ಹಸಿರು ಶಿಷ್ಟಾಚಾರ ಪಾಲಿಸಿ, ಪರಿಸರ ಸಂರಕ್ಷಿಸಿ

ಸರ್ಕಾರಿ ಕಾರ್ಯಕ್ರಮ ಸಾರ್ವಜನಿಕರಿಗೆ ಮೇಲ್ಪಂಕ್ತಿಯಾಗಲಿ: ಡೀಸಿ

Team Udayavani, May 12, 2019, 9:41 AM IST

HASAN-TDY-2..

ಹಾಸನದ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಚಿಕ್ಕಟ್ಟೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಅಡ್ಲಿಮನೆ ಬಡಾವಣೆಯಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಸಮಾವೇಶ ಉದ್ಘಾಟಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಾತನಾಡಿದರು.

ಹಾಸನ: ಸಾರ್ವಜನಿಕ ಸಮಾರಂಭಗಳಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಹಸಿರು ಶಿಷ್ಟಾಚಾರ ಪಾಲಿಸುವುದರಿಂದ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದಂತಾ ಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಅಭಿಪ್ರಾಯಪಟ್ಟರು.

ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಚಿಕ್ಕಟ್ಟೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಅಡ್ಲಿಮನೆ ಯಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾವು ದಿನನಿತ್ಯ ಬಳಸುವ ಪದಾರ್ಥಗಳು, ಒಂದು ಬಾರಿ ಮಾತ್ರ ಬಳಸಿ ಬಿಸಾಡುವಂತಿರ ಬಾರದು. ಹೆಚ್ಚು ಹೆಚ್ಚು ಕಸವನ್ನು ಉತ್ಪತ್ತಿ ಮಾಡುವಂತಿರಬಾರದು. ಪ್ಲಾಸ್ಟಿಕ್‌ ಮಾತ್ರ ವಲ್ಲದೇ ಒಂದೇ ಬಾರಿ ಬಳಸುವ ಪೇಪರ್‌ ಪ್ಲೇಟ್, ಲೋಟಗಳನ್ನು ಕೂಡ ಉಪಯೋಗಿಸ ಬಾರದು. ಇಂತಹ ಹಸಿರು ಶಿಷ್ಟಾಚಾರವನ್ನು ಕೇರಳದ ಕೆಲವು ವಿಭಾಗಗಳಲ್ಲಿ ಪಾಲಿಸಲಾಗು ತ್ತದೆ. ಯಾವ ಪದಾರ್ಥಗಳನ್ನು ಬಳಸಬೇಕು ಹಾಗೂ ಬಳಸಬಾರದು ಎಂಬ ಒಂದು ಪಟ್ಟಿ ಯನ್ನೇ ಸಿದ್ಧಗೊಳಿಸಿ, ಸಂಘ ಸಂಸ್ಥೆಗಳಿಗೆ ನೀಡ ಲಾಗುತ್ತದೆ. ಹಸಿರು ಶಿಷ್ಟಾಚಾರ ಪಾಲಿಸುವ ಸಂಸ್ಥೆಗಳಿಗೆ ಸರ್ಟಿಫೆಕೇಟ್ ಕೊಡುವ ವ್ಯವಸ್ಥೆ ಇದೆ. ಅತ್ಯುತ್ತಮ ಸಂಸ್ಥೆಗಳಿಗೆ ಬಹುಮಾನ ಕೂಡ ನೀಡಲಾಗುತ್ತಿದೆ ಎಂದರು.

ಅತಿಥಿಗಳಿಗೆ ಹೂವು ನೀಡಿ: ಸರ್ಕಾರಿ ಕಚೇರಿ ಗಳು ಹಸಿರು ಶಿಷ್ಟಾಚಾರ ಪಾಲಿಸಿ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕೆಂದ ಅವರು, ಸಾರ್ವ ಜನಿಕ ಸಮಾರಂಭಗಳನ್ನು ಸರಳವಾಗಿ ನಡೆಸ ಬೇಕು, ಅತಿಥಿಗಳಿಗೆ ಹೂ ಗುಚ್ಛಗಳು, ದೊಡ್ಡ ದೊಡ್ಡ ಹಾರಗಳ ಬದಲು ಒಂದು ಹೂವು, ನೀಡಿದರೆ ಸಾಕೆಂದು ಅವರು ಹೇಳಿದರು.

ಸಮುದಾಯದ ಸಹಕಾರ ಅಗತ್ಯ: ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪ ವಿಭಾಗಾಧಿಕಾರಿ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಗೌರವಾ ಧ್ಯಕ್ಷ ಎಚ್.ಎಲ್. ನಾಗರಾಜ್‌ ಅವರು, ಜನ ಸಮುದಾಯ ಪಾಲ್ಗೊಂಡಾಗ ಮಾತ್ರ ಸರ್ಕಾ ರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಹಸಿರುಭೂಮಿ ಪ್ರತಿಷ್ಠಾನ ನಡೆಸುತ್ತಿರುವ ಕೆರೆ, ಕಟ್ಟೆ, ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ಕೆ ಜನ ರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪ್ರತಿ ಷ್ಠಾನದ ಕಾರ್ಯ ಹಾಸನ ನಗರ ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯನ್ನು ವ್ಯಾಪಿಸಬೇಕು ಎಂದು ಹೇಳಿದರು.

ಮನುಷ್ಯರು ದೇವಸ್ಥಾನಕ್ಕೆ ಹೋಗದಿದ್ದರೂ ತಪ್ಪಲ್ಲ, ಆದರೆ ಕೆರೆ-ಕಟ್ಟೆಗಳ ಪುನಶ್ಛೇತನ ಕಾರ್ಯ ವನ್ನು ತಮ್ಮ ಆದ್ಯಕರ್ತವ್ಯವೆಂದು ಭಾವಿಸ ಬೇಕೆಂದು ನಾಗರಾಜ್‌ ಹೇಳಿದರು.

ಕಾರ್ಯಪಡೆ ರಚಿಸಿ: ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್‌.ಪಿ.ವೆಂಕಟೇಶಮೂರ್ತಿ ಮಾತ ನಾಡಿ, ಹಾಸನ ನಗರದ ಸುತ್ತಮುತ್ತ ಬಿಲ್ವರ್‌ಗಳು, ಲೇಔಟ್ ಮಾಡುವವರು ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಬಗೆಯುತ್ತಿರುವು ದರಿಂದ ಕೆರೆಗಳು ವಿರೂಪಗೊಳ್ಳುತ್ತಿವೆ ಹಾಗೂ ತ್ಯಾಜ್ಯಗಳಿಂದ ಕೆರೆಗಳು ಹಾಳಾಗುತ್ತಿವೆ. ಇದನ್ನು ತಡೆಯಲು ಪ್ರತಿ ಗ್ರಾಮಗಳಲ್ಲೂ ಶಾಸನ ಬದ್ಧವಾದ ಕೆರೆ ಸಂರಕ್ಷಣಾ ಸಮಿತಿಗಳ ರಚನೆ ಆಗಬೇಕು ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಗೆ ತಹಶೀಲ್ದಾರ್‌ ಹಾಗೂ ಪೊಲೀಸ್‌ ಸರ್ಕಲ್ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಗಳನ್ನೊಳ ಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸ ಬೇಕಾಗಿದೆ. ಸಾರ್ವಜನಿಕರಿಗೆ ಕೆರೆ ತಮ್ಮದು ಎಂಬ ಭಾವನೆ ಬರಬೇಕಾದರೆ ಕನಿಷ್ಠ ನೂರು ರೂಗಳನ್ನಾದರೂ ದೇಣಿಗೆಯಾಗಿ ನೀಡಬೇಕು. ಈ ಮೂಲಕ ಹೆಚ್ಚು ಕೆಲಸಕ್ಕೆ ಒಳಗೊಳ್ಳು ವಂತಾಗಬೇಕು ಎಂದರು.

ದೇಣಿಗೆ ಭರವಸೆ: ಉದ್ಯಮಿ ಸುಜಾತಾ ನಾರಾಯಣ ಅವರು, ಚಿಕ್ಕಟ್ಟೆ ಅಭಿವೃದ್ಧಿಗೆ 50 ಸಾವಿರ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಹಾಸನ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹಾಂತಪ್ಪ ಹಾಗೂ ಮುಂಜಾನೆ ಮಿತ್ರರ ಬಳಗ ಸ್ಥಳದಲ್ಲೇ ತಲಾ 5 ಸಾವಿರ ರೂ. ದೇಣಿಗೆ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿ ಪುರುಷೋತ್ತಮ, ಡಾ.ರಾಜ್‌ ಅಭಿಮಾನಿ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಪ್ರತಿಷ್ಠಾನದ ಉಪಾಧ್ಯಕ್ಷೆ ಡಾ. ಸಾವಿತ್ರಿ ಅವರು ಕೆರೆಯ ಅಭಿವೃದ್ಧಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದರು.

ಚಿಕ್ಕಟ್ಟೆ ಅಭಿವೃದ್ಧಿ ಸಂಘದ ಖಜಾಂಚಿ ಸತೀಶ್‌ಕುಮಾರ್‌ ಅವರು ಸಂಘದ ಲೆಕ್ಕಪತ್ರ ಮಂಡಿಸಿ, ಇಲ್ಲಿಯ ತನಕ 4.40 ಲಕ್ಷ ರೂ. ಸಂಗ್ರಹವಾಗಿದ್ದು, 5 ಲಕ್ಷ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿ ನಡೆದಿದೆ ಎಂದು ವಿವರಿಸಿದರು.

ಸಂಘದ ಅಧ್ಯಕ್ಷ ಎಚ್.ಎಸ್‌.ಉಪೇಂದ್ರಾ ಚಾರ್‌ ಮಾತನಾಡಿ, ಕೆರೆಯ ಅಭಿವೃದ್ಧಿಗೆ ಸರ್ಕಾರ ಹಾಗೂ ಸಾರ್ವಜನಿಕರು ನೆರವು ನೀಡಬೇಕೆಂದು ವಿನಂತಿ ಮಾಡಿದರು. ನಗರ ಸಭಾ ಸದಸ್ಯರಾದ ಪ್ರಶಾಂತ್‌ ನಾಗರಾಜ್‌, ರೋಹಿತ್‌ ತಾಜ್‌ ಆಸಿಫ್, ಅಶ್ವಿ‌ನಿ ಮಹೇಶ್‌, ಪ್ರತಿಷ್ಠಾನದ ಕಾರ್ಯದರ್ಶಿ ಎಸ್‌.ಪಿ. ರಾಜೀವೇ ಗೌಡ, ಜನಪ್ರಿಯ ಆಸ್ಪತ್ರೆಯ ಡಾ. ಬಷೀರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ವೈ.ಎನ್‌.ಸುಬ್ಬಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಎಚ್.ವೇದ ಶ್ರೀರಾಜ್‌ ಸ್ವಾಗತಿ ಸಿದರು. ಮಂಜುನಾಥ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅಹಮದ್‌ ಹಗರೆ ಅವರು ಹಸಿರು ಭೂಮಿ ಪ್ರತಿಷ್ಠಾನ ಬೆಳೆದು ಬಂದ ದಾರಿಯ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

1-ruu

RCB ಅಭಿಮಾನಿಗಳನ್ನು ಕಿಚಾಯಿಸಿದ ಗಾಯಕ್ವಾಡ್‌!

BCCI

BCCI; ಜ.12ಕ್ಕೆ ನೂತನ ಕಾರ್ಯದರ್ಶಿ, ಖಜಾಂಚಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.