![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 12, 2019, 10:16 AM IST
ಅರಸೀಕೆರೆ: ನಗರದಲ್ಲಿ ಪ್ರತಿ ಶುಕ್ರವಾರ ನಗರದಲ್ಲಿ ನಡೆಯುತ್ತಿರುವ ಸಂತೆ ವ್ಯಾಪಾರ ಇನ್ನು ಮುಂದೆ ಇತಿಹಾಸದ ಪುಟ ಸೇರುವುದೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಈಗಿನ ಸಂತೆ ಮೈದಾನದಲ್ಲಿ ನಗರಸಭೆ ವತಿಯಿಂದ ಹೈಟೆಕ್ ಮಾರುಕಟ್ಟೆಯ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿರುವುದು ಸಾಕ್ಷಿ ಎಂಬಂತಾಗಿದೆ.
ಉತ್ತಮ ವ್ಯಾಪಾರ: ನಗರದ ಹೃದಯಭಾಗದಲ್ಲಿ ಅನೇಕ ವರ್ಷಗಳಿಂದ ಪ್ರತಿ ಶುಕ್ರವಾರದಂದು ನಡೆಯುತ್ತಿದ್ದ ಸಂತೆ ವ್ಯಾಪಾರ ವ್ಯವಹಾರಕ್ಕೆ ಬೇರೆ ಬೇರೆ ಭಾಗಗಳಿಂದ ನೂರಾರು ಜನರು ಬರುತ್ತಿದ್ದರು. ಸಂತೆಯಲ್ಲಿ ತಾಜಾ ತರಕಾರಿ, ಹಣ್ಣು ಹಂಪಲು ಸೇರಿದಂತೆ ರೈತರಿಗೆ ಅವಶ್ಯವಾಗಿ ಬೇಕಾಗುವ ಕುಡುಗೋಲು, ಎತ್ತಿಗೆ ಮೂಗುದಾರ, ಮರ, ಕುಕ್ಕೆ ಸೇರಿದಂತೆ ಕುಡುಕೆ ಮಡಿಕೆಗಳು ಸಂತೆಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದವು.
ನಗರದ ಜನತೆ ಅಷ್ಟೇ ಅಲ್ಲದೇ ನಗರಕ್ಕೆ ಹೊಂದಿಕೊಂಡಂತಿದ್ದ ಸುತ್ತ ಹತ್ತಾರು ಗ್ರಾಮದ ಜನತೆ ಶುಕ್ರವಾರವಾಯಿತೆಂದರೆ ಸಂತೆಗೆ ತಪ್ಪದೇ ಹಾಜರಾಗಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನ ಖರೀದಿಸುತ್ತಿದ್ದರಿಂದ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು. ಅರಸೀಕೆರೆಯ ಸಂತೆ ವ್ಯಾಪಾರವೆಂದರೆ ಗ್ರಾಹಕರಿಗೆ ಅಷ್ಟೇ ಅಲ್ಲಾ ವ್ಯಾಪಾರಿಗಳಿಗೂ ಅಚ್ಚುಮೆಚ್ಚಾಗಿತ್ತು.
ಶತಮಾನಗಳ ಇತಿಹಾಸ: ನಗರಸಭೆವತಿಯಿಂದ ಹೈಟೆಕ್ ಮಾರುಕಟ್ಟೆ ನಿರ್ಮಾಣದ ನಿಲುವು ಸಾರ್ವ ಜನಿಕ ವಲಯದಲ್ಲಿ ಪರಸ್ಪರಲ್ಲಿ ಪರ ಹಾಗೂ ವಿರೋಧದ ಚರ್ಚೆಗೆ ಗ್ರಾಸವಾಗುತ್ತಿದೆ. ಶತಮಾನಗಳ ಇತಿಹಾಸವಿರುವ ಶುಕ್ರವಾರದ ಸಂತೆಯ ವ್ಯಾಪಾರ ವ್ಯವಹಾರಗಳು ಇನ್ನೂ ಈ ಪ್ರದೇಶದಲ್ಲಿ ನಡೆಯು ವುದಿಲ್ಲ ಎಂಬುದು ಕೆಲವರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾದರೆ ನಗರದ ಅಭಿವೃದ್ಧಿ ದೃಷ್ಟಿಯಿಂದ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗುತ್ತಿ ರುವುದಕ್ಕೆ ಕೆಲವರು ನಗರಸಭೆ ಆಡಳಿತದ ಪರ ಮೆಚ್ಚಿಗೆ ಮಾತುಗಳನ್ನಾಡುತ್ತಿದ್ದಾರೆ.
3.5 ಕೋಟಿ ರೂ. ವೆಚ್ಚ: ಸಾರ್ವಜನಿಕರ ಪರ ಹಾಗೂ ವಿರೋಧದ ನಡುವೆಯು ನಗರಸಭೆ ಆಡಳಿತ ನಗರ ಪುನರುತ್ಥಾನ ಮೂರನೇ ಹಂತದ ಯೋಜನೆಯಡಿ 3.5 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ 115 ವಾಣಿಜ್ಯ ಮಳಿಗೆಗಳ ನಿರ್ಮಾಣದ ಕಾಮಗಾರಿ ಯನ್ನ ಕೈಗೆತ್ತಿಕೊಂಡಿದೆ. ಇನ್ನೂ 6 ತಿಂಗಳಲ್ಲಿ ನಗರದ ಹೃದಯ ಭಾಗದಲ್ಲಿ ಸುಂದರವಾದ, ಸುಸಜ್ಜಿತ ಹೈಟೆಕ್ ಮಾರುಕಟ್ಟೆ ತಲೆ ಎತ್ತಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
•ಅರಸೀಕೆರೆಯಲ್ಲಿ ಶುಕ್ರವಾರದ ಸಂತೆ ವ್ಯಾಪಾರವೆಂದರೆ ಗ್ರಾಹಕರಿಗೆ, ವ್ಯಾಪಾರಿಗಳಿಗೆ ಅಚ್ಚುಮೆಚ್ಚು.
•ಶತಮಾನದ ಇತಿಹಾಸವಿರುವ ಶುಕ್ರವಾರದ ಸಂತೆ ಜಾಗ ತೆರವಿಗೆ ಹಲವರ ಅಸಮಾಧಾನ
•3.5 ಕೋಟಿ ರೂ. ವೆಚ್ಚದಲ್ಲಿ 115 ವಾಣಿಜ್ಯ ಮಳಿಗೆಗಳ ನಿರ್ಮಾಣದ ಕಾಮಗಾರಿ ಆರಂಭ
● ರಾಮಚಂದ್ರ
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.