂತ್ರ, ಉಸ್ಮಾನ್‌ ಸಾಬ್‌, ನಾಗಪ್ಪ ಹರಿಕಂತ್ರ, ವೀರಪ್ಪ ಹರಿಕಂತ್ರ ಇನ್ನಿತರರು ಮನವಿ ಸಲ್ಲಿಸುವ ನಿಯೋಗದಲ್ಲಿದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.