ಯುವ ಗಾಯಕರಿಗೆ ವೇದಿಕೆ ಕಲ್ಪಸಿದ ಓರೆಂಜ್ ಮೀಡಿಯಾ
Team Udayavani, May 11, 2019, 3:46 PM IST
ವಿದ್ಯಾನಗರ :ಜಿಲ್ಲೆಯ ಹಿರಿಯ ಕಿರಿಯ ಗಾಯಕ ಗಾಯಕಿಯರನ್ನು ಹೊರಪ್ರಪಂಚಕ್ಕೆ ಪರಿಚಯಿಸುವ ಉದ್ಧೇಶದೊಂದಿಗೆ ಗಡಿನಾಡು ಕಾಸರಗೋಡಿನ ಓರೆಂಜ್ ಮೀಡಿಯಾ ಅವಕಾಶದ ಹೆಬ್ಟಾಗಿಲನ್ನು ತೆರೆಯುವ ಪ್ರಯತ್ನ ಮಾಡಿದೆ.
ಆಸಕ್ತ ಗಾಯಕರಿಗೆ ವೇದಿಕೆ ಕಲ್ಪಿಸುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಸಲುವಾಗಿ ಕರೆಂದಕ್ಕಾಡು ವಿಕಾಸ ಭವನ ಸಭಾಂಗಣದಲ್ಲಿ ಆಯೋಜಿಸಲಾದ ಓರೆಂಜ್ ಮೀಡಿಯಾ ಸೊಲ್ಯೂಶನ್ಸ್ ಆಯೋಜಿಸಿದ ಮೆಗಾ ಮೀಡಿಯಾ ಎಂಟ್ರಿ ಓಡಿಶನ್‌ನಲ್ಲಿ ಜಿಲ್ಲೆಯ ಹಾಗೂ ಹೊರಜಿಲ್ಲೆಯ ಹಲವಾರುಗಾಯಕರು ಪಾಲ್ಗೊಂಡು ಮೊದಲನೇ ಸುತ್ತಿನ ಸ್ಪರ್ಧೆ ಯಶಸ್ವಿಯಾಗುವಂತೆ ಮಾಡಿದರು.
ಏಳರಿಂದ ಹನ್ನೆರಡು ವರ್ಷ, ಹನ್ನೆರಡರಿಂದ ಹದಿನೆಂಟು ವರ್ಷ ಹಾಗೂ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರು ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರಸ್ತುತ ಸ್ಪರ್ಧೆಯಲ್ಲಿ ಹೆಸರಾಂತ ಗಾಯಕರಾದ ಸಾರಮತಿ ಸ್ಕೂಲ್ ಓಫ್ ಮ್ಯೂಸಿಕ್‌ನ ಶಾಜಿ ಕುಮಾರ್, ಸಂಗೀತ ನಿರ್ದೇಶಕ ಹಾಗೂ ಗಾಯಕ ಹರಿಕುಮಾರ್, ಸಂಗೀತ ನಿರ್ದೇಶಕ ಹರಿಪ್ರಸಾದ್ ಹಾಗೂ ನಾದಬ್ರಹ್ಮ ಸಂಗೀತ ಶಾಲೆಯ ನಿರ್ದೇಶಕಿ ಸೌಮ್ಯ.ಕೆ.ಎಸ್ ತೀರ್ಪುಗಾರರಾಗಿ ಭಾಗವಹಿಸಿದರು.
ಜನಸೇವಾ ಹೆಲ್ತ್ ಸರ್ವಿಸಸ್ ಲಿಮಿಟೆಡ್ ಕಾಸರಗೋಡು ಇದರ ಸಹಸಂಸ್ಥೆಯಾದ ಬ್ಲೇಕ್ ಆಂಡ್ ವೈಟ್‌ನ ಚೇರ್ಮನ್ ಟಿ.ವಿ.ಗಂಗಾಧರನ್, ಓರೆಂಜ್ ಮೀಡಿಯಾದ ನಿರ್ದೇಶಕರಾದ ಪ್ರಶಾಂತ್ ಸಂಗೀತ ನಿರ್ದೇಶಕ ನಾಗಾರ್ಜುನ ಮಂಗಲ್ಪಾಡಿ, ಫರೋಝ್ ವೇವ್ಸ್ ರೆಕೋರ್ಡಿಂಗ್ ಸ್ಟುಡಿಯೋ, ಜಯ ಕುಮಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತ ಆಕಾಡೆಮಿಯ ಕಾರ್ಯದರ್ಶಿ ಆಖೀಲೇಶ್ ನಗುಮುಗಂ, ಉದಯಕುಮಾರ್ ಚೈಲ್ಡ್ ಲೈನ್ ಕಾಸರಗೋಡು ನೇತೃತ್ವ ವಹಿಸಿದರು.ಗಡಿನಾಡ ಕಮೆಂಟೇಟರ್ ಎಂಬ ಖ್ಯಾತಿಯ ದಿವಾಕರ್ ಉಪ್ಪಳ ಕಾರ್ಯಕ್ರಮ ನಿರ್ವಹಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.