ಅಣ್ಣಿಗೇರಿ ಕಾಲೇಜು ಅನನ್ಯ ಸಾಧನೆ
Team Udayavani, May 12, 2019, 3:06 AM IST
ಧಾರವಾಡ: ಶ್ರಮಕ್ಕೆ ಒಲಿದು ಬಂದಿದ್ದ ಸರ್ಕಾರಿ ನೌಕರಿ ಪಡೆಯಲು ಇವರ ಬಳಿ ಹಣ ಕೊಡಲಾಗಲಿಲ್ಲ. ಇತ್ತ ಕೆಲ ಕಾಲೇಜುಗಳಲ್ಲಿ ಉಪನ್ಯಾಸ ಮಾಡಲು ಸಹ ಅವಕಾಶ ಸಿಗದ ಕಠಿಣ ಪರಿಸ್ಥಿತಿ. ಆದರೆ, ಕಷ್ಟಕ್ಕೆ ಬೆನ್ನು ತೋರದೇ ಮೆಟ್ಟಿ ನಿಂತು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಸಂಸ್ಥೆಯ ಒಡೆಯರಾಗಿದ್ದಾರೆ!.
ವಿದ್ಯಾಕಾಶಿ ಆಗಿರುವ ಧಾರಾನಗರಿಯಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಹೆಸರುವಾಸಿ ಆಗಿರುವ ವೈ.ಬಿ.ಅಣ್ಣಿಗೇರಿ ಪದವಿ ಪೂರ್ವ ವಿಜ್ಞಾನ ಮತ್ತು ಮಹಾವಿದ್ಯಾಲಯವನ್ನು ಮುನ್ನಡೆಸುತ್ತಿರುವ ಅಣ್ಣಿಗೇರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರೊ|ನಾಗೇಶ ಅಣ್ಣಿಗೇರಿಯವರ ನಿಜ ಜೀವನದ ಕಥೆಯಿದು. ಅವಕಾಶ ಸಿಗದಿದ್ದಾಗ ತಾವೇ ಅವಕಾಶ ಸೃಷ್ಟಿಸಿಕೊಂಡು ಅಣ್ಣಿಗೇರಿ ಕ್ಲಾಸಸ್ ಆರಂಭಿಸಿ ಅದರಲ್ಲಿ ಯಶ ಕಂಡ ಪ್ರೊ.ನಾಗೇಶ ಈಗ ದೊಡ್ಡ ಮಹಾವಿದ್ಯಾಲಯ ಮುನ್ನಡೆಸುತ್ತಾ ಇದ್ದಾರೆ.
ಕಡಿಮೆ ಅವಧಿಯಲ್ಲಿಯೇ ಯಶಸ್ಸು: 2012-13 ರಲ್ಲಿ ಅಣ್ಣಿಗೇರಿ ಸೇವಾ ಟ್ರಸ್ಟ್ ಸ್ಥಾಪಿಸಿ ಅದರ ಅಡಿಯಲ್ಲಿ ವೈ.ಬಿ.ಅಣ್ಣಿಗೇರಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆರಂಭಿಸಲಾಗಿದೆ. ಬರೀ 150 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜಿನಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಾ ಇದ್ದಾರೆ.
ಪ್ರತಿ ವರ್ಷ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದು, ಉತ್ತಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕಾಲೇಜು ಇದಾಗಿದೆ. ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಇದ್ದು, ಸ್ಥಳೀಯ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ನೀಡಿದೆ.
ಸುಸಜ್ಜಿತ ಕಟ್ಟಡದಲ್ಲಿ ಕಾಲೇಜು: ಬಾಡಿಗೆ ಕಟ್ಟಡದಲ್ಲಿದ್ದ ಈ ಕಾಲೇಜು ಕಳೆದ ಆರು ತಿಂಗಳಿನಿಂದ ನೂತನ ಕಟ್ಟಡಕ್ಕೆ ಸ್ಥಳಾಂತರ ಆಗಿದ್ದು, ತಪೋವನ ಬಳಿ ಪ್ರಕೃತಿ ಮಡಿಲಲ್ಲಿ ಸುಸಜ್ಜಿತ ನೂತನ ಕಟ್ಟಡ ಹೊಂದಿದೆ. ಕಾಲೇಜು ವ್ಯವಸ್ಥಿತ ಬೋಧನಾ ಕೊಠಡಿಗಳು ಹಾಗೂ ಸುಸಜ್ಜಿತ ಗ್ರಂಥಾಲಯ ಹೊಂದಿದೆ. ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿವಿಧ ವಿಷಯಗಳ ಪರಾಮರ್ಶನ ಗ್ರಂಥಗಳ ಸಂಗ್ರಹ ಇಲ್ಲಿದೆ.
ದಿನಪತ್ರಿಕೆ, ನಿಯತಕಾಲಿಕೆಗಳು ಹಾಗೂ ಎನ್ಸೈಕ್ಲೋಪೀಡಿಯಾ ಗ್ರಂಥಗಳನ್ನು ಒಳಗೊಂಡಿದೆ. ವಿಶಾಲ ಪ್ರಯೋಗಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಮೂರು ವಿದ್ಯಾರ್ಥಿ ನಿಲಯಗಳಿವೆ. ವಿದ್ಯಾರ್ಥಿಗಳಿಗೆ ಪ್ರತಿ ವಾರಕ್ಕೆ ಒಂದು ಕಿರು ಪರೀಕ್ಷೆ ನಡೆಸುತ್ತಾ ಬಂದಿದ್ದು, ಇದರಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ಯೋಗ ತರಬೇತಿ ಸಹ ಇದೆ. ಐಐಟಿ, ಜೆಇಇ, ನೀಟ್ ಹಾಗೂ ಕೆ-ಸಿಇಟಿ ತರಬೇತಿ ಕೂಡ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ.
ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಿದೆ. ಆದರೆ ಈ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಐಐಟಿ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಕರ್ನಾಟಕದ ಜನತೆ ಅದರ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಐಐಟಿ ಫೌಂಡೇಶನ್ ಪ್ರಾರಂಭಿಸಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜೆಇಇ, ಐಐಟಿ, ಎಐಪಿಎಂಟಿ ಕುರಿತು ವಿಶೇಷ ತರಗತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡಲಾಗುತ್ತಿದೆ.
ಜ್ಞಾನ ದೇಗುಲ: ಪ್ರೊ.ನಾಗೇಶ ಅವರ ಯಶಸ್ಸಿನ ಹಿಂದೆ ಪತ್ನಿ ರೇಖಾ ಅವರ ಪಾತ್ರ ಸಾಕಷ್ಟಿದೆ. ರೇಖಾ ಅವರು ಈ ಟ್ರಸ್ಟ್ನ ಕಾರ್ಯದರ್ಶಿಯೂ ಹೌದು. ಈ ದಂಪತಿಯ ಕನಸಿನ ಕೂಸಾದ ಈ ಮಹಾವಿದ್ಯಾಲಯ ಜ್ಞಾನ ನೀಡುವ ದೇಗುಲವಾಗಿ ನಿರ್ಮಾಣ ಆಗಿದೆ. ಪ್ರತಿ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನೇ ದಾಖಲಿಸಿಕೊಂಡು ಬಂದಿರುವ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಪ್ರತಿಭಾವಂತ ಬಡ ಮಕ್ಕಳ ಏಳ್ಗೆಗೂ ಶ್ರಮಿಸುತ್ತಿದೆ. ಪ್ರತಿ ವರ್ಷ ಐವರು ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪಿಯುಸಿ ಮುಗಿದ ಬಳಿಕ ಅವರ ಉನ್ನತ ವ್ಯಾಸಂಗಕ್ಕೂ ಆರ್ಥಿಕ ನೆರವು ನೀಡುತ್ತಿದೆ.
ಶಿಕ್ಷಣ ವ್ಯಾಪಾರೀಕರಣ ಆಗದೆ ಜ್ಞಾನ ನೀಡುವ ಸಾಧನ ಆಗಬೇಕು. ಅಂಕಗಳಿಗೆ ಆದ್ಯತೆ ನೀಡುವ ಬದಲಾಗಿ ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ದೊರೆತಾಗಲೇ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸಾಧ್ಯ. ಹೀಗಾಗಿ ನಮ್ಮ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ.
-ಪ್ರೊ. ನಾಗೇಶ ಅಣ್ಣಿಗೇರಿ, ಅಧ್ಯಕ್ಷರು, ಅಣ್ಣಿಗೇರಿ ಸೇವಾ ಟ್ರಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.